ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ತನ್ನ ಪ್ರೇಯಸಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ ಕುತೂಹಲದ ಪತ್ರ ಬರೆದಿದ್ದಾರೆ. ಅದರಲ್ಲಿ ಏನಿದೆ?
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Monet Laundering case) ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಹಾಗೂ ಆತನಿಂದ ಐಷಾರಾಮಿ ಉಡುಗೊರೆ ಪಡೆದು ತಗ್ಲಾಕ್ಕೊಂಡಿರೋ ರಾ ರಾ ರಕ್ಕಮ್ಮ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇದೆ. ಇದಾಗಲೇ ಜೈಲಿನಿಂದಲೇ ಹಲವು ಪತ್ರಗಳನ್ನು ಸುಕೇಶ್ ಬರೆದಿದ್ದಾರೆ. ಕೆಲ ತಿಂಗಳ ಹಿಂದೆ ಹೋಳಿ ಹಬ್ಬಕ್ಕೆ ವಿಶ್ ಮಾಡಿದ್ದ ಸುಕೇರ್ಶ್, ತಾವು ಬರೆದಿದ್ದ ಪತ್ರದಲ್ಲಿ ಮಾಧ್ಯಮಕ್ಕೆ ಧನ್ಯವಾದ ತಿಳಿಸಿದ್ದರು. ಅದೇ ಪತ್ರದಲ್ಲಿ 'ಬೇಬಿ ಗರ್ಲ್' ಎಂದು ಬರೆದಿದ್ದ ಅವರು, ಆಕೆಗಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ ಎಂದು ಹೇಳಿದ್ದರು. ಅಂದ ಹಾಗೆ ಜಾಕ್ವೆಲಿನ್ ಅವರನ್ನು ಸುಕೇಶ್ ಬೇಬಿ ಗರ್ಲ್ ಎಂದು ಕರೆಯುತ್ತಾರೆ. ಇದಕ್ಕೂ ಮೊದಲು ಸಹ ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ ಪ್ರೀತಿಯ ಸಂದೇಶ ಕಳುಹಿದ್ದರು. ಪ್ರೇಮಿಗಳ ದಿನಾಚರಣೆ ದಿನ ವಿಶ್ ಮಾಡಿದ್ದರು. ರಾಷ್ಟ್ರೀಯ ತನಿಖಾ ದಳದ ಕೋರ್ಟ್‌ಗೆ ಹಾಜರಾಗಿ ಹೊರ ಬರುತ್ತಿದ್ದ ವೇಳೆ ಜಾಕ್ವೆಲಿನ್ ಗೆ ವಿಶ್ ಮಾಡಿದ್ದರು. ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಮಾಡಿದ್ದ ಆರೋಪಗಳ ಬಗ್ಗೆ ಮಾಧ್ಯಮದವರು ಸುಕೇಶ್‌ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸುಕೇಶ್, 'ಅವಳ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಅವಳಿಗೆ ಹೇಳಲು ಕಾರಣಗಳಿವೆ. ನಾನು ಏನನ್ನೂ ಹೇಳಲು ಬಯಸುವುದಿಲ್ಲ' ಎಂದು ಹೇಳಿದರು. ಬಳಿಕ ಮಾಧ್ಯಮದವರು ಜಾಕ್ವೆಲಿನ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಸುಕೇಶ್, ನನ್ನ ಕಡೆಯಿಂದ ಅವಳಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿ' ಎಂದು ಹೇಳಿದ್ದರು.
ಈಗ ಕುತೂಹಲ ಎನ್ನುವಂಥ ಪತ್ರವೊಂದು ವೈರಲ್ ಆಗಿದೆ. ಅದರಲ್ಲಿ ಸುಕೇಶ್ ಅವರು ತಮ್ಮ ಪತ್ರದಲ್ಲಿ ಬೆಕ್ಕು, ನಾಯಿ ಮತ್ತು ಕುದುರೆಯ ಮೇಲೆ ಪ್ರೀತಿ ತೋರಿದ್ದು, ಇದು ಬೆಂಗಳೂರಿನ ವಿಷ್ಯ ಎನ್ನಲಾಗುತ್ತಿದೆ. ಹೌದು! ನಾಯಿ, ಬೆಕ್ಕು ಮತ್ತು ಕುದುರೆಗಳಿಗಾಗಿ ಪೂರ್ಣ ಪ್ರಮಾಣದ ವಿಶ್ವ ದರ್ಜೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವ ಆಸೆಯನ್ನು ಹೊಂದಿದ್ದಾರೆ ಸುಕೇಶ್. ಇದನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಜಾಕ್ವೆಲಿನ್ ಅವರಿಗಾಗಿ ಈ ವಿಶೇಷ ಉಡುಗೊರೆ ಎಂದೂ ಹೇಳಿದ್ದಾರೆ. ಅಷ್ಟಕ್ಕೂ ಈ ಆಸ್ಪತ್ರೆ ಬೆಂಗಳೂರಿನಲ್ಲಿಯೇ ಇದೆಯಂತೆ.
ಲವರ್ಗಾಗಿ ಜವಾನ್ ಟಿಕೆಟ್ ಫ್ರೀ ಕೊಡಿ ಎಂದ ಪ್ರೇಮಿ: ಶಾರುಖ್ರಿಂದ ರೊಮ್ಯಾನ್ಸ್ ಪಾಠ!
ಈ ಬಗ್ಗೆಯೂ ಪತ್ರದಲ್ಲಿ ಉಲ್ಲೇಖ ಮಾಡಿರುವ ಸುಕೇಶ್, ಬೆಂಗಳೂರಿನಲ್ಲಿ ಇರುವ ಆಸ್ಪತ್ರೆಯು 25 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಮತ್ತು 25 ಕೋಟಿ ರೂಪಾಯಿ ಖರ್ಚಾಗಲಿದೆ ಎನ್ನುವ ಮಾಹಿತಿ ನೀಡಿದ್ದಾರೆ. ತಮ್ಮ ಪ್ರೇಯಸಿ ಜಾಕ್ವೆಲಿನ್ಗಾಗಿ ಈ ಸೌಲಭ್ಯವನ್ನು ನಿರ್ಮಿಸುತ್ತಿರುವುದಾಗಿ ಅವರು ಉಲ್ಲೇಖಿಸಿದ್ದಾರೆ. ಸಾಕು ಪ್ರಾಣಿಗಳಿಗಾಗಿ ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ, ಪ್ರಾಣಿಗಳಿಗಾಗಿ ಏನನ್ನಾದರೂ ಮಾಡುವ ಜಾಕ್ವೆಲಿನ್ ಕನಸನ್ನು ನನಸಾಗಿಸುವ ಗುರಿಯನ್ನು ಸುಕೇಶ್ ಹೊಂದಿದ್ದಾರಂತೆ. ಇದಕ್ಕಾಗಿ ಏನಾದರೂ ಒಂದು ಮಾಡಬೇಕು ಎಂದುಕೊಂಡು ಈಗ ಈ ಹೆಜ್ಜೆ ಇಟ್ಟಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಪತ್ರದಲ್ಲಿ ಇರುವುದು ಏನೆಂದರೆ, ಪ್ರಾಣಿಗಳ ಮೇಲಿನ ನಿನ್ನ (ಜಾಕ್ವೆಲಿನ್) ಪ್ರೀತಿ ಅಗಾಧವಾದದ್ದು. ಬೇಬಿ ಡಾಲ್, ನೀನು ಅಂದುಕೊಂಡಂತೆ ಇದು ಅತಿದೊಡ್ಡ ಪ್ರಾಜೆಕ್ಟ್ ಆಗಿದೆ. ದೇಶದಲ್ಲಿ ಅತ್ಯುತ್ತಮ ಪಶುವೈದ್ಯರನ್ನು ಇದಾಗಲೇ ಸಂಪರ್ಕಿಸಲಾಗಿದೆ. ಎಲ್ಲಾ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು, ನಿನ್ನ ಮುಂದಿನ ಜನ್ಮದಿನದ ಜತೆಗೆ 2024 ಆಗಸ್ಟ್ 11ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಗುರಿಯೊಂದಿಗೆ ಸೆಪ್ಟೆಂಬರ್ 11 ರಂದು ನಿರ್ಮಾಣವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಆಸ್ಪತ್ರೆ ನಿರ್ಮಾಣ ಗುತ್ತಿಗೆಯನ್ನು ದಕ್ಷಿಣ ಭಾರತದ ಉನ್ನತ ಮೂಲಸೌಕರ್ಯ ಸಂಸ್ಥೆಗೆ ಮತ್ತು ಯುಎಇಯ ಮತ್ತೊಂದು ಸಂಸ್ಥೆಗೆ ನೀಡಲಾಗಿದೆ. ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಮತ್ತು ಮುಂಗಡವಾಗಿ ಸಂಪೂರ್ಣವಾಗಿ ಪಾವತಿಸಲಾಗಿದೆ. ಎಲ್ಲಾ ಉಪಕರಣಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ ಮತ್ತು ಆಸ್ಪತ್ರೆಯ ಥೀಮ್ ಬಿಳಿ ಮತ್ತು ಗುಲಾಬಿ ಬಣ್ಣದ್ದಾಗಿರುತ್ತದೆ ಎಂದು ಸುಕೇಶ್ (Sukesh Chandrashekhar) ಹೇಳಿದ್ದಾರೆ.
ಬುರ್ಖಾಧಾರಿ ರಾಖಿ ಎದುರು ಶೆರ್ಲಿನ್ ತುಂಡುಡುಗೆ ಡ್ಯಾನ್ಸ್! ನಿನ್ನೆ ವೈರಿ, ಇಂದು ಕಿಸ್ಸಿಂಗ್?