ಎಲ್ಲಿಂದ ಬಂದ್ರು ಈ ವಿಕ್ಕಿ ಕೌಶಲ್, 'ಕತ್ರಿನಾ ಪತಿ' ಛತ್ರಪತಿ ಸಂಭಾಜಿ ಮಹಾರಾಜ್ ಆಗಿದ್ದು ಹೇಗೆ?

Published : Feb 27, 2025, 09:46 PM ISTUpdated : Feb 27, 2025, 10:18 PM IST
ಎಲ್ಲಿಂದ ಬಂದ್ರು ಈ ವಿಕ್ಕಿ ಕೌಶಲ್, 'ಕತ್ರಿನಾ ಪತಿ' ಛತ್ರಪತಿ ಸಂಭಾಜಿ ಮಹಾರಾಜ್ ಆಗಿದ್ದು ಹೇಗೆ?

ಸಾರಾಂಶ

ನಟ ವಿಕ್ಕಿ ಕೌಶಲ್ ಹುಟ್ಟಿದ್ದು ಬೆಳೆದಿದ್ದು ಸಿನಿಮಾ ಜರ್ನಿ ಎಲ್ಲವೂ ಈಗ ಟಾಕ್‌ ಆಫ್‌ ದಿ ನೇಶನ್.. ಮುಂಬೈನಲ್ಲಿ ಜನಿಸಿದ ವಿಕ್ಕಿ ಕೌಶಲ್.. ತಂದೆ ಶ್ಯಾಮ್ ಕೌಶಲ್ ಸಿನಿಮಾದಲ್ಲಿ ಆಕ್ಷನ್ ಡೈರೆಕ್ಟರ್..  ಶೂಟಿಂಗ್‌ಗೆ ಹೋಗುತ್ತಿದ್ದ ವಿಕ್ಕಿ, ತಾವು ಮುಂದೊಂದು ದಿನ ನಾಯಕರಾಗಲು.. ಅನುರಾಗ್ ಕಶ್ಯಪ್ ಜೊತೆ.. ವಿಕ್ಕಿ ಕೌಶಾಲ್& ಕತ್ರಿನಾ...

ಸದ್ಯ ಭಾರತ ಹಾಗೂ ಜಗತ್ತಿನಲ್ಲಿ 'ಛಾವಾ' ಸಿನಿಮಾದ (Chhaava) ಹವಾ ಜೋರಾಗಿಯೇ ಇದೆ. ಇತ್ತೀಚೆಗೆ ಬಂದ ಬಾಲಿವುಡ್ ಸಿನಿಮಾಗಳಲ್ಲಿ ಛಾವಾ ಗಳಿಸಿದ ಯಶಸ್ಸನ್ನು ಬೇರೆ ಯಾವ ಸಿನಿಮಾ ಕೂಡ ಗಳಿಸಲಿಲ್ಲ. ಅಷ್ಟರಮಟ್ಟಿಗೆ ಛಾವಾ ಸಿನಿಮಾ ಇಡೀ ಭಾರತವನ್ನು ಮೆಚ್ಚುಗೆಯ ಮಹಾಪೂರದಿಂದ ಆವರಿಸಿಕೊಂಡಿದೆ. ಈ ಚಿತ್ರದಲ್ಲಿ ಸಂಭಾಜಿ ಪಾತ್ರ ಮಾಡಿರುವ ನಟ ವಿಕ್ಕಿ ಕೌಶಲ್ (Vicky Kaushal) ಈಗ ವಿಶ್ವವಿಖ್ಯಾತಿ ಪಡೆದಿದ್ದಾರೆ. 

ಹಾಗೇ, ಈ ಛಾವಾ ಸಿನಿಮಾ ಮೂಲಕ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇನ್ನೂ ಒಂದು ಸ್ಟೆಪ್ ಮೇಲೆ ಹೋಗಿದ್ದಾರೆ. ಛಾವಾ ಸಿನಿಮಾದಲ್ಲಿ ವಿಕ್ಕಿ ಕೌಶಾಲ್ ನಟನೆಗೆ ಫಿದಾ ಆಗದವರೇ ಇಲ್ಲ. ವಿಕ್ಕಿ ಕೌಶಾಲ್ ಛಾವಾ ಸಿನಿಮಾದಲ್ಲಿ ಛತ್ರಪತಿ ಸಂಬಾಜಿ ಮಹಾರಆಜ್ (Chhatrapati Sambhaji Maharaj) ಪಾತ್ರದಲ್ಲಿ ಭಾರೀ ಮಿಂಚು ಹರಿಸಿದ್ದಾರೆ. ವಿಕ್ಕಿ ಈ ಪಾತ್ರವನ್ನು ಜೀವಿಸಿದ್ದಾರೆ ಅಂತಲೇ ಹೇಳಬಹುದು. ಅಷ್ಟರಮಟ್ಟಿಗೆ ಈ ಪಾತ್ರದ ಮೂಲಕ ನಟ ವಿಕ್ಕಿ ಕೌಶಲ್ ಅವರನ್ನು ಭಾರತದ ಎಲ್ಲಾ ಸಿನಿಪ್ರೇಕ್ಷಕರು ಮೆಚ್ಚಿದ್ದಾರೆ, ಆರಾಧಿಸುತ್ತಿದ್ದಾರೆ. 

ಮುರಿದ ಕಾಲಲ್ಲೇ ಕುಂಟುತ್ತ ಸ್ಟೇಜ್‌ಗೆ ಬಂದಿದ್ಯಾಕೆ ರಶ್ಮಿಕಾ? ಹಿಂದಿದೆ ದೊಡ್ಡ ನಿರ್ಧಾರ!

ಹೌದು, ನಟ ವಿಕ್ಕಿ ಕೌಶಲ್ ಎಲ್ಲಿಂದ ಬಂದ್ರು? ಅವರು ಹುಟ್ಟಿದ್ದು ಬೆಳೆದಿದ್ದು ಸಿನಿಮಾ ಜರ್ನಿ ಎಲ್ಲವೂ ಈಗ ಟಾಕ್‌ ಆಫ್‌ ದಿ ನೇಶನ್ ಆಗಿದೆ. 1988 ಮೇ 13ರಂದು ಮುಂಬೈನಲ್ಲಿ ಜನಿಸಿದ್ದಾರೆ ವಿಕ್ಕಿ ಕೌಶಲ್. ತಂದೆ ಶ್ಯಾಮ್ ಕೌಶಲ್ ಸಿನಿಮಾದಲ್ಲಿ ಆಕ್ಷನ್ ಡೈರೆಕ್ಟರ್ ಆಗಿದ್ದಾರೆ. ಅವರ ಜೊತೆ ಶೂಟಿಂಗ್‌ಗೆ ಹೋಗುತ್ತಿದ್ದ ವಿಕ್ಕಿ, ತಾವು ಮುಂದೊಂದು ದಿನ ನಾಯಕನಟರಾಗಲು ನಿರ್ಧರಿಸಿದ್ದರಂತೆ. ಮೊದಲು ನಿರ್ದೇಶನ ವಿಭಾಗದಲ್ಲಿ ಅನುರಾಗ್ ಕಶ್ಯಪ್ ಜೊತೆ ಕೆಲಸ ಮಾಡಿದ್ದಾರೆ ವಿಕ್ಕಿ ಕೌಶಾಲ್. 

ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವಿಕ್ಕಿ ಕೌಶಾಲ್ ಮುಂದೆ ನಾಯಕರಾಗಿ ಬರಲು ಬೇಕಾದ ಕನಸು, ಪರಿಶ್ರಮ ಹಾಗೂ ತರಬೇತಿ ಎಲ್ಲವನ್ನೂ ಒಂದೊಂದಾಗಿ ಸೈಲೆಂಟ್ ಆಗಿ ಮಾಡಿಕೊಂಡಿದ್ದರು. ಕಿರುಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಮಿಂಚುತ್ತಾ, ಪೋಷಕ ನಟರಾಗಿ ಒಂದೊಂದೇ ಹೆಜ್ಜೆ ಮೇಲೇರುತ್ತಾ ಬಂದ ವಿಕ್ಕಿ ಕೌಶಾಲ್ ಅವರು ಇದೀಗ ಸೋಲೋ ನಾಯಕರಾಗಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. 

ರಾಜಮೌಳಿ & ಶ್ರೀನಿವಾಸ್ ಮಧ್ಯೆ ಬಂದ ಮಹಿಳೆ ಯಾರು? ಖ್ಯಾತ ನಿರ್ದೇಶಕನ ವಿರುದ್ದ ಗಂಭೀರ ಆರೋಪ..!

ವಿಕ್ಕಿ ಕೌಶಲ್ ಏನೂ ಬಡವರಾಗಿರಲಿಲ್ಲ. ಆದರೆ, ಚಿಕ್ಕಪುಟ್ಟ ಪಾತ್ರಗಳ ಮೂಲಕ ಬಾಲಿವುಡ್ ಸಿನಿಮಾರಂಗದಲ್ಲಿ ಹೆಜ್ಜೆಗಳನ್ನು ಇಡುತ್ತಾ ಬಂದವರು. 12 ವರ್ಷಗಳ ಕಾಲ ನಿದ್ದೆಯಿಲ್ಲದ ಅದೆಷ್ಟೋ ರಾತ್ರಿಗಳನ್ನು ಕಳೆದಿದ್ದಾರೆ ವಿಕ್ಕಿ. ಚಿಕ್ಕಪುಟ್ಟ ಪಾತ್ರಗಳಲ್ಲಿ ನಟನೆ, ಸಿನಿಮಾ ಸೋಲು, ಅವಮಾನ, ಹಣದ ಮುಗ್ಗಟ್ಟು ಎಲ್ಲವನ್ನೂ ಅನುಭವಿಸಿದ್ದಾರೆ. ಆದರೆ, ಮುಂದೊಂದು ದಿನ ತಾವು ದೇಶದ, ಅದರಲ್ಲೂ ಮುಖ್ಯವಾಗಿ ಬಾಲಿವುಡ್ ಸ್ಟಾರ್ ನಟ ಆಗುತ್ತೇನೆ ಅಂತ ನಿರ್ಧಾರ ಮಾಡಿದ್ರಂತೆ. ಅದರಂತೆ ಈಗ ಆಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?