ತುಂಬಾ ಹೊಡಿತಾನೆ, ಇವನ ಜತೆ ಜೀವನ ಮಾಡಲು ಸಾಧ್ಯವೇ ಇಲ್ಲ: ವಿಚ್ಛೇದನಕ್ಕೆ ಮುಂದಾದ ನಟಿ ಚಾರು

Published : Oct 25, 2022, 06:42 PM IST
ತುಂಬಾ ಹೊಡಿತಾನೆ, ಇವನ ಜತೆ ಜೀವನ ಮಾಡಲು ಸಾಧ್ಯವೇ ಇಲ್ಲ: ವಿಚ್ಛೇದನಕ್ಕೆ ಮುಂದಾದ ನಟಿ ಚಾರು

ಸಾರಾಂಶ

ಸುಶ್ಮಿತಾ ಸೇನ್ ಸಹೋದರನ ವೈವಾಹಿಕ ಜೀವನದಲ್ಲಿ ಬಿರುಕು. ಎರಡನೇ ಚಾನ್ಸ್‌ ಕೊಟ್ಟರೂ ಯೋಗ್ಯತೆ ಇಲ್ಲ ಎಂದ ಪತ್ನಿ....  

ವಿಶ್ವಸುಂದರಿ ಸುಶ್ಮಿತಾ ಸೇನ್ ಸಿನಿಮಾ, ಬ್ಯುಸಿನೆಟ್ ಅಂಡ್ ಫ್ಯಾಮಿಲಿ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಾಯ್‌ಫ್ರೆಂಡ್ ಜೊತೆ ಬ್ರೇಕಪ್, ಲಲಿತ್ ಮೋದಿ ಜೊತೆ ಮ್ಯಾರೇಜ್ ರೂಮರ್ಸ್‌ ಅಂತ ಇಷ್ಟು ದಿನ ಸುಶ್ಮಿತಾ ನ್ಯೂಸಲ್ಲಿದ್ದರು. ಎಲ್ಲಾ ತಣ್ಣಗಾಯ್ತು ಎನ್ನುವಷ್ಟರಲ್ಲಿ ಸುಶ್ಮಿತಾ ಸಹೋದರ ರಾಜೇವ್ ಸೇನ್ ದಾಂಪತ್ಯ ಜೀವದ ರಾದ್ದಾಂತ ಬಹಿರಂಗವಾಗಿದೆ. ಜುಲೈ ತಿಂಗಳಿನಲ್ಲಿ ರಾಜೀವ್ ಮತ್ತು ಪತ್ನಿ ಚಾರು ನಡುವೆ ದೊಡ್ಡ ಜಗಳವಾಗಿ ಮಗಳಿಗೋಸ್ಕರ ಎರಡನೇ ಚಾನ್ಸ್‌ ತೆಗೆದುಕೊಂಡು ಸುಮ್ಮನಿದ್ದರು ಆದರೆ ಈಗ ಡಿವೋರ್ಸ್‌ ಬೇಕೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ. 

2019ರಲ್ಲಿ ರಾಜೀವ್ ಮತ್ತು ಚಾರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ದಿನದಿಂದಲ್ಲೂ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗುತ್ತಿದೆ ಸಂಬಂಧ ಸರಿಯಾಗಿಲ್ಲ ಎಂದು ಅದಷ್ಟು ಸಹಿಸಿಕೊಂಡು ಬಂದು. ಈ ವರ್ಷ ವಿಚ್ಛೇದನಕ್ಕೂ ಮುಂದಾದರೂ ಆದರೆ ಪುತ್ರಿ ಝಿಯಾನಾ ಮುಖ ನೋಡಿಕೊಂಡು ಎರಡನೇ ಚಾನ್ಸ್‌ ತೆಗೆದುಕೊಂಡ್ಡರು. ನಾಲ್ಕು ತಿಂಗಳು ಕಳೆದರೂ ರಾಜೀವ್ ಬದಲಾಗಿಲ್ಲ ಇನ್ನೂ ಸಮಸ್ಯೆ ಹೆಚ್ಚಾಗುತ್ತಿದೆ ಹೀಗಾಗಿ ದೂರ ಆಗುತ್ತೀವಿ  ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನಲ್ಲಿ ಚಾರು ಮಾತನಾಡಿದ್ದಾರೆ.

'ಈ ಮದುವೆ ನನ್ನ ಜೀವನದ ದೊಡ್ಡ ತಪ್ಪು. ಈ ಮದುವೆ ಸಂಬಂಧ ಹೀಗೆ ಮುಂದುವರೆದರೆ ಇನ್ನೂ ಅಸಯ್ಯವಾಗುತ್ತದೆ. ಈ ವಿಚಾರಗಳನ್ನು ನನ್ನ ಫ್ಯಾಮಿಲಿ ಜೊತೆ ಹಂಚಿಕೊಂಡಾಗ ನಾನು ತೆಗೆದುಕೊಳ್ಳುತ್ತಿರುವ ನಿರ್ಧಾರ ಸರಿ ಎಂದು ಹೇಳಿದ್ದರು. ಝಿಯಾನಾ ಮತ್ತು ನಾನು ಉಳಿದುಕೊಳ್ಳಲು ಆಗಲೇ ಒಂದು ಮನೆ ನೋಡಿರುವೆ ಮದಷ್ಟು ಬೇಗ ಮುಂಬೈಗೆ ಹಾರಬೇಕು. ವಕೀಲ ಜೊತೆ ಮಾತನಾಡಿ ನಾನು ವಿಚ್ಚೇದನದ ಬಗ್ಗೆ ಚರ್ಚೆ ಮಾಡುವೆ. ರಾಜೀವ್‌ ಕುಟುಂಬದಿಂದ ನನಗೆ ಹಣ ಆಸ್ತಿ ಏನೂ ಬೇಡ ಈಗಾಗಲೆ ನಾನು ಮೂರು ವರ್ಷ ವೇಸ್ಟ್‌ ಮಾಡಿರುವೆ' ಎಂದು ಚಾರು ಮಾತನಾಡಿದ್ದಾರೆ.

ಸುಶ್ಮಿತಾ ಸೇನ್ ಸಹೋದರನ ದಾಂಪತ್ಯ ಕಲಹ; ಭಾವುಕ ಪೋಸ್ಟ್ ಹಂಚಿಕೊಂಡ ರಾಜೀವ್ ಪತ್ನಿ ಚಾರು ಅಸೋಪ

'ಕೋವಿಡ್‌19 ಸಮಯಲ್ಲಿ ರಾಜೀವ್‌ ಮೂರು ತಿಂಗಳುಗಳ ಕಾಲ ನನ್ನನ್ನು ಒಬ್ಬಳೆ ಬಿಟ್ಟು ಎಲ್ಲಿಗೋ ಹೋಗುತ್ತಿದ್ದರು. ನಾನು ಸೀರಿಯಸ್ ಆಗಿದ್ದು ರಾಜೀವ್ ಮನೆ ಬಿಟ್ಟು ಎರಡು ದಿನಗಳ ಕಾಲ ಹೋಟೆಲ್‌ನಲ್ಲಿ ಉಳಿದುಕೊಂಡಾಗ. ರಾಜೀವ್‌ಗೆ ಈಗ 45 ವರ್ಷ ಗುಣದಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ ಹೀಗಾಗಿ ಸರಿ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ದೂರ ಹೋಗುವು ಬೆಸ್ಟ್‌. ಈ ಸಮಸ್ಯೆಗಳಿಂದ ಝಿಯಾನಾ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ರಾಜೀವ್‌ಗೆ ತಾಳ್ಮೆ ತುಂಬಾನೇ ಕಮ್ಮಿ ಈ ಹಿಂದೆ ಜಗಳ ಆದಾಗ ಎರಡು ಸಲ ನನ್ನ ಮೇಲೆ ಕೈ ಮಾಡುವ ಪ್ರಯತ್ನ ಮಾಡಿದ್ದಾರೆ. ರಾಜೀವ್‌ಗೆ ನನ್ನ ಮೇಲೆ ಅನುಮಾನವಿದೆ ಅಕ್ಬರ್ ಕ ಬಾಲ್ ಬೀರ್ಬಲ್ ಸಿನಿಮಾ ಚಿತ್ರೀಕರಣದ ವೇಳೆ ನನ್ನ ಕೋ-ಸ್ಟಾರ್‌ಗೆ ಮೆಸೇಜ್ ಮಾಡಿ ನನ್ನಿಂದ ದೂರ ಇರಲು ಹೇಳಿದ್ದರು, ಇದರಿಂದ ನೆಮ್ಮದಿಯಾಗಿ ಚಿತ್ರೀಕರಣ ಮಾಡಲು ಆಗಲಿಲ್ಲ' ಎಂದು ಚಾರು ಹೇಳಿದ್ದಾರೆ. 

ಚಾರು ನೀಡಿರುವ ಹೇಳಿಕೆಗಳು ವೈರಲ್ ಅಗುತ್ತಿದ್ದಂತೆ ರಾಜೀವ್ ಸ್ಪಷ್ಟನೆ ಕೊಟ್ಟಿದ್ದಾರೆ. 'ಜೀವನ ನೆಮ್ಮದಿಯಾಗಿ ನಡೆಸುವುದರ ಬಗ್ಗೆ ಚಿಂತೆ ಮಾಡಬೇಕು ಮಾಧ್ಯಮಗಳಲ್ಲಿ ಕುಳಿತು ಮಾತನಾಡಿದ್ದರೆ ಏನೂ ಉಪಯೋಗವಿಲ್ಲ. ನಮ್ಮ ಮಗಳು ಝಿಯಾನಾ ಮನಸ್ಸಿನ ಮೇಲೆ ಪರಿಣಾಮ ಬಿದ್ದರೆ ಅದಕ್ಕೆ ಚಾರುನೇ ಕಾರಣ. ನನಗೆ ತಿಳಿಸದೆ ಝಿಯಾನಾಳನ್ನು ಕರೆದುಕೊಂಡು ಚಾರು ಮುಂಬೈ ಬಿಟ್ಟು ಹೊರಟಿದ್ದಾಳೆ. ನಮ್ಮ ವೈವಾಹಿಕ ಜೀವನದಲ್ಲಿ ಏನೇ ಸಮಸ್ಯೆ ಆಗಿದ್ದರೂ ಅದಕ್ಕೆ ನಾವಿಬ್ಬರೂ ಕಾರಣ ನಾನೊಬ್ಬನೇ ಅಲ್ಲ. ಚಾರುಗೆ ಹಣ ಅಸ್ತಿ ಏನೂ ಬೇಡ ಆದರೆ ನನ್ನ ಮಗಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ನನಗೂ ಹಕ್ಕಿದೆ' ಎಂದಿದ್ದಾರೆ ರಾಜೀವ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?