ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ಮಾಡುತ್ತಿರುವ ಸಿಬಿಐ ಸೈಕಲಾಜಿಕಲ್ ಅಟೋಸ್ಪೈ ಅಸ್ತ್ರ ಬಳಸಲು ಸಿದ್ಧವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆ ಸುಶಾಂತ್ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ನಟನ ಸಾವಿನ ಹಿಂದಿನ ಕಾರಣ ಹಾಗೂ ಸಂದರ್ಭದ ಕುರಿತು ತನಿಖೆ ನಡೆಸಲಿದ್ದು, ಸೈಕಲಾಜಿಲ್ ಅಟೋಸ್ಪೈ ನಡೆಸಲಿದೆ ಎನ್ನಲಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ಮಾಡುತ್ತಿರುವ ಸಿಬಿಐ ಸೈಕಲಾಜಿಕಲ್ ಅಟೋಸ್ಪೈ ಅಸ್ತ್ರ ಬಳಸಲು ಸಿದ್ಧವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆ ಸುಶಾಂತ್ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ನಟನ ಸಾವಿನ ಹಿಂದಿನ ಕಾರಣ ಹಾಗೂ ಸಂದರ್ಭದ ಕುರಿತು ತನಿಖೆ ನಡೆಸಲಿದ್ದು, ಸೈಕಲಾಜಿಲ್ ಅಟೋಸ್ಪೈ ನಡೆಸಲಿದೆ ಎನ್ನಲಾಗಿದೆ.
ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ ಇದನ್ನು ನಡೆಸಲಿದ್ದು, ತನಿಖಾ ತಂಡ ಸುಶಾಂತ್ ಬದುಕಿನ ಪ್ರತಿ ವಿಚಾರವನ್ನು ವಿವರವಾಗಿ ತನಿಖೆ ನಡೆಸಲಿದೆ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು, ವಾಟ್ಸಾಪ್ ಚಾಟ್, ಫ್ಯಾಮಿಲಿ, ಫ್ರೆಂಡ್ಸ್ ಹಾಗೂ ಉಳಿದವರ ಜೊತೆಗಿನ ಸಂಭಾಷಣೆಯನ್ನೂ ತನಿಖೆ ನಡೆಸಲಾಗುತ್ತದೆ.
ಸುಶಾಂತ್ ಸಾವಿನ ಪ್ರಮುಖ ಸಾಕ್ಷಿ ಸಿದ್ಧಾರ್ಥ್ ಪಿಥನಿ ವಿಚಾರಣೆ
ನಟನ ಮೂಡ್ ಸ್ವಿಂಗ್ಸ್, ಸ್ವಭಾವ, ನಡವಳಿಕೆ, ವಿಲಕ್ಷಣ ಭಾವನೆ ಎಲ್ಲವನ್ನೂ ತನಿಖೆ ನಡೆಸುವ ಮೂಲಕ ಸುಶಾಂತ್ ಆತ್ಮಹತ್ಯೆ ಸಂದರ್ಭ ನಟನ ಮಾನಸಿಕ ಸ್ಥಿತಿಗತಿಯನ್ನೂ ತಂಡ ತನಿಖೆ ಮಾಡಲಿದೆ. ಜೂನ್‌ನಲ್ಲಿ ಮುಂಬೈನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಸುಶಾಂತ್ ಸಿಂಗ್ ರಜಪೂತ್‌ನ ಮೈಂಡ್‌ನ ಪೋಸ್ಟ್ ಮಾರ್ಟಂ ಎಂದು ಮೂಲಗಳು ತಿಳಿಸಿವೆ.
ಇದು ಮೂರನೇ ಬಾರಿ ಇಂತಹದೊಂದು ಕ್ಲಿಷ್ಟಕರವಾದ ತನಿಖಾ ವಿಧಾನವನ್ನು ಸಿಬಿಐ ಬಳಸುತ್ತಿದೆ. ಈ ಮೊದಲು ಎರಡು ವರ್ಷ ಹಿಂದೆ ದೆಹಯಲ್ಲಿ ನಡೆದ ಸುನಂದಾ ಪುಷ್ಕರ್ ಹಾಗೂ ಬಿಝೇರ್ ಬುರಾರಿ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಮಾತ್ರ ಈ ವಿಧಾನವನ್ನು ಬಳಸಲಾಗಿತ್ತು.
ಪೊಲೀಸರ ಆದೇಶದಂತೆ ತಡ ರಾತ್ರಿ ಸುಶಾಂತ್ ಮೃತದೇಹ ಪೋಸ್ಟ್‌ಮಾರ್ಟಂ
ಏಮ್ಸ್‌ನ ಫೊರೆನ್ಸಿಕ್ ತಜ್ಞರ ತಂಡ ಸುಶಾಂತ್ ಸಿಂಗ್‌ನ ಅಟೋಸ್ಪೈ ವರದಿ ಪರಿಶೀಲಿಸಲಿದೆ. ಇದಕ್ಕಾಗಿ ಸಿಬಿಐ ಸ್ವತಃ ತಜ್ಞರ ನೆರವು ಕೋರಿತ್ತು. ಕಳೆದ ಶುಕ್ರವಾರದಿಂದ ಸಿಬಿಐಯ ವಿಶೇಷ ತನಿಖಾ ತಂಡ ಮುಂಬೈನಲ್ಲಿ ಬೀಡು ಬಿಟ್ಟಿದ್ದು, ಇದು ವಿಜಯ್ ಮಲ್ಯ ಪ್ರಕರಣದ ಬಗ್ಗೆಯೂ ತನಿಖೆ ನಡೆಸುತ್ತಿದೆ.
ಭಾನುವಾರ ಸುಶಾಂತ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾದ ಮನೆಯ ಸಿಬ್ಬಂದಿ ಹಾಗೂ ಗೆಳೆಯ ಸಿದ್ಧಾರ್ಥ್ ಪಿಥನಿಯನ್ನು ಸಿಬಿಐ ವಿಚಾರಣೆಗೊಳಪಡಿಸಿತ್ತು. ಸಿಬ್ಬಂದಿ ನೀರಜ್‌ನನ್ನು ಸತತ ಮೂರನೆ ದಿನವೂ ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರನ್ನೂ ಸುಶಾಂತ್ ಮನೆಗೆ ಕರೆದೊಯ್ದು ಸೀನ್ ರಿಕ್ರಿಯೇಟ್ ಮಾಡಲಾಗಿತ್ತು.
ಮಹೇಶ್ ಭಟ್ ಜೊತೆಗಿನ ವಾಟ್ಸಾಪ್ ಚಾಟ್ ವೈರಲ್
ಸಿಬಿಐ ಇದುವರೆಗೂ ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿಯ ವಿಚಾರಣೆ ನಡೆಸಿಲ್ಲ. ಸುಶಾಂತ್ ಸಿಂಗ್ ಕುಟುಂಬಸ್ಥರು ರಿಯಾ ಚಕ್ರವರ್ತಿ ಸುಶಾಂತ್‌ಗೆ ಮಾನಸಿಕವಾಗಿ ಹಿಂಸಿಸಿದ್ದಲ್ಲದೆ, ಮುಂಬೈ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾಯಿಸಿರುವುದಾಗಿ ಆರೋಪಿಸಿದ್ದಾರೆ.
ಜಾರಿ ನಿರ್ದೇಶನಾಲಯ ಈಗಾಗಲೇ ಎರಡು ಬಾರಿ ರಿಯಾ ಚಕ್ರವರ್ತಿಯ ವಿಚಾರಣೆ ನಡೆಸಿದೆ. ಸುಶಾಂತ್ ಖಾತೆಯಿಂದ 15 ಕೋಟಿ ಅಕ್ರಮವಾಗಿ ವರ್ಗಾವಣೆ ಆಗಿರುವ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ರಿಯಾ ಚಕ್ರವರ್ತಿ ತಮ್ಮ ವಿರುದ್ಧ ಬಂದ ಆರೋಪಗಳನ್ನು ನಿರಾಕರಿಸಿದ್ದಾರೆ.
ಸುಶಾಂತ್ ಸಾವಿನ ತನಿಖೆ ವೇಗ ಹೆಚ್ಚಿಸಲು 5 ವಿಶೇಷ ತಂಡ ರಚಿಸಿದ CBI
ಮುಂಬೈ ಪೊಲೀಸರು ಸುಶಾಂತ್ ಸಾವಿನ ಪ್ರಕರಣ ಆತ್ಮಹತ್ಯೆ ಎಂದಿದ್ದಾರೆ. ಬಿಹಾರದಲ್ಲಿ ಎಫ್ಐಆರ್ ದಾಖಲಾಗಿದ್ದು, ಎರಡೂ ರಾಜ್ಯದ ಪೊಲೀಸರ ನಡುವೆ ತನಿಖಾ ಕ್ರಮದ ಬಗ್ಗೆ ಭಿನ್ನಾಭಿಪ್ರಾಯವೂ ಉಂಟಾಗಿದೆ.
Psychological Autopsy ಎಂದರೇನು..?
ಸಂಶಯಾಸ್ಪದವಾಗಿ ಮೃತಪಟ್ಟ ವ್ಯಕ್ತಿಯ ಸಾವಿನ ಕಾರಣ, ಸಂದರ್ಭ, ಸಾವಿನ ಸಂದರ್ಭ ವ್ಯಕ್ತಿಯ ಮಾನಸಿಕ ನೆಲೆಯನ್ನು ಪರಿಶೀಲನೆ ನಡೆಸಿಕೊಂಡು ಸಾವಿನ ಹಿಂದಿನ ಸತ್ಯಾಸತ್ಯತೆಯನ್ನು ಶೋಧಿಸುವ ವಿಧಾನವನ್ನು ಮಾನಸಿಕ ಶವಪರೀಕ್ಷೆ ಎನ್ನುತ್ತಾರೆ. ಇದೊಂದು ರೀತಿ ಮೆದುಳಿನ ಪೋಸ್ಟ್ ಮಾರ್ಟಂ ಎಂದರೂ ತಪ್ಪಾಗಲಾರದು