Ram Setu Twitter Review; ಅಕ್ಷಯ್ ಕುಮಾರ್ ಸಿನಿಮಾ ನೋಡಿ ಅಭಿಮಾನಿಗಳು ಹೇಳಿದ್ದೇನು?

Published : Oct 25, 2022, 12:54 PM IST
Ram Setu Twitter Review; ಅಕ್ಷಯ್ ಕುಮಾರ್ ಸಿನಿಮಾ ನೋಡಿ ಅಭಿಮಾನಿಗಳು ಹೇಳಿದ್ದೇನು?

ಸಾರಾಂಶ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ ರಾಮ್ ಸೇತು ಸಿನಿಮಾ  ಇಂದು (ಅಕ್ಟೋಬರ್ 25) ರಿಲೀಸ್ ಆಗಿದೆ. ಚಿತ್ರ ನೋಡಿದ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ದೀಪಾವಳಿಗೆ ಬೆಸ್ಟ್ ಉಡುಗೊರೆ ಎಂದು ಹೇಳುತ್ತಿದ್ದಾರೆ. 

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ ರಾಮ್ ಸೇತು ಸಿನಿಮಾ  ಇಂದು (ಅಕ್ಟೋಬರ್ 25) ರಿಲೀಸ್ ಆಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ರಾಮ್ ಸೇತು ಸಿನಿಮಾ ತೆರೆಗೆ ಬಂದಿದೆ. ಅಕ್ಷಯ್ ಕುಮಾರ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲು ಕಂಡಿವೆ. ಹಾಗಾಗಿ ರಾಮ್ ಸೇತು ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಅಲ್ಲದೆ ಗೆಲುವಿಗಾಗಿ ಅಕ್ಷಯ್ ಕಾಯುತ್ತಿದ್ದರು. ರಾಮ್​ ಸೇತು ಚಿತ್ರಕ್ಕೆ ಹೇಳಿಕೊಳ್ಳುವಷ್ಟು ಒಳ್ಳೆಯ ಮಟ್ಟದಲ್ಲಿ ಅಡ್ವಾನ್ಸ್​ ಬುಕಿಂಗ್​ ಆಗಿರಲಿಲ್ಲ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಟ್ವಿಟರ್​ ಮೂಲಕ ತಮ್ಮ ವಿಮರ್ಶೆ ಮಾಡಿದ್ದಾರೆ. ಅಂದಹಾಗೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ದೀಪಾವಳಿಗೆ ಬೆಸ್ಟ್ ಉಡುಗೊರೆ ಎಂದು ಹೇಳುತ್ತಿದ್ದಾರೆ. 

ಬಾಲಿವುಡ್‌ ಸದ್ಯ ಸೋಲಿನ ಸುಳಿಯಲ್ಲಿದೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಬ್ರಹ್ಮಾಸ್ತ್ರ ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಕ್ಕೆ ಸದ್ದು ಮಾಡಿಲ್ಲ. ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಮಾಯಿ ಮಾಡುತ್ತಿಲ್ಲ. ಸ್ಟಾರ್ ನಟರ, ನಿರೀಕ್ಷೆಯ ಸಿನಿಮಾಗಳು ಸಹ ಸೋಲು ಕಂಡಿವೆ. ಹಾಗಾಗಿ ಬಾಲಿವುಡ್ ದೊಡ್ಡ ಹಿಟ್ ಗಾಗಿ ಕಾಯುತ್ತಿದೆ. ಅಕ್ಷಯ್ ಕುಮಾರ್ ನಟನೆಯ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಸಿನಿಮಾ ನೋಡಿದ ಅಭಿಮಾನಿಗಳು ಟ್ವೀಟ್ಟರ್ ಮೂಲಕ ವಿಮರ್ಶೆ ಮಾಡಿದ್ದು ಹೀಗೆ. 

ಸಿನಿಮಾ ನೋಡಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅಭಿಮಾನಿ ಶುಭಮ್,  ರಾಮ್ ಸೇತು ಉತ್ತಮ ಚಿತ್ರಕಥೆ ಹೊಂದಿದೆ. ಆದರೆ ಕೆಲವು ತಾಂತ್ರಿಕ ಅಂಶಗಳು ಇಷ್ಟವಾಗಿಲ್ಲ. ವಿಎಕ್ಸ್‌ಎಫ್ ಮತ್ತು ಎಡಿಟಿಂಗ್ ಅಷ್ಟು ಇಷ್ಟವಾಗಿಲ್ಲ. ಕೆಲವು ಗಂಬೀರ ದೃಶ್ಯಗಳು ಮಿಸ್ ಆಗಿವೆ. ಆದರೆ ಅಕ್ಷಯ್ ಕುಮಾರ್ ನಟನೆ ಅದ್ಭುತ. ಡೀಸೆಂಟ್ ವಾಚ್ ಸಿನಿಮಾ ಎಂದು ಹೇಳಿದ್ದಾರೆ.

ಇನ್ನು ಮತ್ತೋರ್ವ ಅಭಿಮಾನಿ ಕ್ರಿಶ್ ಎನ್ನುವವರು ತನ್ನ ಅಭಿಪ್ರಾಯ ತಿಳಿಸಿದ್ದಾರೆ. ಒಂದೇ ಪದದಲ್ಲಿ ಹೇಳಬೇಕೆಂದರೆ ಅದ್ಭುತ. ಅಕ್ಷಯ್ ಕುಮಾರ್ ಅಭಿನಯ ಅತ್ಯದ್ಭುತ. ಜಾಕ್ವೆಲಿನ್ ಫರ್ನಾಂಡಿಸ್ ಡೀಸೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕಥೆ ನಿಮಗೆ ಗೂಸ್‌ಬಂಪ್ ಬರುವಂತೆ ಮಾಡುತ್ತೆ. ಸಿನಿಮಾ ಚೆನ್ನಾಗಿದೆ' ಎಂದು 3 ಸ್ಟಾರ್ ಕೊಟ್ಟಿದ್ದಾರೆ.

ಮತ್ತೋರ್ವ ಅಭಿಮಾನಿ ರಿಷಿ ಫುಲ್ ಮಾರ್ಕ್ಸ್ ನೀಡಿದ್ದಾರೆ. ರಾಮೇ ಸೇತು ನನ್ನ ವಿಮರ್ಶೆ ಎಂದಿರುವ ಅಭಿಮಾನಿ, ಭಾವನೆಗಳು, ನಿರ್ದೇಶನ, ಬಿಜಿಎಮ್, ಆಕ್ಷನ್, ರಾಮಸೇತು ಒಂದು ರೋಮಾಂಚನಕಾರಿ ಅನುಭವ ನೀಡಿದೆ. ಎಲ್ಲಾ ಕಲಾವಿದರ ನಟನೆ ಅದ್ಭುತವಾಗಿದೆ' ಎಂದು ಹೇಳಿದ್ದಾರೆ.

ರಾಮ್ ಸೇತು ಸಿನಿಮಾವಾದರೂ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡುತ್ತಾ ಎಂದು ಕಾದುನೋಡಬೇಕಿದೆ.  ಅಕ್ಷಯ್ ಕುಮಾರ್ ನಟನೆಯ ಬಚ್ಚನ್ ಪಾಂಡೆ, ರಕ್ಷಾ ಬಂಧನ್​ ಹಾಗೂ ಸಾಮ್ರಾಟ್​ ಪೃಥ್ವಿರಾಜ್​ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಿರಲಿಲ್ಲ. ಹಾಗಾಗಿ ರಾಮ್ ಸೇತು ಮೆಲೇ ನಿರೀಕ್ಷೆ ಹೆಚ್ಚಾಗಿದೆ. ರಾಮ್​ ಸೇತು ಚಿತ್ರದ ಜೊತೆಗೆ ಇಂದು ಅಜಯ್​ ದೇವಗನ್​ ಹಾಗೂ ಸಿದ್ದಾರ್ಥ್​ ಮಲ್ಹೋತ್ರಾ ನಟನೆಯ ಥ್ಯಾಂಕ್​ ಗಾಡ್ ಸಿನಿಮಾ ರಿಲೀಸ್​ ಆಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್‌ ಚಿತ್ರಕ್ಕಾಗಿ ಗಡ್ಡ ಶೇವ್ ಮಾಡಿದ್ದಕ್ಕೆ ಯಶ್ ಭವಿಷ್ಯವೇ ಬದಲಾಯ್ತು; ಮತ್ತೆ ಕನ್ನಡಕ್ಕೆ ಬರಲಿರುವ ರಾಕಿಂಗ್ ಸ್ಟಾರ್..?
ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ