ಗುಣಮುಖರಾದ ಬೆನ್ನಲ್ಲೆ KBC ಶೂಟಿಂಗ್ ಆರಂಭಿಸಿದ ಅಮಿತಾಭ್‌ ಬಚ್ಚನ್!

Suvarna News   | Asianet News
Published : Aug 24, 2020, 03:31 PM IST
ಗುಣಮುಖರಾದ ಬೆನ್ನಲ್ಲೆ KBC ಶೂಟಿಂಗ್ ಆರಂಭಿಸಿದ ಅಮಿತಾಭ್‌ ಬಚ್ಚನ್!

ಸಾರಾಂಶ

ಕೊರೋನಾದಿಂದ ಗುಣಮುಖರಾದ ನಟ ಅಮಿತಾಭ್ ಬಚ್ಚನ್‌, ಕೆಬಿಸಿ ಶೂಟಿಂಗ್‌ ಆರಂಭಿಸಿದ್ದಾರೆ. ಬ್ಯಾಕ್ ಟು ವರ್ಕ್‌ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

ಕೋವಿಡ್ 19 ಪಾಸಿಟಿವ್ ಬಂದ ಕಾರಣ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ನಟ ಅಮಿತಾಭ್ ಬಚ್ಚನ್‌ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಈ ಬಗ್ಗೆ ಟ್ಟೀಟ್ ಮಾಡಿದ್ದಾರೆ.

ಕೊರೋನಾ ವಿರುದ್ಧ ಹೋರಾಡ್ತಿರೋರು ನಿಜವಾದ ವಾರಿಯರ್ಸ್: ಬಿಗ್‌ಬಿ ಶುಭಾಶಯ

ಲಾಕ್‌ಡೌನ್‌ನಿಂದಾಗಿ ಸಾಕಷ್ಟು ರಿಯಾಲಿಟಿ ಶೋಗಳು, ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣ ನಿಂತಿತ್ತು.  ಕೆಲವೊಂದು ರಿಯಾಲಿಟಿ ಶೋಗಳಿಗೆ ಬ್ರೇಕ್‌ ಬಿತ್ತು. ಭರವಸೆಯಲ್ಲಿ ಕಾಯುತ್ತಿದ್ದ ಮನೋರಂಜನಾ ಕ್ಷೇತ್ರಕ್ಕೆ ಲಾಕ್‌ಡೌನ್‌ ಸಡಿಲಿಕ ಖುಷಿ ತಂದುಕೊಟ್ಟಿದೆ. ಇದರ ಬೆನ್ನಲ್ಲೆ ಚಿತ್ರೀಕರಣ ಹಾಗೂ ಸಿನಿ ಕಾರ್ಯಗಳು ಪ್ರಾರಂಭವಾಗಿವೆ. ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ' ಕೆಲವೇ ದಿನಗಳಲ್ಲಿ ಶುರುವಾಗಲಿದೆ. 

 

ಹೌದು! ಕೆಲವು ದಿನಗಳ ಹಿಂದೆ ನಟ ಅಮಿತಾಭ್ ಕೆಬಿಸಿ ಸೀಸನ್ 12 ಪ್ರೋಮೋ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್ ಬಿ ಫೋಟೋ ಸಂತೋಷ ತಂದುಕೊಟ್ಟಿದೆ. ಅಷ್ಚೇ ಅಲ್ಲದೆ ಒಂದು ರಿಯಾಲಿಟಿ ಶೋ ಯಶಸ್ವಿಯಾಗಲು ಕಾರಣವೇ ಅದರ ಹಿಂದಿರು ತಂತ್ರಜ್ಞರು. ಆರೋಗ್ಯದ ದೃಷ್ಟಿಯಿಂದ ಅವರಿಗೆಲ್ಲಾ ಪಿಪಿ ಕಿಟ್‌ ನೀಡಲಾಗಿತ್ತು, ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಬಚ್ಚನ್ ಫ್ಯಾಮಿಲ್ What's app ಗ್ರೂಪಿನಲ್ಲಿ ಐಶ್ವರ್ಯಾ ರೆಸ್ಪಾನ್ಸ್ ಹೇಗಿರುತ್ತೆ?

ಕೆಬಿಸಿ ಪ್ರಾರಂಭವಾಗಿದ್ದು ಹೇಗೆ?
'ಶುರುವಾಗಿದೆ. ಹಾಟ್‌ ಸೀಟ್‌ ಸೀಸನ್, ಕೆಬಿಸಿ ಸೀಸನ್‌ 12. 2000ರಲ್ಲಿ ಕೆಬಿಸಿ ಸೀಸನ್‌ 1 ಶುರುವಾಗಿದ್ದು 20 ವರ್ಷಗಳು ಸರಾಗವಾಗಿ ಕಳೆದಿವೆ ಎಂದು ಊಹಿಸುವುದೂ ಕಷ್ಟ. ಕೋವಿಡ್‌19 ನಿಯಮಗಳನ್ನು ಅನುಸರಿಸಲಾಗಿದೆ. ಎಲ್ಲರೂ ನೀಲಿ ಪಿಪಿ ಕಿಟ್ ಧರಿಸಿ ಕ್ಯಾಮೆರಾ ಬೆಳಕಿಗೆ ಸಮುದ್ರದಂತೆ ಕಾಣಿಸುತ್ತಿದ್ದಾರೆ. ತುಂಬಾ ದಿನಗಳ ನಂತರ ಕ್ಯಾಮೆರಾ ಎದುರು ಬರುತ್ತಿರುವುದು ಏನೋ ಒಂಥರ ವಿಯರ್ಡ್‌ ಫೀಲ್‌ ಆಗುತ್ತಿದೆ,' ಎಂದು ಅಮಿತಾಭ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

 

 
ಇದೀಗ ಕೆಬಿಸಿ 12 ಸೀಸನ್‌ಗಳು ನಡೆಯುತ್ತಿದೆ. 9 ಸೀಸನ್‌ಗಳನ್ನು ಅಮಿತಾಭ್‌ ಹಾಗೂ 3 ಸೀಸನ್‌ಗಳನ್ನು ಶಾರುಖ್‌ ಖಾನ್‌ ಹೋಸ್ಟ್‌ ಮಾಡಿದ್ದಾರೆ. ಅಮಿತಾಭ್ ಗುಣಮುಖರಾಗಿ ಇಷ್ಟು ಬೇಗ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದನ್ನು ನೋಡಿ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!