ಕತ್ರಿನಾರನ್ನು ವಿಕ್ಕಿ ಕೌಶಲ್ ಲವ್ ಮಾಡಿ ಮದ್ವೆ ಆಗಿದ್ದಲ್ಲ, ಮದ್ವೆ ಆಗೋರನ್ನೇ Love ಮಾಡಿದ್ದು: ಸೀಕ್ರೆಟ್ ಇಲ್ಲಿದೆ..!

Published : Feb 27, 2025, 11:51 PM ISTUpdated : Feb 28, 2025, 12:13 AM IST
ಕತ್ರಿನಾರನ್ನು ವಿಕ್ಕಿ ಕೌಶಲ್ ಲವ್ ಮಾಡಿ ಮದ್ವೆ ಆಗಿದ್ದಲ್ಲ, ಮದ್ವೆ ಆಗೋರನ್ನೇ Love ಮಾಡಿದ್ದು: ಸೀಕ್ರೆಟ್ ಇಲ್ಲಿದೆ..!

ಸಾರಾಂಶ

ವಿಕ್ಕಿ ಕೌಶಲ್ ಇನ್ನೂ ಬಾಲಿವುಡ್‌ ಸಿನಿಮಾದಲ್ಲಿ ಚಾನ್ಸ್ ಪಡೆಯುವ ಮೊದಲೇ ನಟಿ ಕತ್ರಿನಾ ಕೈಫ್ ಬಿಗ್ ಸ್ಟಾರ್. ಬ್ರಿಟಿಷ್ ಮೂಲದ ಕತ್ರಿನಾ ಕೈಫ್ ದೊಡ್ಡ ನಟಿಯಾಗಿದ್ದಾಗ ಒಮ್ಮೆ ಸಂದರ್ಶನ ಮಾಡುತ್ತಾ ನಟ ವಿಕ್ಕಿ ಕೌಶಲ್ ಅವರು 'ನೀವು ವಿಕ್ಕಿ ಕೌಶಲ್‌ ಅವರನ್ನು.. 

ಎಲ್ಲೆಲ್ಲೂ ಈಗ ನಟ ವಿಕ್ಕಿ ಕೌಶಲ್ (Vicky Kaushal) ಜಾದೂ ಶುರುವಾಗಿದೆ. ವಿಕ್ಕಿ ಯಾರು, ಎಲ್ಲಿಂದ ಬಂದ್ರು, ಸಿನಿಮಾ ಕೆರಿಯರ್ ಶುರುವಾಗಿದ್ದು ಯಾವಾಗ ಎಲ್ಲವೂ ಈಗ ಚರ್ಚೆಯ ಸಂಗತಿಯೇ... ಆದರೆ, ಛಾವಾ ಚಿತ್ರಕ್ಕಿಂತ ಮೊದಲು ಈ ನಟನ ಬಗ್ಗೆ ಯಾರೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಈಗ ನಟ ವಿಕ್ಕಿ ಕೌಶಾಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ವಿಕ್ಕಿ ಈಗ ಬಾಲಿವುಡ್‌ನ ಬಿಗ್ ಸ್ಟಾರ್. ಒಂದು ಕಾಲದಲ್ಲಿ ಕೇಳೋರೆ ಇರ್ಲಿಲ್ಲ, ಈಗ ಹೇಳೋರೇ ಎಲ್ಲ..!

ಆದರೆ, ನಟ ವಿಕ್ಕಿ ಕೌಶಲ್ ಅವರಲ್ಲಿ ಇರುವ ಒಂದು ಟ್ಯಾಲೆಂಟ್ ಹಾಗು ಕತ್ರಿನಾ ಕೈಫ್ ಮದುವೆಯಾದ ಸುದ್ದಿ ಮಾತ್ರ ದೊಡ್ಡ ಸೀಕ್ರೆಟ್ ಆಗಿ ಹಾಗೇ ಉಳಿದುಕೊಂಡಿದೆ. ವಿಕ್ಕಿ ಮನೆಯವರು, ಸ್ನೇಹಿತರು ಹಾಗು ಕೆಲವೇ ಆಪ್ತರಿಗೆ ಅದು ಗೊತ್ತು. ಈ ವಿಕ್ಕಿ ಕೌಶಲ್‌ಗೆ Manifestation ಅಂತಾರಲ್ಲ, ಅದನ್ನು ನಿಖರವಾಗಿ ಮಾಡುವ ಅಭ್ಯಾಸ ಇದೆಯಂತೆ.. ಬಾಲ್ಯದಿಂದಲೂ ಈ ಅಭ್ಯಾಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ವಿಕ್ಕಿ, ಇದರಲ್ಲಿ ಯಾವತ್ತೂ ಫೇಲ್ ಆಗಿಲ್ವಂತೆ. 

ವಿಕ್ಕಿ ಕೌಶಲ್ ತಮ್ಮ ಭವಿಷ್ಯವನ್ನು ಮೊದಲೇ ತಿಳಿದಿದ್ರಾ? ಹೌದು, ವಿಕ್ಕಿಗೆ Manifestation ಟ್ಯಾಲೆಂಟ್ ಇದ್ಯಂತೆ..!

ವಿಕ್ಕಿ ಕೌಶಲ್‌ ತಾವು 10-12 ವರ್ಷ ಇದ್ದಾಗಿನಿಂದಲೂ ನಾನು ಮುಂದೆ ಬಾಲಿವುಡ್ ಬಿಗ್ ಸ್ಟಾರ್ ಆಗ್ತೀನಿ ಅಂತಾನೇ ಇದ್ರಂತೆ. ಅದು ಸುಳ್ಳು ಅಂತ ಅಂದ್ಕೊಂಡ ಬಹಳಷ್ಟು ಮಂದಿಗೆ ಈಗ ಸತ್ಯ ಅಂತ ಅರ್ಥವಾಗಿದೆ. ಅವ್ರಿಗೆ ಸ್ಟ್ರಾಂಗ್ ಮೆನಿಫೆಸ್ಟೇಶನ್ ಸಾಮಥ್‌ಯ ಇದೆ ಅಂತಾರೆ. ಈಗ ಅವರ ಸಾಧನೆ ನೋಡಿದರೆ ಹೌದು ಅನ್ನಲೇಬೇಕು. ವಿಕ್ಕಿ ಕೌಶಲ್ ತಮ್ಮ 21ನೇ ವಯಸ್ಸಿನಲ್ಲಿಯೇ ತಾವು ನಟಿ ಕತ್ರಿನಾ ಕೈಫ್‌ (Katrina Kaif) ಅವರನ್ನು ಮದುವೆ ಆಗೋದಾಗಿ ಹೇಳಿದ್ರಂತೆ. ಅದನ್ನು ಸಾಧ್ಯ ಮಾಡಿಕೊಂಡಿದ್ದಾರೆ. 

ಹೌದು, ನಟ ವಿಕ್ಕಿ ಕೌಶಲ್ ಇನ್ನೂ ಬಾಲಿವುಡ್‌ ಸಿನಿಮಾದಲ್ಲಿ ಚಾನ್ಸ್ ಪಡೆಯುವ ಮೊದಲೇ ನಟಿ ಕತ್ರಿನಾ ಕೈಫ್ ಬಿಗ್ ಸ್ಟಾರ್. ಬ್ರಿಟಿಷ್ ಮೂಲದ ಕತ್ರಿನಾ ಕೈಫ್ ದೊಡ್ಡ ನಟಿಯಾಗಿದ್ದಾಗ ಒಮ್ಮೆ ಸಂದರ್ಶನ ಮಾಡುತ್ತಾ ನಟ ವಿಕ್ಕಿ ಕೌಶಲ್ ಅವರು 'ನೀವು ವಿಕ್ಕಿ ಕೌಶಲ್‌ ಅವರನ್ನು ಮದುವೆ ಆಗಬಹುದಲ್ಲ' ಎಂದು ಹೇಳಿದ್ದರು. ಅದಕ್ಕೆ ಆಗ ನಟಿ ಕತ್ರಿನಾ ನಾಚಿಕೊಂಡು ಸುಮ್ಮನಾಗಿದ್ದರು. ಆದರೆ, ಈ ವಿಕ್ಕಿಗೆ ಮಾತ್ರ ತಾವು ಕತ್ರಿನಾರನ್ನೇ ಮದುವೆ ಆಗುವ ನಂಬಿಕೆ ಬಲವಾಗಿ ಇತ್ತಂತೆ.

ಎಲ್ಲಿಂದ ಬಂದ್ರು ಈ ವಿಕ್ಕಿ ಕೌಶಲ್, 'ಕತ್ರಿನಾ ಪತಿ' ಛತ್ರಪತಿ ಸಂಭಾಜಿ ಮಹಾರಾಜ್ ಆಗಿದ್ದು ಹೇಗೆ? 

ನಟಿ ಕತ್ರಿನಾ ಕೈಫ್ (1983) ನಟ ವಿಕ್ಕಿ ಕೌಶಲ್‌ (1988) ಗಿಂತ ಐದು (5) ವರ್ಷ ಚಿಕ್ಕವರು. ಆದರೂ ಕೂಡ ತಮ್ಮ 21ರ ಹರೆಯದಲ್ಲೇ ವಿಕ್ಕಿ ಈ ಬಗ್ಗೆ ದೃಢವಾಗಿ ಹೇಳಿದ್ದರಂತೆ ನಾನು ಕತ್ರಿನಾರನ್ನೇ ಮದ್ವೆ ಆಗೋದು ಅಂತ. ಅಷ್ಟೇ ಅಲ್ಲ, ಒಮ್ಮೆ ರಣಬೀರ್ ಕಪೂರ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಇದ್ದ ಸ್ಟೇಜ್‌ನಲ್ಲೇ ಈ ವಿಕ್ಕಿ ತಾವು ಕತ್ರಿನಾರನ್ನು ಮದುವೆ ಆಗೋದಾಗಿ ಹೇಳಿದ್ದರು. ಅದಕ್ಕೆ ರಣಬೀರ್ ಕಪೂರ್ ಜೋರಾಗಿ ನಕ್ಕಿದ್ದರೆ, ಸಲ್ಲೂ ಹುಬ್ಬೇರಿಸಿ ವ್ಯಂಗ್ಯವಾಡಿದ್ದರು. 

ಆದರೆ, ನಟ ವಿಕ್ಕಿ ಕೌಶಲ್‌ಗೆ ತುಂಬಾ ಸ್ಪಷ್ಟವಾಗಿ ಅದು ಗೊತ್ತಿತ್ತು. ನಾನು ಕತ್ರಿನಾರನ್ನೇ ಮದುವೆ ಆಗ್ತೀನಿ, ಮುಂದೊಂದು ದಿನ ಬಾಲಿವುಡ್‌ನಲ್ಲಿ ಬಿಗ್ ಸ್ಟಾರ್ ಆಗ್ತೀನಿ ಅಂತ ತುಂಬಾ ಭರವಸೆಯಿಂದ ಹೇಳ್ತಾ ಇದ್ರಂತೆ. ಅದರಂತೇ ಎಲ್ಲವೂ ಆಗಿದೆ. 9 ಡಿಸೆಂಬರ್ 2021 ರಂದು ನಟಿ ಕತ್ರಿನಾ ಹಾಗೂ ನಟ ವಿಕ್ಕಿ ಕೌಶಲ್ ಮದುವೆ ಆಗದ್ದಾರೆ. ಅದಕ್ಕೂ ಮೊದಲು ಅವರಿಬ್ಬರೂ ಲವ್‌ನಲ್ಲಿ ಬಿದ್ದಿದ್ದರು. ವಿಕ್ಕಿ ಕೊನೆಗೂ ತಾವು ಹೇಳಿದಂತೆ ಕತ್ರಿನಾ ಜೊತೆ ಮ್ಯಾರೇಜ್ ಮಾಡಿಕೊಂಡಿದ್ದಾರೆ, ಬಾಲಿವುಡ್ ಬಿಗ್ ಸ್ಟಾರ್ ಕೂಡ ಆಗಿದ್ದಾರೆ ಈಗ. 

ಕಾರು ಕೇಳಿದ ಶಿವಣ್ಣಗೆ ಹೀಗೆ ಹೇಳಿದ್ದ ಅಪ್ಪು.. ಈಗ ಬೇಕಾ ಇವೆಲ್ಲಾ ಅಂದ್ರೂ ಯಾರೋ ಬಿಡ್ತಿಲ್ಲ..!

ಈ Manifestation ಅಂದ್ರೆ ಏನು ಅಂತ ಯಾರಿಗೂ ಹೇಳ್ಬೇಕಾಗಿಲ್ಲ..! ಯಾಕೆ ಅಂದ್ರೆ ತುಂಬಾ ಮಂದಿಗೆ ಈ ಶಬ್ಧ ಹಾಗೂ ಅರ್ಥ ಗೊತ್ತು. ಅವರಲ್ಲಿ ಬಹಳಷ್ಟು ಮಂದಿ ಅದನ್ನು ಸ್ಟ್ರಾಂಗ್ ಆಗಿ ಮಾಡಲ್ಲ ಅಷ್ಟೇ. ಅದಕ್ಕೇ ಅವ್ರು ಅಂದ್ಕೊಳ್ಳೋದೇ ಒಂದು ಆಗೋದೇ ಇನ್ನೊಂದು..! ಆದ್ರೆ, ಈ Manifestation ತುಂಬಾ ಚೆನ್ನಾಗಿ ಅರಿತು, ಅದನ್ನು ಸರಿಯಾಗಿ ಮಾಡಿಬಿಟ್ರೆ ಅವರು ಅಂದ್ಕೊಂಡಿದ್ದು ಆಗೋದು ಪಕ್ಕಾ ಅಂತಾರೆ ಅದನ್ನು ಸಾಧಿಸಿದವರು. ಬೇಕಾದ್ರೆ ಈ ವಿಕ್ಕಿ ಕೌಶಲ್ ಹತ್ರನೇ ಕೇಳಿ ಟಿಪ್ಸ್ ತಗೊಳ್ಳಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?