ಸಿನಿಮಾ ಆಗಲಿದೆ ವೀರಪುತ್ರ ಅಭಿನಂದನ್ ಸಾಹಸಗಾಥೆ

By Web Desk  |  First Published Mar 1, 2019, 5:15 PM IST

ಸರ್ಜಿಕಲ್ ಸ್ಟ್ರೈಕ್ ಆಧಾರಿತ ಉರಿ ಸಿನಿಮಾ ಈಗಾಗಲೇ ಭರ್ಜರಿ ಯಶಸ್ಸು ಗಳಿಸಿದೆ. ಇದೇ ಸಂದರ್ಭದಲ್ಲಿ ಪುಲ್ವಾಮಾ ದಿ ಟೆರರ್ ಅಟ್ಯಾಕ್, ಪುಲ್ವಾಮಾ ಅಟ್ಯಾಕ್, ಸರ್ಜಿಕಲ್ ಸ್ಟ್ರೈಕ್ -2, ಸರ್ಜಿಕಲ್ ಸ್ಟ್ರೈಕ್ ಅಂಡ್ ಬಾಲ್ ಕೋಟ್ ಎಂಬ ಟೈಟಲ್ ಬಗ್ಗೆ ನಿರ್ಮಾಪಕರು ಮುಗಿ ಬಿದ್ದಿದ್ದಾರೆ ಎನ್ನಲಾಗಿದೆ.


ಮುಂಬೈ (ಮಾ. 01): ನಮ್ಮ ನೆಲದ ಹೆಮ್ಮೆಯ ವೀರ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ. ಅವರ ಸಾಹಸ, ಕೆಚ್ಚೆದೆ, ಧೀರತನದ ಬಗ್ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಅಭಿಮಾನ್ ವರ್ಧಮಾನ್ ಹೀರೋ ಆಫ್ ದಿ ನೇಶನ್ ಆಗಿದ್ದಾರೆ. 

ಒಂದು ಕಡೆ ಸರ್ಜಿಕಲ್ ವೀರರು, ಮತ್ತೊಂದು ಕಡೆ ಮೋದಿ ಇರುವರು: ಸೀರೆಯಲ್ಲಿ ದೇಶಭಕ್ತಿಯೇ ಉಸಿರು!

Tap to resize

Latest Videos

ಅಭಿನಂದನ್ ಕಥೆ ತುಂಬಾ ರೋಚಕವಾಗಿದೆ. ಅವರ ಸಾಹಸದ ಬಗ್ಗೆ ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಇವರ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದರೆ ಹೇಗೆ ಎಂಬ ಯೋಚನೆ ಬಾಲಿವುಡ್ ನಿರ್ಮಾಪಕರು ಲೆಕ್ಕಾಚಾರದಲ್ಲಿದ್ದಾರೆ.

ಭಾರತ ಪಾಕ್‌ ಪಡೆಯನ್ನು ಹಿಮ್ಮೆಟ್ಟಿಸಿದ್ದು ಹೇಗೆ? 

ಸರ್ಜಿಕಲ್ ಸ್ಟ್ರೈಕ್ ಆಧಾರಿತ ಉರಿ ಸಿನಿಮಾ ಈಗಾಗಲೇ ಭರ್ಜರಿ ಯಶಸ್ಸು ಗಳಿಸಿದೆ. ಇದೇ ಸಂದರ್ಭದಲ್ಲಿ ಪುಲ್ವಾಮಾ ದಿ ಟೆರರ್ ಅಟ್ಯಾಕ್, ಪುಲ್ವಾಮಾ ಅಟ್ಯಾಕ್, ಸರ್ಜಿಕಲ್ ಸ್ಟ್ರೈಕ್ -2, ಸರ್ಜಿಕಲ್ ಸ್ಟ್ರೈಕ್ ಅಂಡ್ ಬಾಲ್ ಕೋಟ್ ಎಂಬ ಟೈಟಲ್ ಬಗ್ಗೆ ನಿರ್ಮಾಪಕರು ಮುಗಿ ಬಿದ್ದಿದ್ದಾರೆ ಎನ್ನಲಾಗಿದೆ. ಟೈಟಲ್ ರಿಜಿಸ್ಟರ್ ಗೆ ಪ್ರೊಡಕ್ಷನ್ ಸಂಸ್ಥೆಗಳು ಮುಂಬೈ ಫಿಲಂ ಚೇಂಬರ್ ಮುಂದೆ ಬಂದಿವೆ ಎನ್ನಲಾಗಿದೆ.  

ಶಾಂತಿಗಾಗಿ ಕಳುಹಿಸಿದ್ದು: ಅಭಿನಂದನ್ ಬಿಡುಗಡೆಯನ್ನು ಪಾಕ್ ಮಾಧ್ಯಮ ಬಿಂಬಿಸಿದ್ದು ಹೀಗೆ! 

ಇನ್ನೊಂದೆಡೆ ತೆಲುಗು ನಟ ಮಹೇಶ್ ಬಾಬು 26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ಯೋಧ ಸಂದೀಪ್ ಉನ್ನಿ ಕೃಷ್ಣನ್ ಕುರಿತು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ  ಮೇಜರ್ ಎಂದು ಹೆಸರಿಡಲಾಗಿದ್ದು ಹಿಂದಿ ಮತ್ತು ತೆಲುಗಿನಲ್ಲಿ ಮೂಡಿ ಬರಲಿದೆ. 

 


 

click me!