ಗೆಲುವಿನ ಸಂಭ್ರಮದಲ್ಲಿರುವ ಕಂಗನಾಗೆ ಶಾಕ್, ವಿಮಾನ ನಿಲ್ದಾಣದಲ್ಲಿ ಸಂಸದೆ ಮೇಲೆ ಹಲ್ಲೆ!

By Chethan Kumar  |  First Published Jun 6, 2024, 5:28 PM IST

ಮಂಡಿ ಕ್ಷೇತ್ರದಿಂದ ಚುನಾವಣೆ ಗೆದ್ದ ಬಾಲಿವುಡ್ ನಟಿ ಕಂಗನಾ ರಣವಾತ್‌ಗೆ ಆರಂಭದಲ್ಲೇ ಆಘಾತ ಎದುರಾಗಿದೆ. ಎನ್‌ಡಿಎ ಸಭೆಗಾಗಿ ದೆಹಲಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಂಗನಾ ರಣಾವತ್ ಮೇಲೆ ಹಲ್ಲೆಯಾಗಿದೆ.
 


ಚಂಡಿಘಡ(ಜೂ.06) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್‌ ಮೇಲೆ ಹಲ್ಲೆಯಾಗಿದೆ.   ಚಂಡಿಘಡ ವಿಮಾನ ನಿಲ್ದಾಣದಲ್ಲಿ ಸಿಐಎಸ್​ಎಫ್​ ಪೇದೆ ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ. ಚಂಡೀಗಢದಿಂದ ದೆಹಲಿಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ಬೋರ್ಡಿಂಗ್ ಸಂದರ್ಭದಲ್ಲಿ ಸಿಐಎಸ್​ಎಫ್​ ಪೇದೆ  ಕುಲ್ವಿಂದರ್ ಕೌರ್ ನೂತನ ಸಂಸದೆ ಕಂಗನಾ ಮೇಲೆ ಹಲ್ಲೆ ನಡೆಸಿದ್ದಾರೆ.ದೆಹಲಿಯಲ್ಲಿ ಎನ್‌ಡಿಎ ಸಭೆಗೆ ತೆರಳಲು ಚಂಡೀಘಡ ವಿಮಾನ ನಿಲ್ದಾಣಕ್ಕೆ ಕಂಗನಾ ಆಗಮಿಸಿದ್ದರು. ವಿಸ್ತಾರ ವಿಮಾನದಲ್ಲಿ ದೆಹಲಿಗೆ ತೆರಳಲು ಬಂದ ಕಂಗನಾ ಮೇಲೆ  ಸಿಐಎಸ್​ಎಫ್​ ಮಹಿಳಾ ಪೇದೆ ಹಲ್ಲೆ ನಡೆಸಿದ್ದಾರೆ.  ಘಟನೆಯಿಂದ ವಿಮಾನ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.  

ರೈತರ ಪ್ರತಿಭಟನೆ ವೇಳೆ ನಟಿ ಕಂಗನಾ ರಣವಾತ್ ನೀಡಿದ್ದ ಹೇಳಿಕೆಯಿಂದ ಸಿಐಎಸ್​ಎಫ್ ಮಹಿಳಾ ಪೇದೆ ತೀವ್ರ ಆಕ್ರೋಶಗೊಂಡಿದ್ದರು. ರೈತರಿಗೆ ಅವಮಾನ ಮಾಡುವ ರೀತಿ ಹೇಳಿಕೆ ನೀಡಿದ್ದರು ಎಂದು ಪೇದೆ ಆರೋಪಿಸಿದ್ದಾರೆ. ವರ್ಷಗಳ ಹಿಂದೆ ಕಂಗನಾ ನೀಡಿದ್ದ ಈ ಹೇಳಿಕೆಯಿಂದ ಕುಪಿತಗೊಂಡಿದ್ದ ಪೇದೆ ಇದೀಗ ಕಂಗನಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಹಲ್ಲೆ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಕಂಗನಾ ಮೇಲೆ ಪೇದೆ ಹಲ್ಲೆ ನಡೆಸುತ್ತಿರುವ ಸಿಸಿಟಿವಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಸದೆಯನ್ನು ತಳ್ಳಾಡಿರುವ ವಿಡಿಯೋಗಳು ಹರಿದಾಡಿದೆ. 

Latest Videos

undefined

ನಟಿ ಕಂಗನಾ ರಣಾವತ್ ಭರ್ಜರಿ ಗೆಲುವಿಗೆ ತಾಯಿಯ ಸಿಹಿ ಮುತ್ತಿನ ಉಡುಗೊರೆ!

ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದ ನಟಿ ಕಂಗನಾ ರಣಾವತ್, ಪ್ರಧಾನಿ ಮೋದಿ, ಬಿಜೆಪಿ ಹಾಗೂ ಹಿಂದುತ್ವದ ಪರ ಒಲವು ಹೊಂದಿದ್ದರು. ಹೀಗಾಗಿ ಹಲವು ಬಾರಿ ಟ್ವೀಟ್ ಮೂಲಕ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸಿದ ಬೃಹತ್ ಪ್ರತಿಭಟನೆ ವೇಳೆ ರೈತರ ವಿರುದ್ಧ ನಟಿ ಕಂಗನಾ ರಣಾವತ್ ಹೇಳಿಕೆ ನೀಡಿದ್ದರು. ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲೂ ಕಂಗನಾ ರಣಾವತ್ ಪಾಲ್ಗೊಂಡು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು.

ಬಾಲಿವುಡ್‌ನಲ್ಲಿದ್ದರೂ ಬಿಜೆಪಿ ಸಿದ್ಧಾಂತ ಹಾಗೂ ಮೋದಿಯ ಅತೀ ದೊಡ್ಡ ಅಭಿಮಾನಿಯಾಗಿದ್ದ ಕಂಗನಾಗೆ ಬಿಜೆಪಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಟಿಕೆಟ್ ಘೋಷಿಸಿತ್ತು. ಇದೇ ಮೊದಲ ಬಾರಿಗೆ ಕಂಗನಾ ರಣವಾತ್ ಚುನಾವಣಾ ಅಖಾಡಕ್ಕೆ ಧುಮುಕಿದ್ದರು. ಮಂಡಿ ಕ್ಷೇತ್ರದಲ್ಲಿ ಕಂಗನಾ ರಣಾವತ್ ವಿರುದ್ಧ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಹಿಮಾಚಲ ಪ್ರದೇಶ ದಿವಂಗತ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ವಿಕ್ರಮಾದಿತ್ಯ ಸಿಂಗ್, ಹಿಮಾಚಲ ಪ್ರದೇಶದ ಕಾಂಗ್ರೆಸ್ ಮಾಜಿ ಅಧ್ಯೆಕ್ಷೆ ಪ್ರತಿಭಾ ಸಿಂಗ್ ಪುತ್ರ. ಈ ಜಿದ್ದಾ ಜಿದ್ದಿನ ಹೋರಾಟದಲ್ಲಿ ಕಂಗನಾ ಭಾರಿ ಅಂತರದಿಂದ ಗೆಲುವು ಸಾಧಿಸಿ ಇತಿಹಾಸ ರಚಿಸಿದ್ದಾರೆ.

ಫಿಲ್ಮ್ ಸಿಟಿ, ವಿಮಾನ ನಿಲ್ದಾಣ.. ಚುನಾವಣೆ ಗೆದ್ದರೆ ಈ 5 ಕೆಲಸ ಮಾಡ್ತೀನಂದಿದಾರೆ ಬಾಲಿವುಡ್ ನಟಿ ಕಂಗನಾ ರಣಾವತ್
 

click me!