ಚಿಕ್ಕ ಹುಡ್ಗೀರ್‌ನ ಮದ್ವೆ ಮಾಡ್ಕೊಳ್ಳಿ; ಸಲಹೆ ಕೊಟ್ಟ ಸೈಫ್‌ಗೆ 'ಅಂಕಲ್‌ನ ಹೊಡಿತೀನಿ ಸುಬ್ಬಿ' ಎಂದ ನೆಟ್ಟಿಗರು

By Vaishnavi Chandrashekar  |  First Published Mar 10, 2023, 9:19 AM IST

ಕರೀನಾಳನ್ನು ಮದುವೆಯಾಗಿ ನನ್ನ ಜೀವನ ಸೂಪರ್ ಆಗಿದೆ ಎಂದ ಸೈಫ್ ಅಲಿ ಖಾನ್ ಕಾಲೆಳೆದ ನೆಟ್ಟಿಗರು...ಅಂಕಲ್‌ಗಳಿಂದ ಹುಡ್ಗಿ ಸಿಗ್ತಿಲ್ಲ ಎಂದ ಹುಡುಗರು.... 


ಬಾಲಿವುಡ್ ಚಿತ್ರರಂಗದಲ್ಲಿ ಹಿಸ್ಟರ್ ಕ್ರಿಯೇಟ್ ಮಾಡಿದ ಜೋಡಿ ಅಂದ್ರೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್. ಅಮೃತಾ ಸಿಂಗ್‌ ಜೊತೆ ಮದುವೆಯಾಗಿದ್ದ ಸೈಫ್‌ ಇಬ್ಬರು ಮುದ್ದಾದ ಮಕ್ಕಳಿದ್ದರೂ ಡಿವೋರ್ಸ್‌ ಪಡೆದುಕೊಂಡು ಕರೀನಾ ಕಪೂರ್‌ನ 2012ರಲ್ಲಿ ಮದುವೆ ಮಾಡಿಕೊಳ್ಳುತ್ತಾರೆ. ಸಾಕಷ್ಟು ಟ್ರೋಲ್‌ಗಳು ಅವಮಾನಗಳನ್ನು ಎದುರಿಸಿದ ಸೈಫ್‌ 'ಕರೀನಾಳಿಂದ ನನ್ನ ಲೈಫ್ ಬ್ಯೂಟಿಫುಲ್ ಆಗಿದೆ' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಸೈಫ್‌ ಅಲಿ ಖಾನ್ 1970ರಲ್ಲಿ ಹುಟ್ಟಿದ್ದರು, ಕರೀನಾ ಕಪೂರ್ 1980ರಲ್ಲಿ ಹುಟ್ಟಿದ್ದು. ಒಟ್ಟು 10 ವರ್ಷ ವಯಸ್ಸಿನ ವ್ಯತ್ಯಾಸವಿರುವ ಈ ಜೋಡಿನ ಅಂಕಲ್- ಹುಡುಗಿ ಲವ್ ಸ್ಟೋರಿ ಎಂದು ಟೀಕೆ ಮಾಡಿದ್ದರು. ಹೀಗಾಗಿ ಎಲ್ಲರಿಗೂ ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

ಹಲವು ವರ್ಷಗಳ ಹಿಂದೆ ನಡೆದ ಸಂದರ್ಶನದಲ್ಲಿ ಸೈಫ್ 'ಪುರುಷರು ತಡವಾಗಿ ಮೆಚ್ಯೂರ್ ಆಗುತ್ತಾರೆ ಮಹಿಳೆಯರು ಬೇಗ ಮೆಚ್ಯುರ್ ಆಗುತ್ತಾರೆ. ಕರೀನಾಳನ್ನು ಮದುವೆ ಮಾಡಿಕೊಂಡು ಜೀವನದ ಬೆಸ್ಟ್‌ ಕ್ಷಣಗಳನ್ನು ಎಂಜಾಯ್ ಮಾಡುತ್ತಿರುವೆ. ಪ್ರತಿಯೊಬ್ಬ ಗಂಡಸಿಗೂ ಒಂದು ಸಲಹೆ ಕೊಡುವೆ ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಮಾಡಿಕೊಳ್ಳಿ ನೋಡಲು ಬ್ಯೂಟಿಫುಲ್ ಆಗಿರುತ್ತಾರೆ ಹಾಗೂ ಬುದ್ಧಿವಂತರಾಗಿರುತ್ತಾರೆ' ಎಂದು ಹೇಳಿದ್ದರು. ಹಲವು ವರ್ಷಗಳ ಓಲ್ಡರ್‌ ಮೆನ್‌ ಜೊತೆ ಸಿನಿಮಾ ಮಾಡುವುದಿಲ್ಲ ಅವರನ್ನು ಪ್ರೀತಿಸುವುದಿಲ್ಲ ಎಂದು ಹೇಳಿ ಸೈಫ್‌ನ ಮದುವೆ ಮಾಡಿಕೊಂಡರು. ಸೈಫ್‌ ಅಲಿ ಖಾನ್ ನನಗಿಂತ 10 ವರ್ಷ ದೊಡ್ಡವರು ಹೀಗಾಗಿ ನಡೆಯುತ್ತದೆ ಅದೇ 10ಕ್ಕೂ ಹೆಚ್ಚು ವರ್ಷ ಜನ ಇದ್ದರೆ ಇಂಟ್ರೆಸ್ಟ್‌ ಇರುವುದಿಲ್ಲ ಎಂದಿದ್ದರು. 

Tap to resize

Latest Videos

ನಮ್ಮ ಬೆಡ್‌ರೂಮ್‌ಗೇ ಬಂದ್ಬಿಡಿ: ಪಾಪರಾಜಿಗಳಿಗೆ ಹೀಗ್ಯಾಕೆ ಹೇಳಿದ್ರು ಸೈಫ್?

ಈ ಹಿಂದೆ ಕರೀನಾ ಕಪೂರ್ ಶಾಹಿದ್ ಕಪೂರ್ ಜೊತೆ ಸಂಬಂಧದಲ್ಲಿದ್ದರು ಮತ್ತು ಇಬ್ಬರ ಎಂಎಂಎಸ್ ಕೂಡ ಲೀಕ್ ಆಗಿತ್ತು. ಇದರ ಹೊರತಾಗಿಯೂ, ಕರೀನಾ ಸೈಫ್ ಅವರನ್ನು ಪ್ರೀತಿಸುತ್ತಿದ್ದರು, ಓಂಕಾರದ ಸಮಯದಲ್ಲಿ ಈ ಪ್ರೀತಿ ಬೆಳಕಿಗೆ  ಬರಲು ಪ್ರಾರಂಭಿಸಿತು, ಆದರೆ ತಶನ್ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಪರಸ್ಪರ ಇಬ್ಬರು ಕಮಿಟ್‌ ಆದರು.ಕಪೂರ್ ಕುಟುಂಬ, ವಿಶೇಷವಾಗಿ ಕರೀನಾ ಅವರ ತಾಯಿ, ತಮ್ಮ ಹೆಣ್ಣುಮಕ್ಕಳಿಗಾಗಿ ಶ್ರೀಮಂತ ಕುಟುಂಬವನ್ನುಬಯಸುತ್ತಿದ್ದರು ಮತ್ತು ಸೈಫ್ ನವಾಬರಾಗಿದ್ದ ಕಾರಣದಿಂದಾಗಿ, ಈ ಮದುವೆಗೆ ಹೆಚ್ಚು ವಿರೋಧವಿರಲಿಲ್ಲ ಎಂಬ ಆರೋಪವಿದೆ.

ಸೈಫ್‌ ಅಲಿ ಖಾನ್‌ಗೆ ಕರ್ನಾಟಕ-ತಮಿಳು ನಾಡು ಗಾಳಿ ಬೀಸಿತ್ತೆ?; ಮೀಸೆ ನೋಡಿ ನೆಟ್ಟಿಗರು ಶಾಕ್

ಕರೀನಾ ಮತ್ತು ಸೈಫ್ ಡೇಟಿಂಗ್ ಸುದ್ದಿ ಬರುತ್ತಲೇ ಇತ್ತು.  ಈ ಬಗ್ಗೆ ಅವರಿಬ್ಬರು ಖಚಿತಪಡಿಸಿರಲಿಲ್ಲ. ಆದರೆ, ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಕರೀನಾ ಮತ್ತು ಸೈಫ್ ಮೊದಲ ಬಾರಿಗೆ ಒಂದೇ ವಾಹನದಲ್ಲಿ ಬಂದರು. ಇಲ್ಲಿಂದ ಇಬ್ಬರ ನಡುವಿನ ಸಂಬಂಧದ ಸುದ್ದಿ  ಅಧಿಕೃತವಾಯಿತು.ಕರೀನಾ ಮತ್ತು ಸೈಫ್ ಲಿವ್-ಇನ್‌ನಲ್ಲಿ ವಾಸಿಸುತ್ತಿದ್ದಾಗ, ಅವರು ತಮ್ಮ ಖಾಸಗಿತನದ ಬಗ್ಗೆ ಚಿಂತಿಸುತ್ತಿದ್ದರು. ಅದೇ ವೇಳೆಗೆ ಇಬ್ಬರೂ ತಮ್ಮ ಮನೆಯವರಿಗೆ ತಮ್ಮ ಮದುವೆ ಬಗ್ಗೆ  ಮಾಧ್ಯಮದಲ್ಲಿ ಪ್ರಚಾರ ಮಾಡಿದರೆ ಮನೆಯಿಂದ ಓಡಿಹೋಗುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದರು.ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮದುವೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹಬ್ಬದ ವಾತಾವರಣವಿತ್ತು. 'ಮಾಧ್ಯಮಗಳು ನಮ್ಮ ಮದುವೆಯ ಬಗ್ಗೆ ಎಲ್ಲಾ ರೀತಿಯ ಮಾಹಿತಿಯನ್ನು ಸಂಗ್ರಹಿಸುತ್ತಿತ್ತು. ಆದರೆ ನಾವು ಗೌಪ್ಯತೆಯನ್ನು ಬಯಸಿದ್ದೇವೆ. ಈ ಬಗ್ಗೆ ನಿರ್ಧರಿಸಿ ನಾವು ಕೋರ್ಟ್‌ನಲ್ಲಿ  ಮದುವೆ ಆಗಿ ಮನೆಗೆ ತೆರಳಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದೇವು' ಎಂದು ಕರೀನಾ ಹೇಳಿದ್ದಾ

click me!