
ತೆಲುಗು ಚಿತ್ರರಂಗದ ನಟಿ ಕಮ್ ನಿರ್ದೇಶಕಿ ಜೀವಿತಾ ಮತ್ತು ಪತಿ ನಟ ರಾಜಶೇಖರ್ ವಿರುದ್ಧ ನಿರ್ಮಾಣ ಸಂಸ್ಥೆಯೊಂದು ಚೆಕ್ ಬೌನ್ಸ್ ಕೇಸ್ ಮತ್ತು ಕ್ರಿಮಿನಲ್ ಮೊಕದ್ದಮೆ ಹಾಕಿದ್ದಾರೆ. 2017ರಲ್ಲಿ ಗರುಡ ವೇಗ ಸಿನಿಮಾವನ್ನು ನಿರ್ಮಾಣ ಮಾಡಿದ ರಾಜಶೇಖರ್ ಅವರೇ ನಾಯಕನಾಗಿ ನಟಿಸಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದೆ ಆದರೆ ಈಗ ಅದ ಸಿನಿಮಾದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಗರುಡ ವೇಗ ಸಿನಿಮಾವನ್ನು ನಿರ್ಮಾಣ ಮಾಡಿದ ಜೋಸ್ಟರ್ ಸರ್ವೀಸ್ ಸಂಸ್ಥೆಯು ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ 26 ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣವನ್ನು ರಾಜಶೇಖರ್ ಮತ್ತು ಜೀವಿತಾ ವಿರುದ್ಧ ದಾಖಲು ಮಾಡಿದ್ದಾರೆ. ಇತ್ತೀಚಿಗೆ ಸುದ್ದಿಘೋಷ್ಠಿ ಮಾಡಿದ ನಿರ್ಮಾಣ ಸಂಸ್ಥೆ 'ರಾಜಶೇಖರ್ ಸತತ ಸೋಲುಗಳಿಂದ ಕಂಗೆಟ್ಟು ಡಿಪ್ರೆಶನ್‌ನಲ್ಲಿದ್ದಾರೆ. ಆಗ ನನಗೆ ಪರಿಚಿತರಾಗಿದ್ದ ಅವರ ತಂದೆಯವರು ಮಗನಿಗೆ ಸಹಾಯ ಮಾಡುವಂತೆ ಹೇಳಿದ್ದರು. ಅಂತೆಯೇ ರಾಜಶೇಖರ್ ಅವರು ನನ್ನ ಬಳಿ ಬಂತು ತಮ್ಮ ನೋವು ಹೇಳಿಕೊಂಡು ಭಾವುಕರಾಗಿ ಸಹಾಯ ಕೇಳಿದರು' ಎಂದು ಘಟನೆ ಬಗ್ಗೆ ಮಾತನಾಡಿದ್ದಾರೆ.
'ಅವರ ಕಮ್‌ಬ್ಯಾಕ್‌ಗೆಂದು ಗರುಡ ವೇಗ ಸಿನಿಮಾ ಮಾಡಲಾಗಿತ್ತು ಆಗ ತಮ್ಮ ಬಳಿ ಇದ್ದ ಆಸ್ತಿಯನ್ನು ಅಡವಿಟ್ಟು 26 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡರು. ಸಾಲ ಪಡೆದುಕೊಂಡು ಮೂರು ವರ್ಷ ಆಗಿದೆ ತೀರಿಸಿಲ್ಲ. ಅಲ್ಲದೆ ಅವರು ಅಡ ಇಟ್ಟಿದ್ದ ಆಸ್ತಿಗಳೆಲ್ಲ ಬೇನಾಮಿ ಹೆಸರಿನಲ್ಲಿರುವ ಅಸ್ತಿಗಳು. ಈಗ ಹಣ ಕೇಳಿದರೆ ದೌರ್ಜನ್ಯ ಮಾಡುತ್ತಿದ್ದಾರೆ' ಎಂದು ನಿರ್ಮಾಪಕರು ಹೇಳಿದ್ದಾರೆ.
'ರಾಜಶೇಖರ್ ಪತ್ನಿ ಜೀವಿತಾ ಬಹಳ ಡೇಂಜರಸ್ ವ್ಯಕ್ತಿ. ಆಕೆ ರಾಜಶೇಖರ್‌ಗಿಂತಲೂ ಡೇಂಜರಸ್, ನಮಗೆ ಮೋಸ ಮಾಡುವ ಐಡಿಯಾ ಆಕೆಯದ್ದೇ, ಈಗ ಹಣ ವಾಪಸ್ಸು ಕೇಳಿದಾಗ ರೌಡಿಯಂತೆ ವರ್ತಿಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ. ಬಳಿಕ ಆಂಧ್ರ ಪ್ರದೇಶದ ನಗರಿ ಕೋರ್ಟ್‌ನಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದೇವೆ. ನಗರಿ ನ್ಯಾಯಲಯವು ರಾಜಶೇಖರ್ ಹಾಗೂ ಜೀವಿತಾ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.ಇಬ್ಬರ ಬಂಧನ ಶ್ರೀಘ್ರದಲ್ಲಿಯೇ ಆಗಲಿದೆ' ಎಂದು ನಿರ್ಮಾಪಕ ರಾಜು ಹೇಳಿದ್ದಾರೆ.
ಸುದ್ದಿಘೋಷ್ಟಿ ನಂತರ ಆಫ್‌ಸ್ಕ್ರೀನ್‌ನಲ್ಲಿ ಮಾತನಾಡಿದ ನಿರ್ಮಾಪಕ ರಾಜುಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ರಾಜುಗೆ ಸೇರಬೇಕಿರು ಆಸ್ತಿಯನ್ನು ಜೀವಿತಾ ಮತ್ತು ರಾಜಶೇಖರ್ ಅವರು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದಾರೆ. ಆದರೆ ರಾಜಶೇಖರ್ ಆರೋಗ್ಯದಲ್ಲಿ ಏರುಪೇರು ಆಗಿರುವ ಕಾರಣ ವಿಚಾರಣೆಯನ್ನು ಮುಂದೂಡಬೇಕು, ಮೇ 5ರಂದು ನಡೆಸಬೇಕು ಎಂದು ಜೀವಿತಾ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕುಟುಂಬಕ್ಕೆ ಸಮಯ ನೀಡುತ್ತಿರುವ ಜೀವಿತಾ ನಟನೆಯಿಂದ ದೂರ ಉಳಿದುಕೊಂಡು ಪತಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಲಯಾಳಂ ರಿಮೇಕ್ ಸಿನಿಮಾ ಶೇಖರ್, ಶೇಷು,ಎವದೈತೆ ನಾಕೇಂತಿ,ಸತ್ಯಮೇವ ಜಯತೇ ಮತ್ತು ಮಹಾಂಕಾಳಿ ಸಿನಿಮಾಗಳನ್ನು ಜೀವಿತಾ ನಿರ್ದೇಶನ ಮಾಡಿದ್ದಾರೆ. ತಮ್ಮ ಇಬ್ಬರೂ ಹೆಣ್ಣು ಮಕ್ಕಳು ಕೂಡ ಚಿತ್ರರಂಗದಲ್ಲಿ ನನ್ನ ಜೊತೆ ಕೆಲಸ ಮಾಡಲಿದ್ದಾರೆ ಎಂದು ಜೀವಿತಾ ಈ ಹಿಂದೆ ಹೇಳಿಕೊಂಡಿದ್ದರು.
2011ರಲ್ಲಿ ಜೀವಿತಾ ಸಹೋದರ ಮುರಳಿ ಶ್ರೀನಿವಾಸ್ ಬಳಿ 306 ಗ್ರಾಮ್ ಕೊಕೇನ್ ಪತ್ತೆಯಾಗಿದ್ದು ಪೊಲೀಸರು ಅರೆಸ್ಟ್ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.