ಅಮಿತಾಭ್​ ಮಗನಾದರೂ ಯಾರೂ ನನ್ನನ್ನು ಚಿತ್ರಕ್ಕೆ ಸೇರಿಸಿಕೊಳ್ಳಲೇ ಇಲ್ಲ: ಆ ದಿನಗಳ ನೆನೆದ ಅಭಿಷೇಕ್​!

By Suvarna News  |  First Published Dec 26, 2023, 7:12 PM IST

ಅಮಿತಾಭ್​ ಮಗನಾದರೂ ಯಾರೂ ನನ್ನನ್ನು ಚಿತ್ರಕ್ಕೆ ಸೇರಿಸಿಕೊಳ್ಳಲೇ ಇಲ್ಲ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ  ಅಭಿಷೇಕ್ ಬಚ್ಚನ್​. ಅವರು ಹೇಳಿದ್ದೇನು?   
 


ಸ್ಟಾರ್​ ಕಿಡ್​ ಆಗಿದ್ದರೆ ಚಿತ್ರರಂಗದಲ್ಲಿ ಅವಕಾಶಗಳು ಸಾಕಷ್ಟು ಸಿಗುತ್ತವೆ ಎಂಬ ಮಾತಿದೆ. ಇದೇ ಕಾರಣಕ್ಕೆ ನೆಪೋಟಿಸಂ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಲೇ ಇರುತ್ತದೆ. ಅದರಲ್ಲಿಯೂ ಅಮಿತಾಭ್​ ಬಚ್ಚನ್​ನಂಥ ಸ್ಟಾರ್​ ನಟನಿಗೆ ಇದು ಬಲು ಸುಲಭವೇ ಸರಿ ಎಂದುಕೊಳ್ಳಬಹುದು. ಆದರೆ ಅಸಲಿಗೆ ಅಮಿತಾಭ್​ ಬಚ್ಚನ್​ ಪುತ್ರ ಅಭಿಷೇಕ್​ ಬಚ್ಚನ್​ ಅವರಿಗೆ ಚಿತ್ರರಂಗದ ಎಂಟ್ರಿ ಅಷ್ಟು ಸುಲಭವಾಗಿರಲಿಲ್ಲವಂತೆ! ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಇದೀಗ ಅಭಿಷೇಕ್​ ಅವರ ಚಿತ್ರರಂಗದ ಎಂಟ್ರಿಯ ಕುರಿತ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

 ಸಿನಿಮಾ ಮ್ಯಾಗಜಿನ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಷೇಕ್​ ಬಚ್ಚನ್​ ಅವರು, ತಾವು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಎಷ್ಟು ಕಷ್ಟವಾಯಿತು ಎಂದು ಹೇಳಿಕೊಂಡಿದ್ದಾರೆ. ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಆಗ ಮೀಡಿಯಾಗಳಲ್ಲಿ ಅಮಿತಾಭ್​ ಬಚ್ಚನ್‌ ಮಗ ಸಿನಿಮಾ ಪ್ರವೇಶ ಎಂದೆಲ್ಲಾ ಹೆಡ್​ಲೈನ್​ನಲ್ಲಿ ಸುದ್ದಿ ಬಂದಿದ್ದವು. ಅಮಿತಾಭ್​ ಅವರ ಮಗನಾಗಿರುವ ಕಾರಣ ತಮಗೆ ಅವಕಾಶ ಸಿಕ್ಕಿರುವುದಾಗಿ ಬರೆಯಲಾಗಿತ್ತು. ಆದರೆ ಅಸಲಿಯತ್ತು ಹೇಳಬೇಕೆಂದರೆ,   ಯಾವುದೇ ಸಿನಿಮಾ ನಿರ್ದೇಶಕರು  ನನ್ನನ್ನು ಲಾಂಚ್‌ ಮಾಡಲು ಮುಂದೆ ಬರಲಿಲ್ಲ. ಬಹುತೇಕ ನಿರ್ದೇಶಕರು ನನಗೆ ಬ್ರೇಕ್​  ಕೊಡಲು ಮುಂದೆ ಬರಲಿಲ್ಲ. ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ನನಗೆ ತುಂಬಾ ಕಷ್ಟವಾಗಿತ್ತು ಎಂದಿದ್ದಾರೆ.

Tap to resize

Latest Videos

ಮಾಜಿ ಪತಿಯ ಮದ್ವೆ ಆಗ್ತಿದ್ದಂತೆಯೇ, ನಾಯಿ ಜೊತೆ ಪಾರ್ಟಿಗೆ​ ಹೋದ ಮಲೈಕಾ ಅರೋರಾ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?
 
"ನಾನು ಸಿನಿಮಾರಂಗಕ್ಕೆ ಪ್ರವೇಶಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು, ಈ ಕುರಿತು ಎಲ್ಲೆಡೆ ಉತ್ಸಾಹ ಇತ್ತು. ನಾನು ಬಾಲಕನಾಗಿದ್ದ ಕಾರಣ ಚರ್ಚೆಗಳು ಬೇಕಾದ್ದಷ್ಟು ನಡೆಯುತ್ತಿದ್ದವು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಯಾವುದೇ ನಿರ್ದೇಶಕರು ನನ್ನನ್ನು ಸಿನಿಮಾಕ್ಷೇತ್ರಕ್ಕೆ ಲಾಂಚ್‌ ಮಾಡಲು ಮುಂದೆ ಬರಲಿಲ್ಲ. ನಾನು ಆ ಸಂದರ್ಭದಲ್ಲಿ ಬಹುತೇಕ ಎಲ್ಲಾ ನಿರ್ದೇಶಕರನ್ನು ಭೇಟಿಯಾಗಿದ್ದೆ. ಅವರೆಲ್ಲರೂ ತುಂಬಾ ಗೌರವದಿಂದಲೇ ನನಗೆ ಅವಕಾಶ ನೀಡಲು ನಿರಾಕರಿಸಿದರು. ನಿಮ್ಮನ್ನು ಲಾಂಚ್‌ ಮಾಡುವ ಜವಾಬ್ದಾರಿ ನಮಗೆ ಬೇಡ ಎಂದು ಅವರೆಲ್ಲರೂ ನೇರವಾಗಿಯೇ ಹೇಳಿದ್ದರು  ಎಂದು ಅಭಿಷೇಕ್‌ ಬಚ್ಚನ್‌ ಹೇಳಿದ್ದಾರೆ.

 ನಂತರ ತಾವು ಚಿತ್ರರಂಗ ಪ್ರವೇಶಿಸಿದ್ದರ ಕುರಿತು ಮಾಹಿತಿ ನೀಡಿದ ಅಭಿಷೇಕ್​ ಅವರು, ಯಾವುದೇ ನಿರ್ದೇಶಕ ಇವರನ್ನು ಲಾಂಚ್‌ ಮಾಡಲು ಮುಂದೆ ಬರದ ಕಾರಣ, ನಾನು ನನ್ನ ಸ್ನೇಹಿತ ರಾಕೇಶ್‌ ಓಂಪ್ರಕಾಶ್‌ ಮೆಹ್ರಾ ಜತೆಸೇರಿ ಸ್ವತಃ ಸಿನಿಮಾ ಮಾಡಲು ಪ್ರಯತ್ನಿಸಿದೆ. ರಾಕೇಶ್‌ ಕೂಡ ನಿರ್ದೇಶಕನಾಗಲು ಮೊದಲ ಬಾರಿಗೆ ಪ್ರಯತ್ನಿಸುತ್ತಿದ್ದ. ಜಾಹೀರಾತಿನಲ್ಲಿ ಆತನಿಗೆ ಸಾಕಷ್ಟು ಅನುಭವವಿತ್ತು. ಹೀಗೆ ನನಗೆ ಅವಕಾಶ ಸಿಕ್ಕಿತು ಎಂದಿದ್ದಾರೆ. ಈ ಸಿನಿಮಾಕ್ಕಾಗಿ ನಾನು  ಗಡ್ಡ ಮತ್ತು ಮೀಸೆ ಬೆಳೆಸಬೇಕಿತ್ತು. ಅದನ್ನೂನಾನು ಮಾಡಿದೆ. ನಂತರ ಸಂಜೋತಾ ಎಕ್ಸ್‌ಪ್ರೆಸ್‌ ಸಿನಿಮಾದ ಸ್ಕ್ರಿಪ್ಟ್‌ ಅನ್ನು ನನ್ನ ತಂದೆ ಅಮಿತಾಭ್​ ಅವರ ಮುಂದಿಟ್ಟರು. ಆದರೆ ಅದು ನನ್ನ ಅಪ್ಪನಿಗೆ ಹಿಡಿಸಿರಲಿಲ್ಲ.  "ಬಕ್ವಾಸ್‌" ಎಂದುಬಿಟ್ಟರು ಎಂಬುದನ್ನು ನೆನಪಿಸಿಕೊಂಡರು.

ಇದು  ರಾಕೇಶ್‌ ಅವರಿಗೆ ಬೇಸರ ತರಿಸಿತು. ರಾಕೇಶ್‌ ಮನೆಗೆ ಹಿಂತಿರುಗಿ ಒಂದು ಬಾಟಲ್‌ ಮದ್ಯ ಕುಡಿದು ಆ ಚಿತ್ರದ ಸ್ಕ್ರಿಪ್ಟ್‌ ಅನ್ನು ಮತ್ತೆ ಹೊಸದಾಗಿ ಬರೆದರು. ನಂತರ ಅಮಿತಾಭ್​ ಅವರು ನಟಿಸಿದರು.  ಈ ಮೂಲಕ ರಾಕೇಶ್‌ ಅವರು ನಿರ್ದೇಶಕರಾದರು ಎಂದು ನೆನಪಿಸಿಕೊಂಡರು. ಅಂದಹಾಗೆ, ಜೆಪಿ ದತ್ತಾ ಅವರು 2000ನೇ ವರ್ಷದ ಗಡಿಯಾಚೆಗಿನ ಪ್ರೇಮಕಥೆಯ ಸಿನಿಮಾ "ರೆಫ್ಯೂಜಿ"ನಲ್ಲಿ ನಟಿಸಲು ಕರೀನಾ ಕಪೂರ್​ ಜೊತೆ ಅಭಿಷೇಕ್‌ ಬಚ್ಚನ್‌ಗೆ ಅವಕಾಶ ನೀಡಿದರು. ಕರೀನಾ ಕೂಡ ಬಾಲಿವುಡ್​ಗೆ ಎಂಟ್ರಿಕೊಟ್ಟ ಚಿತ್ರವದು. ಅಲ್ಲಿಂದ ಕೆಲವು ಚಿತ್ರಗಳಲ್ಲಿ ಅಭಿಷೇಕ್​ ಅವರಿಗೆ ಅವಕಾಶ ಸಿಕ್ಕವು. 

ಇಬ್ಬರು ಮಕ್ಕಳ ಜೊತೆ ಕಾಣಿಸಿಕೊಂಡ ಅಭಿಷೇಕ್​ ಬಚ್ಚನ್​ ಎಕ್ಸ್​ ಕರಿಷ್ಮಾ ಕಪೂರ್: ಈಕೆಯದ್ದು ನೋವಿನ ಬದುಕು!
 

click me!