ದಶಕದಿಂದ ನಟಿ ಕತ್ರಿನಾ ಕೈಫೇ ಇವರಿಗೆ ದೇವರು! ಪ್ರತಿನಿತ್ಯ ವಿಶೇಷ ಪೂಜೆ- ಪುನಸ್ಕಾರ... ಇದೆಂಥ ಅಭಿಮಾನ ಅಂತೀರಾ?
ಯಾರ ಬಗ್ಗೆಯಾದರೂ ಅಭಿಮಾನ ಅಭಿಮಾನವಾಗಿದ್ದರೆ ಚೆನ್ನ. ಆದರೆ ಚಿತ್ರ ನಟರ ವಿಷಯದಲ್ಲಿ ಹಲವು ಅಭಿಮಾನಿಗಳದ್ದು ಕೇವಲ ಅಭಿಮಾನವಲ್ಲ, ಅದು ಅತಿರೇಕ ಎನ್ನಿಸುವುದು ಉಂಟು. ಸಿನಿಮಾ ತಾರೆಯರನ್ನು ದೇವರು ಎಂದು ಬಗೆಯುವವರು, ಅವರನ್ನು ನೋಡುವುದೇ ತಮ್ಮ ಜೀವನದ ಬಹುದೊಡ್ಡ ಕನಸು ಎಂದುಕೊಳ್ಳುವವರು, ಅವರ ಜೊತೆ ಒಂದು ಫೋಟೋ ತೆಗೆಸಿಕೊಂಡರೆ ಏಳೇಳು ಜನ್ಮದ ಪಾಪ ಕಳೆದಂತೆ ಎನ್ನುವ ದೊಡ್ಡ ಅತಿರೇಕದ ಅಭಿಮಾನಿಗಳು ಇದ್ದಾರೆ. ತಮ್ಮ ನೆಚ್ಚಿನ ನಟ-ನಟಿಯರ ಹೆಸರನ್ನು ಮೈಮೇಲೆ ಕೆತ್ತಿಕೊಳ್ಳುವುದು, ರಕ್ತದಿಂದ ಅವರಿಗೆ ಪತ್ರ ಬರೆಯುವುದು, ಅವರ ಒಂದೇ ಒಂದು ನೋಟಕ್ಕಾಗಿ ಪ್ರಾಣವನ್ನೇ ಒತ್ತೆ ಇಟ್ಟು ಸಾಹಸಕ್ಕೆ ಇಳಿಯುವುದು... ಒಂದೋ ಎರಡೋ...
ಇದೀಗ ಅಂಥದ್ದೇ ಒಂದು ಉದಾಹರಣೆ ಹರಿಯಾಣದಲ್ಲಿ ಕಂಡು ಬಂದಿದೆ. ದಂಪತಿಯೊಬ್ಬರ ಅತಿರೇಕದ ಅಭಿಮಾನಕ್ಕೆ ಉದಾಹರಣೆ ಇದು. ಹಾಗೆಂದು ಇವರು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವಂಥ ಯಾವುದೇ ಕಾರ್ಯ ಮಾಡಿಲ್ಲ. ಬದಲಿಗೆ ತಮ್ಮ ದೇವರ ಮನೆಯಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಫೋಟೋ ಇಟ್ಟು ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ. ಹಾಗಂತ ಈ ಪೂಜೆ, ಪುನಸ್ಕಾರ ಇಂದು ನಿನ್ನೆಯದ್ದಲ್ಲ. ಬದಲಿಗೆ ಕಳೆದ ಹನ್ನೊಂದು ವರ್ಷಗಳಿಂದ ಅವರು ಇದೇ ರೀತಿ ಮಾಡುತ್ತಿದ್ದಾರೆ.
ಕತ್ರಿನಾ ಕೈಫ್ ಹುಟ್ಟುಹಬ್ಬದಂದೇ ಮಂಚದ ವಿಷಯ ರಿವೀಲ್ ಮಾಡಿದ ಪತಿ ವಿಕ್ಕಿ ಕೌಶಲ್!
ಹಾಗೆಂದು ನಟಿಯ ಬಗ್ಗೆ ಏಕೆ ಇಷ್ಟು ಅಭಿಮಾನ ಎನ್ನುವುದಕ್ಕೆ ಇವರ ಬಳಿ ಉತ್ತರವಿಲ್ಲ. ಕತ್ರಿನಾ ಹರಿಯಾಣದವರೂ ಅಲ್ಲ. ಆದರೂ ಈ ದಂಪತಿಗೆ ಆಕೆಯನ್ನು ಕಂಡರೆ ಮೋಹವಂತೆ. ಆಕೆಯೇ ಅವರ ದೇವರಂತೆ! ಬಂಟು ಮತ್ತು ಅವರ ಪತ್ನಿ ಸಂತೋಷಿ ಎಂಬ ಹರಿಯಾಣದ ಚಾರ್ಕಿ ದಾದ್ರಿ ಜಿಲ್ಲೆಯ ಧನಿ ಪೋಗಟ್ ಹಳ್ಳಿಯ ನಿವಾಸಿಗಳು ಹೀಗೊಂದು ಕಾರ್ಯದಲ್ಲಿ ತೊಡಗಿದ್ದಾರೆ. ಕತ್ರಿನಾ ಅವರ ಹುಟ್ಟುಹಬ್ಬವನ್ನು ಈ ದಂಪತಿ ಭರ್ಜರಿಯಾಗಿ ಆಚರಿಸುತ್ತಾರೆ ಕೂಡ! ಕತ್ರಿನಾ ಹುಟ್ಟುಹಬ್ಬದಂದು ಕೇಕ್ ಕತ್ತರಿಸಿ ಇಡೀ ಹಳ್ಳಿಗೆ ಲಡ್ಡು ವಿತರಿಸುತ್ತಾರಂತೆ.
ಅಂದಹಾಗೆ, ಈ ದಂಪತಿಯ ಜೀವನದ ಒಂದೇ ಒಂದು ಆಸೆ ಕತ್ರಿನಾ ಕೈಫ್ ಅವರನ್ನು ಭೇಟಿಯಾಗಬೇಕು ಎನ್ನುವುದು. ನನಗೆ ಚಿಕ್ಕಂದಿನಿಂದಲೂ ಕತ್ರಿನಾ ಎಂದರೆ ತುಂಬಾ ಪ್ರೀತಿ. 13-14 ವರ್ಷ ವಯಸ್ಸಿನಿಂದಲೂ ಆಕೆಯ ಹುಟ್ಟುಹಬ್ಬ ಆಚರಿಸುತ್ತಾ ಬಂದಿದ್ದೇನೆ. ಕತ್ರಿನಾ ಎಂದರೆ ಆಗಿನಿಂದಲೂ ನನಗೆ ಅಭಿಮಾನ. ಆಕೆ ನನಗೆ ದೇವತೆ ಸಮಾನ. ಮದುವೆಯಾದ ಮೇಲೆ ನನ್ನ ಪತ್ನಿಯೂ ಈಗ ಈ ಹಬ್ಬದಲ್ಲಿ ಭಾಗಿಯಾಗುತ್ತಿದ್ದಾಳೆ ಎನ್ನುವ ಬಂಟು, ಸಾಯುವ ಮೊದಲು ಒಮ್ಮೆಯಾದರೂ ನಟಿ ನಮ್ಮನ್ನು ಭೇಟಿಯಾಗುತ್ತಾಳೆ ಎನ್ನುವ ಭರವಸೆ ಈ ದಂಪತಿಗೆ ಇದೆ.
ಕತ್ರಿನಾಗೆ ಹುಟ್ಟುಹಬ್ಬ ಸಂಭ್ರಮ: ಅಪ್ಪ ಮುಸ್ಲಿಂ, ಅಮ್ಮ ಕ್ರೈಸ್ತ... ನಟಿ ಭಾರತದ ಪ್ರಜೆಯೇ ಅಲ್ಲ! ರೋಚಕ ಸ್ಟೋರಿಯಿದು..