
ಬಾಲಿವುಡ್ ನಟಿ ರವೀನಾ ಟಂಡನ್ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ, ಪತ್ತರ್ ಕೇ ಫೂಲ್ ಸಿನಿಮಾದ ಮೂಲಕ 1991ರಲ್ಲಿ ಬಾಲಿವುಡ್ ಪ್ರವೇಶಿಸಿದ ರವೀನಾ ಟಂಡನ್ ತಮ್ಮ ಚೊಚ್ಚಲ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು. ಮತ್ತೆಂದೂ ತಿರುಗಿ ನೋಡದ ರವೀನಾ ಟಂಡನ್ 90ರ ದಶಕದ ಜನಪ್ರಿಯ ನಟಿಯರಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಪ್ರಸ್ತುತ 52ರ ಹರೆಯದ ರವೀನಾ ಈ ವಯಸ್ಸಿನಲ್ಲೂ ಹರೆಯದ ಹುಡುಗಿಯಂತೆ ಕಾಣುತ್ತಾ ತಮ್ಮ ಮಗಳಿಗೂ ಸೌಂದರ್ಯದಲ್ಲಿ ಪೈಪೋಟಿ ನೀಡ್ತಿದ್ದಾರೆ. ತಮ್ಮ ಮಾಸದ ಸೌಂದರ್ಯದ ಮೂಲಕ ಹರೆಯದ ಹುಡುಗರನ್ನು ಕೂಡ ಸೆಳೆಯುವುದರಲ್ಲಿ ಡೌಟೇ ಇಲ್ಲ ಈ ಕಿಲಾಡಿಯೋಂಕಾ ಕಿಲಾಡಿ ನಟಿ. ಇಂತಹ ರವೀನಾ ಟಂಡನ್ ಮಗಳು ರಾಶಾ ತದ್ನಾನಿ ಕೂಡ ಈಗ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ರಾಶಾ ಹಾಗೂ ಅಜಯ್ ದೇವಗನ್ ಅಳಿಯ ಅಮನ್ ದೇವಗನ್ ನಟನೆಯ ಅಜಾದ್ ಸಿನಿಮಾ ಕಳೆದ ಜನವರಿ 17 ರಂದು ಥಿಯೇಟರ್‌ನಲ್ಲಿ ಬಿಡುಗಡೆಯೂ ಆಗಿದೆ. ಆದರೆ ಈ ಸಿನಿಮಾ ಥಿಯೇಟರ್‌ನಲ್ಲಿ ಅಂತಹ ಹಿಟ್ ಏನೂ ಆಗಿಲ್ಲದಿದ್ದರೂ ರಾಶಾ ತದ್ನಾನಿ ನಟನೆಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಅಜಾದ್ ಸಿನಿಮಾದ ಊಯಮ್ಮ ಹಾಡು ಈಗಾಗಲೇ ಸಖತ್ ಹಿಟ್ ಆಗಿದ್ದು, ಈ ಹಾಡಿಗೆ ರಾಶಾ ತದ್ನಾನಿ, ತಮನ್ನಾ ಭಟಿಯಾ ಹಾಗೂ ನಟ ವಿಜಯ್ ವರ್ಮಾ ಜೊತೆ ಸೇರಿ ಹೆಜ್ಜೆ ಹಾಕಿದ್ದ ವೀಡಿಯೋ ಕೂಡ ಸಖತ್ ವೈರಲ್ ಆಗಿತ್ತು. ಈಗ ರಾಶಾ ವಿಕ್ಕಿ ಕೌಶಲ್ ಅವರ ಸಿನಿಮಾದ 'ತೌಬಾ ತೌಬಾ' ಹಾಡಿಗೆ ತನ್ನ ಡಾನ್ಸ್ ಮಾಸ್ಟರ್ ಜೊತೆ ಸಖತ್ ಆಗಿ ಡಾನ್ಸ್ ಮಾಡಿದ್ದು, ವೀಡಿಯೋ ನೋಡಿದ ನೆಟ್ಟಿಗರು ರಾಶಾ ಡಾನ್ಸ್ ಟ್ಯಾಲೆಂಟ್‌ಗೆ ಭೇಷ್ ಎಂದಿದ್ದಾರೆ.
ರಾಶಾಗೆ ಅಮ್ಮನ ಸೌಂದರ್ಯ ಹಾಗೂ ಪ್ರತಿಭೆ ಎರಡೂ ರಕ್ತಗತವಾಗಿ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಸ್ಟಾರ್ ಕಿಡ್‌ಗಳು ತುಂಬಾ ಜನ ಇದ್ದರೂ ನಿಜವಾದ ಪ್ರತಿಭೆ ಇರೋದು ರಾಶಾಗೆ ಮಾತ್ರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಮ್ಮನಂತೆಯೇ ಈಕೆಯೂ ಸಖತ್ ಚಾರ್ಮಿಂಗ್ ಆಗಿದ್ದಾಳೆ. ತುಂಬಾ ಅದ್ಭುತವಾಗಿ ಡಾನ್ಸ್ ಮಾಡ್ತಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಕೂಡ ರಾಶಾ ಡಾನ್ಸ್ ಮೂವ್ಸ್‌ಗೆ ಫಿದಾ ಆಗಿದ್ದು, 'ಅಬ್ ಬೋಸ್ಕೋ ಸರ್ ಮುಜ್ ಸೆ ಉಯ್ಯಮ್ಮಾ ಡಾನ್ಸ್ ನಾ ಕರ್ವಾ ದೇ ಟೂ ಸ್ಮೂತ್ ರಾಶಾ ಕೀಪ್ ಶೈನಿಂಗ್' ಎಂದು ಕಾಮೆಂಟ್ ಮಾಡಿದ್ದಾರೆ, ಅಂದರೆ ಈಗ ಬೋಸ್ಕೋ ಸರ್ ನನ್ನ ಬಳಿ ಉಯ್ಯಮ್ಮಾ ಹಾಡಿಗೆ ಡಾನ್ಸ್ ಮಾಡಿಸ್ಬೇಡಿ, ರಾಶಾ ತದ್ನಾನಿ ತುಂಬಾ ಸ್ಮೂತ್ ಆಗಿ ಡಾನ್ಸ್ ಮಾಡುತ್ತಿದ್ದಾರೆ, ಹೀಗೆ ಶೈನ್ ಆಗ್ತಾ ಇರಿ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈಕೆ ಡಾನ್ಸ್ ನೋಡಿದ ಮೇಲೆ ಉಳಿದ ಸ್ಟಾರ್ ಕಿಡ್‌ಗಳ ಕೆರಿಯರ್ ಕಷ್ಟದಲ್ಲಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆ ಹೃತಿಕ್ ರೋಷನ್‌ನ ಫಿಮೇಲ್ ವರ್ಷನ್ ತರ ಇದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ರಾಶಾ ನಟನೆ ಹಾಗೂ ಡಾನ್ಸ್‌ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈಕೆ ಅಮ್ಮನ ಮೀರಿಸುವ ಮಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯ. ಅಂದಹಾಗೆ ರಾಶಾ ಡಾನ್ಸ್ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.