ನನ್ನನ್ನು ಹೊರಗಿನವಳಂತೆ ನೋಡುತ್ತಾರೆ; ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಸ್ಟೋರಿ ರಿವೀಲ್ ಮಾಡಿದ ಶ್ರದ್ಧಾ ಕಪೂರ್

Published : Mar 10, 2023, 10:32 AM ISTUpdated : Mar 10, 2023, 11:04 AM IST
ನನ್ನನ್ನು ಹೊರಗಿನವಳಂತೆ ನೋಡುತ್ತಾರೆ; ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಸ್ಟೋರಿ ರಿವೀಲ್ ಮಾಡಿದ ಶ್ರದ್ಧಾ ಕಪೂರ್

ಸಾರಾಂಶ

ಸುಳ್ಳು ಹೇಳುವುದಕ್ಕೆ ಬರಲ್ಲ ಎನ್ನುವ ಶ್ರದ್ಧಾ ಕಪೂರ್ ಶಾಲೆಯಲ್ಲಿ ಸಿಕ್ಕಿಬಿದ್ದಾಗ ಏನು ಮಾಡಿದ್ದರು? 10 ವರ್ಷ ಜರ್ನಿ ಬಗ್ಗೆ ಸಣ್ಣ ಮಾತುಕತೆ....  

ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಮುದ್ದಾದ ಪುತ್ರಿ ಶ್ರದ್ಧಾ ಕಪೂರ್ ಬಿ-ಟೌನ್‌ಗೆ ಕಾಲಿಟ್ಟು 10 ವರ್ಷಗಳು ತುಂಬಿದೆ. ಬಹುತೇಕ ಹೊಸ ಕಲಾವಿದರ ಜೊತೆ ಅಭಿನಯಿಸಿರುವ ನಟಿಯನ್ನು ಸ್ಟಾರ್ ಮಗಳು ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ಸಾಮಾನ್ಯ ಹುಡುಗಿಯಂತೆ ನೋಡಲು ಕಾರಣವಿದೆ. ಸಿಂಪಲ್ ಆಂಡ್ ಹಂಬಲ್ ಮಾತ್ರವಲ್ಲ ಸ್ಟಾರ್‌ಡಮ್ ಇಲ್ಲದೆ ಬೆಳೆದವರು ಎನ್ನಬಹುದು. ಸದ್ಯ ರಣಬೀರ್ ಕಪೂರ್‌ ಜೊತೆ Tu Jhoothi Main Makkaar ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

'ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷಗಳು ಕಳೆದಿದೆ. ಈಗಲೂ ನನಗೆ ಪ್ಲ್ಯಾನ್ ಮಾಡಿ ತಂತ್ರ ಕುತಂತ್ರಿ ಕೆಲಸ ಮಾಡುವುದಕ್ಕೆ ಬರಲ್ಲ. ಕೆಲಸದ ವಿಚಾರಕ್ಕೆ ಬಂದಾಗ ನನ್ನ ಕೆಲಸ ಮೇಲೆ ಮಾತ್ರ ಗಮನ ಕೊಡುವೆ ಬೇರೆ ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಸಿನಿಮಾ ಜರ್ನಿ ತುಂಬಾ ವಿಭಿನ್ನವಾಗಿದೆ. ಪ್ರತಿ ಹಂತದಲ್ಲೂ ಸರಿ ತಪ್ಪುಗಳನ್ನು ತಿಳಿದುಕೊಂಡು ಒಪ್ಪಿಕೊಂಡು ಬದಲಾಗಿ ಬಂದಿರುವೆ. ನನ್ನ ಹಾದಿ ಬಗ್ಗೆ ನನಗೆ ಸ್ಪಷ್ಟತೆ ಇದೆ' ಎಂದು ಶ್ರದ್ಧಾ ಮಾತನಾಡಿದ್ದಾರೆ.

ಶ್ರದ್ಧಾ ಕಪೂರ್‌ ಬರ್ತ್‌ಡೇ ಸ್ಪೇಷಲ್‌: ನಟಿಯ ನೆಟ್‌ವರ್ತ್‌, ಮನೆ, ಆಸ್ತಿ ವಿವರ!

'ಸಿನಿಮಾ ಜರ್ನಿ ವಿಚಾರದಲ್ಲಿ ನಾನು ಎಲ್ಲರಂತೆ ಯೋಚನೆ ಮಾಡುವುದಿಲ್ಲ ಏಕೆಂದರೆ ನಾನು ಆರಂಭಿಸಿದ ರೀತಿ ಬೇರೆ ಇದೆ. ನಾನು ಚಿತ್ರರಂಗದವಳಲ್ಲ...ಹೊರಗಿನವರು ಹೇಗೆ ಬಂದು ಸಿನಿಮಾ ಮಾಡುತ್ತಾರೆ ಅದೇ ರೀತಿ ಅನಿಸುತ್ತದೆ. ಅವಕಾಶಗಳು ಬೇಕೆಂದು ಲೆಕ್ಕವಿಲ್ಲದಷ್ಟು ಆಡಿಷನ್ ಕೊಟ್ಟಿರುವೆ ಹೀಗಾಗಿ ಜೀವನದಲ್ಲಿ ಮೇಲೆ ಕೆಳಗೆ ನೋಡಿರುವೆ. ಈ ಮಾರ್ಗದಿಂದ ಬಂದಿರುವ ಕಾರಣ ಪ್ರತಿ ಹಂತವನ್ನು ದಾಟಿಕೊಂಡು ಬಂದಿರುವೆ ಅದೇ ಈಗ ನನಗೆ ಶಕ್ತಿ ಮತ್ತು ಧೈರ್ಯ ಕೊಟ್ಟಿದೆ. ಅನೇಕರು ಹೇಳುತ್ತಾರೆ ನೀವು ಸಿನಿಮಾ ಸ್ಟಾರ್ ಫ್ಯಾಮಿಲಿ ಹುಡುಗಿ ಅನಿಸುವುದಿಲ್ಲ ಏಕೆಂದರೆ ಒಂದೇ ನಿರ್ಮಾಣ ಸಂಸ್ಥೆಗೆ ಸೀಮಿತವಾಗಿ ಸಿನಿಮಾ ಕಥೆಗಳನ್ನು ಅಯ್ಕೆ ಮಾಡಿಕೊಳ್ಳುವುದಿಲ್ಲ. ಅನೇಕರು ಹೇಳುತ್ತಾರೆ ತುಂಬಾ ಕಷ್ಟ ಪಟ್ಟು ಜರ್ನಿ ನಡೆಸುತ್ತಿರುವೆ ಎಂದು ಆದರೆ ನನ್ನ ಪ್ರಕಾರ ಇದು ತುಂಬಾನೇ ನಾರ್ಮಲ್‌ ಜರ್ನಿ. ಆರಂಭದಿಂದಲೂ ನನ್ನ ಗಮನ ಕೆಲಸ ಮೇಲೆ ಇದೆ, ನನಗೆ ಬೇಕಿರುವ ಕಥೆಗಳ ಬಗ್ಗೆ ಇದೆ.  ಜನರು ನೆನಪಿನಲ್ಲಿ ಉಳಿಯುವಂತ ಸಿನಿಮಾಗಳನ್ನು ನಾನು ಮಾಡಬೇಕು' ಎಂದು ಶ್ರದ್ಧಾ ಹೇಳಿದ್ದಾರೆ.

'ಕೊರೋನಾ ಸಮಯದ ನಂತರ ತುಂಬಾ ಸಿನಿಮಾಗಳನ್ನು ಸಹಿ ಮಾಡಬೇಕು ಅಂದುಕೊಂಡ ಅದೇ ರೀತಿ ನಡೆಯುತ್ತಿರುವೆ. ಜನರಿಗೆ ನನ್ನ ಬಗ್ಗೆ ಎರಡು ಸತ್ಯ ಮತ್ತು ಒಂದು ಸುಳ್ಳು ಹೇಳಬೇಕು ಅಂದ್ರೆ...ನಾನು ಪ್ರೋಫೆಶನ್ ಸ್ಕೈ ಡೈವರ್ ಹಾಗೂ ಅಡ್ವಾನ್ಸ್‌ ಸ್ಕೂಬಾ ಡೈವರ್ ಮತ್ತೊಂದು 200 ಜಿಮ್‌ ಸ್ಕ್ವಾಟ್ಸ್‌ ಒಂದೇ ಸಮಯಕ್ಕೆ ಮಾಡುವೆ. ನಿಜವಾದ ಸುಳ್ಳು ಹೇಳಬೇಕು ಅಂದ್ರೆ ನಮ್ಮಿಂದ ಸಿನಿಮಾ ಓಡುತ್ತದೆ ಎನ್ನುವುದು. ಏಕೆಂದರೆ ನಾವು ನಟಿಸುವುದು ಅಷ್ಟೇ ಆದರೆ ತಂಡ ಚಿತ್ರತಂಡದಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಾರೆ. ಹಗಲು ರಾತ್ರಿ ಕೆಲಸ ಮಾಡುತ್ತಾರೆ ಕ್ರಿಡಿಟ್ ಅವರಿಗೆ ಕೊಡಬೇಕು' ಎಂದಿದ್ದಾರೆ ಶ್ರದ್ಧಾ. 

ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್‌ ಮಾಡುತ್ತಿರುವ ಶ್ರದ್ಧಾ ಕಪೂರ್ ಫೋಟೋ ವೈರಲ್!

'ಸ್ಕೂಲ್‌ ದಿನಗಳಲ್ಲಿ ನನ್ನ ಬಗ್ಗೆ ನನಗೆ ಬೇಸರ ಆಗಿತ್ತು ಸ್ಕೂಲ್ ಯೂನಿಫಾರ್ಮ್‌ನ ಒಳಗೆ ಪರೀಕ್ಷೆ ದಿನ ಉತ್ತರ ಬರೆದುಕೊಂಡು ಹೋಗಿದ್ದು. ಎಂಥಾ ಒಳ್ಳೆ ಐಡಿಯಾ ಯಾರೂ ಕೂಡ ನೋಡುವುದಿಲ್ಲ ಈ ಸಲ ಪಾಸ್‌ ಒಳ್ಳೆ ಮಾರ್ಕ್‌ ಬರುತ್ತದೆ ಎಂದುಕೊಂಡಿದ್ದೆ ಆದರೆ  ನಾನು ಉತ್ತರ ನೋಡುತ್ತಿರುವ ನನ್ನ ಟೀಚರ್‌ ನನ್ನ ಮುಂದೆ ನಿಂತುಕೊಂಡಿದ್ದರು. ಆಗ ಪ್ರಶ್ನೆ ಮಾಡಿದಾಗ ಸತ್ಯ ಹೇಳಿದೆ..ಹೀಗಾಗಿ ಸುಳ್ಳು ಹೇಳುವುದಕ್ಕೆ ಬರುವುದಿಲ್ಲ. ಗರ್ಲ್‌ಫ್ರೆಂಡ್ ಆಗಿ ಅಥವಾ ಪತ್ನಿಯಾಗಿ ನಾನು ಸುಳ್ಳು ಹೇಳುವ ವ್ಯಕ್ತಿ ಅಲ್ಲ ಏಕೆಂದರೆ ಬ್ಲ್ಯಾಕ್ ಆಂಡ ವೈಟ್‌ ಸಿನಿಮಾ ರೀತಿ ಪ್ರೀತಿ ಮಾಡುವ ವ್ಯಕ್ತಿ ನಾನು. ಸುಳ್ಳುಗಳಿಗೆ ನನ್ನ ಜೀವನದಲ್ಲಿ ಜಾಗವಿಲ್ಲ' ಹೇಳಿದ ಶ್ರದ್ಧಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?