
ಮುಂಬೈ (ಮಾ. 02): ದೀಪಿಕಾ ಪಡುಕೋಣೆ ಹೊಸ ಅವತಾರದಲ್ಲಿ ತೆರೆ ಮೇಲೆ ಬರುತ್ತಿದ್ದು ಮುಂದಿನ ಸಿನಿಮಾ ’ಚಪ್ಪಕ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಆ್ಯಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಪಾತ್ರವನ್ನು ಮಾಡಲಿದ್ದಾರೆ.
ರಾಜಿ ಖ್ಯಾತಿಯ ಮೇಘನಾ ಗುಲ್ಜಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮೀ ಅಗರ್ ವಾಲ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.
ಆ್ಯಸಿಡ್ ದಾಳಿಯ ನಂತರ ಎದುರಾಗುವ ಪರಿಸ್ಥಿತಿಯನ್ನು ಎದುರಿಸಲು ಧೈರ್ಯ, ಮನೋಸ್ಥೈರ್ಯ ಇರಬೇಕು. ಇಂತದ್ದೊಂದು ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇವೆ. ಈ ಚಿತ್ರಕ್ಕೆ ದೀಪಿಕಾ ಹೆಚ್ಚು ಹೊಂದುತ್ತಾರೆ. ಹಾಗಾಗಿ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ನಿರ್ದೇಶಕಿ ಮೇಘನಾ ಹೇಳಿದ್ದಾರೆ.
ಸಿನಿಮಾ ಆಗಲಿದೆ ವೀರಪುತ್ರ ಅಭಿನಂದನ್ ಸಾಹಸಗಾಥೆ
ಬಾಲಿಕಾ ವಧು ಖ್ಯಾತಿಯ ವಿಕ್ರಾಂತ್ ಮಾಸಿ ದೀಪಿಕಾಗೆ ಸಾಥ್ ನೀಡಲಿದ್ದಾರೆ.
ಈ ಚಿತ್ರವನ್ನು ಒಪ್ಪಿಕೊಂಡ ದೀಪಿಕಾ ತಮಾಷೆಯಾಗಿ ಹೇಳಿದ್ದು ಹೀಗೆ; ಈ ಚಿತ್ರದಲ್ಲಿ ಮಾವಿನ ಕಾಯಿಗೆ ಉಪ್ಪು. ಮೆಣಸಿನ ಪುಡಿ ಹಾಕಿಕೊಂಡು ತಿನ್ನುವ ಸೀನ್ ಇದೆ. ಮಾವಿನಕಾಯಿ ತಿನ್ನುವುದಕ್ಕಾಗಿಯೇ ನಾನು ಈ ಚಿತ್ರ ಒಪ್ಪಿಕೊಂಡೇ ಎಂದು ದೀಪಿಕಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.