ಬ್ಲೌಸ್ ಇಲ್ಲದೇ ಸೀರೆ ಧರಿಸಿ, ಕಾನ್ಫಿಡೆನ್ಸ್ ಇಸ್ ಸೆಕ್ಸಿ ಎಂದ ರಾಗಿಣಿ ದ್ವಿವೇದಿ

By Mahmad Rafik  |  First Published Jul 18, 2024, 10:29 PM IST

ಮೂಗುತಿ ಹೊರತುಪಡಿಸಿ ಬೇರಾವ ಆಭರಣವನ್ನು ರಾಗಿಣಿ ದ್ವಿವೇದಿ ಧರಿಸದೇ ನಿರಾಭರಣ ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಕೈಯಲ್ಲೊಂದು ದೊಡ್ಡದಾದ ಬಳೆ ಹಾಕಿ, ಕಣ್ಣಿನಲ್ಲಿಯೇ ಮಾದಕನೋಟ ಬೀರಿದ್ದಾರೆ.


ಬೆಂಗಳೂರು: ಚಂದನವನದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Actress Ragini Dwivedi) ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳ ಮುಖೇನ ಸಂಚಲನ ಸೃಷ್ಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಈಜುಕೊಳದಿಂದ ಹೊರ ಬಂದು ಚಳಿಗಾಲದಲ್ಲಿ ಹುಡುಗರಿಗೆ ಬಿಸಿಯಾದ ನಶೆ ಏರಿಸಿದ್ದರು. 209ರಲ್ಲಿ ತೆರೆಕಂಡ ವೀರ ಮದಕರಿ ಸಿನಿಮಾ (Veera Madakari Cinema)  ಮೂಲಕ ಚಂದನವನಕ್ಕೆ (Sandalwood Actress) ಕಾಲಿಟ್ಟ ಪಂಜಾಬಿ ಕುಡಿಯೇ ರಾಗಿಣಿ ದ್ವಿವೇದಿ. ಮೊದಲ ಸಿನಿಮಾದಲ್ಲಿ ರಾಗಿಣಿ ಕಂಡು ಅಭಿಮಾನಿಗಳು ಫಿದಾ ಆಗಿದ್ದರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ರಾಗಿಣಿ ದ್ವಿವೇದಿ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ (Ragini Dwivedi Cine and Personal Life) ಸಾಕಷ್ಟು ಏರಿಳಿತ ಕಂಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ರಾಗಿಣಿ ದ್ವಿವೇದಿ ಜೈಲು ವಾಸ ಸಹ ಅನುಭವಿಸಿದ್ದಾರೆ.

ಜೈಲಿನಿಂದ ಹೊರ ಬಂದ ಬಳಿಕ ರಾಗಿಣಿ ದ್ವಿವೇದಿ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ರಾಗಿಣಿ ದ್ವಿವೇದಿ, ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿಕೊಳ್ಳುತ್ತಿರುತ್ತಾರೆ. ಸಖತ್ ಸ್ಟೈಲಿಶ್ ಆಗಿರುವ ರಾಗಿಣಿ ದ್ವಿವೇದಿ ಮಾಡರ್ನ್ ಮತ್ತು ಟ್ರೆಡಿಷನಲ್ ಲುಕ್‌ನಲ್ಲಿ ಕಂಗೊಳಿಸುತ್ತಿರುತ್ತಾರೆ. ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ.

Tap to resize

Latest Videos

undefined

ಆತ್ಮವಿಶ್ವಾಸದಲ್ಲಿಯೇ ಮಾದಕತೆ

ಇದೀಗ ಬ್ಲೌಸ್ ಇಲ್ಲದೇ ಕೆಂಪು ಸೀರೆ ಧರಿಸಿರುವ ರಾಗಿಣಿ ದ್ವಿವೇದಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೂಗುತಿ ಹೊರತುಪಡಿಸಿ ಬೇರಾವ ಆಭರಣವನ್ನು ರಾಗಿಣಿ ದ್ವಿವೇದಿ ಧರಿಸದೇ ನಿರಾಭರಣ ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಕೈಯಲ್ಲೊಂದು ದೊಡ್ಡದಾದ ಬಳೆ ಹಾಕಿ, ಕಣ್ಣಿನಲ್ಲಿಯೇ ಮಾದಕನೋಟ ಬೀರಿದ್ದಾರೆ. ರಾಗಿಣಿ ದ್ವಿವೇದಿ ಮಿಂಚಿನ ನೋಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಆತ್ಮವಿಶ್ವಾಸದಲ್ಲಿಯೇ ಮಾದಕತೆ. ಅದು ನನ್ನಲ್ಲಿದೆ ಎಂಬ ಸಾಲನ್ನು ರಾಗಿಣಿ ದ್ವಿವೇದಿ ಬರೆದುಕೊಂಡಿದ್ದಾರೆ. 

ಲೆಹೆಂಗಾ ಡ್ರೆಸ್‌ ತೊಟ್ಟು ಹಾಟ್ ಲುಕ್ ಕೊಟ್ಟ ರಾಗಿಣಿ ದ್ವಿವೇದಿ: ತುಪ್ಪದ ಬೆಡಗಿ ಮುಖ ನೋಡಿ ನೆಟ್ಟಿಗರು ಹೀಗನ್ನೋದಾ!

ಈ ಫೋಟೋಗಳಿಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದು,  ರಾಣಿಯ ರೀತಿ ಕಾಣಿಸುತ್ತಿದ್ದೀರಿ ಅಂತ ಕಮೆಂಟ್ ಮಾಡಿದ್ದಾರೆ. ಹಲವು ಬಳಕೆದಾರರು ನಿಮ್ಮನ್ನು ಮತ್ತೆ ತರೆ ಮೇಲೆ ನೋಡೋದು ಯಾವಾಗ ಅಂತ ಕೇಳುತ್ತಿದ್ದಾರೆ. 

ರಾಜಕುಮಾರಿ ಗೊಂಬೆಗೆ ದೃಷ್ಟಿ ಆಗುತ್ತೆ 

ರಾಗಿಣಿ ದ್ವಿವೇದಿ ಆಹಾರ ಪ್ರಿಯೆಯಾಗಿದ್ದು, ಅಡುಗೆ ವಿಡಿಯೋಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಿದ್ದರು. ಆದ್ರೆ ಕೆಲವು ದಿನಗಳಿಂದ ಅಡುಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿಲ್ಲ. ಈ ಫೋಟೋಗೆ ಕಮೆಂಟ್ ಮಾಡಿರುವ ಅಭಿಮಾನಿಯೊಬ್ಬರು, ರಾಗಿಣಿ ಮೇಡಮ್ ನಾನು ನಿಮ್ಮ ಅಭಿಮಾನಿ. ದಯವಿಟ್ಟು ಅಡುಗೆ ವಿಡಿಯೋಗಳನ್ನು ದಯವಿಟ್ಟು ಶೇರ್ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಲವ್ ಯು ಮ್ಯಾಮ್, ಸೋ ಕ್ಯೂಟ್, ಸೀರೆಯಲ್ಲಿ ನಿಮ್ಮನ್ನು ನೋಡುವುದೇ ಚೆಂದ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಹುಚ್ಚು ಅಭಿಮಾನಿ, ನನ್ನ ತುಪ್ಪದ ಹುಡುಗಿ.. ರಾಜಕುಮಾರಿ ಗೊಂಬೆಗೆ ದೃಷ್ಟಿ ಆಗುತ್ತೆ ಎಂದು ಕಾಳಜಿ ತೋರಿಸಿದ್ದಾರೆ.

ಮೈಚಳಿ ಬಿಟ್ಟು ಈಜುಕೊಳದಲ್ಲಿ ಫೋಟೋಶೂಟ್​ ಮಾಡಿಸಿದ ರಾಗಿಣಿ: ತುಪ್ಪದ ಬೆಡಗಿ ಪೋಸ್​ ಕಂಡು ಪಡ್ಡೆಗಳ ನಿದ್ದೆ ಉಡೀಸ್​

ನೆಟ್ಟಿಗರಿಂದ ಪೋಲಿ ಕಮೆಂಟ್‌ಗಳು

ರಾಗಿಣಿ ದ್ವಿವೇದಿ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಸಪೂರ ಮೈಕಟ್ಟು ಹೊಂದಿರುವ ರಾಗಿಣಿ ದ್ವಿವೇದಿ, ಜಿಮ್‌ನಲ್ಲಿ ಬೆವರು ಹರಿಸುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ನೀಲಿ ಬಣ್ಣದ ಬಿಕಿನಿಯಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದರು. ರಾಗಿಣಿ ಅವರ ಹಾಟ್ನೆಸ್‌ ಕಂಡ ನೆಟ್ಟಿಗರು ಪೋಲಿ ಕಮೆಂಟ್‌ಗಳನ್ನು ಮಾಡಿದ್ದರು.

click me!