ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ದಂಪತಿ ನಟನೆಯ ಬ್ರಹ್ಮಸ್ತ್ರ ಸಿನಿಮಾಗೂ ಬಾಯ್ಕಟ್ ಬಿಸಿ ತಟ್ಟಿದೆ. ರಣಬೀರ್ ಕಪೂರ್ 9 ವರ್ಷಗ ಹಿಂದೆ ಹೇಳಿದ್ದ ಹೇಳಿಕೆ ಈಗ ಅವರ ಸಿನಿಮಾಗಳಿಗೆ ಕುತ್ತು ತಂದಿದೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ ಮಂದಿಗೆ ಬಾಯ್ಕಟ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೊಂದು ಕಾರಣಕ್ಕೆ ಹಿಂದಿಯ ಬಹುತೇಕ ಸಿನಿಮಾಗಳನ್ನು ಬಾಯ್ಕಟ್ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ. ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ದಂಪತಿ ನಟನೆಯ ಬ್ರಹ್ಮಸ್ತ್ರ ಸಿನಿಮಾಗೂ ಬಾಯ್ಕಟ್ ಬಿಸಿ ತಟ್ಟಿದೆ. ಇತ್ತೀಚಿಗಷ್ಟೆ ಅಲಿಯಾ ಭಟ್ ನೀಡಿದ್ದ ಹೇಳಿಕೆ ಹಾಗೂ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಬ್ರಹ್ಮಾಸ್ತ್ರ ಸಿನಿಮಾವನ್ನು ಬಾಯ್ಕಟ್ ಮಾಡುವಂತೆ ಒತ್ತಾಯ ಕೇಳಿಬಂದಿತ್ತು. ಇದೀಗ ಮತ್ತೊಂದು ಕಾರಣಕ್ಕೆ ಬ್ರಹ್ಮಾಸ್ತ್ರ ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯ ಕೇಳಿಬಂದಿದೆ. ಹೌದು, ರಣಬೀರ್ ಕಪೂರ್ 10 ವರ್ಷಗ ಹಿಂದೆ ಹೇಳಿದ್ದ ಹೇಳಿಕೆ ಈಗ ಅವರ ಸಿನಿಮಾಗಳಿಗೆ ಕುತ್ತು ತಂದಿದೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಷ್ಟಕ್ಕೂ ರಣಬೀರ್ ಕಪೂರ್ ಹೇಳಿದ್ದು ಏನು? ಅಂತಿರಾ, ಗೋಮಾಂಸದ ಬಗ್ಗೆ ರಣಬೀರ್ ಮಾತನಾಡಿದ್ದರು. ಅಲ್ಲದೇ ಅವರು ಗೋಮಾಂಸವನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದನ್ನು ಬಹಿರಂಗ ಪಡಿಸಿದ್ದರು. ಆ ಹಳೆಯ ವಿಡಿಯೋ ಈಗ ವೈರಲ್ ಆಗಿದ್ದು, ಇದು ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ ಬ್ರಹ್ಮಾಸ್ತ್ರ ಸಿನಿಮಾ ಬಾಯ್ಕಟ್ ಮಾಡಿ ಎಂದು ಕರೆಕೊಟ್ಟಿದ್ದಾರೆ.
ಅನೇಕ ವರ್ಷಗಳ ಹಿಂದೆ ಅಂದರೆ 2012ರ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್, 'ನಮ್ಮ ಮನೆಯಲ್ಲಿ ಬೆಳಿಗ್ಗೆಯ ಉಪಹಾರಕ್ಕೆ ಹೆಚ್ಚಾಗಿ ಮಾಂಸಹಾರ ಸೇವಿಸುತ್ತೇವೆ. ಅದು ತುಂಬಾ ಕಷ್ಟ. ನಮ್ಮ ಕುಟುಂಬ ಪೇಶಾವರದಿಂದ ಬಂದಿರುವುದು. ಪೇಶಾವರಿಗಳು ಆಹಾರಪ್ರೀಯರು. ನಾನು ಕೂಡ ಮಟನ್, ಗೋಮಾಂಸ, ರೆಡ್ ಮೀಟ್ ಪ್ರೀಯ. ನಾನು ಗೋಮಾಂಸವನ್ನು ಹೆಚ್ಚಾಗಿ ಇಷ್ಟಪಡುತ್ತೇನೆ' ಎಂದು ಹೇಳಿದ್ದರು.
ಹಿಂದೂಗಳೂ ಗೋವನ್ನು ಪವಿತ್ರವೆಂದು ನಂಬಿದ್ದಾರೆ, ಗೋವನ್ನು ಪೂಜಿಸುತ್ತಾರೆ. ಹಾಗಾಗಿ ರಣಬೀರ್ ಕಪೂರ್ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ಅದರಲ್ಲೂ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಕಪೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಗೋಮಾಂಸ ತಿನ್ನುವ ವ್ಯಕ್ತಿ ದೇವರಾಗಲೂ ಹೇಗೆ ಸಾಧ್ಯ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಚೆನೈನಲ್ಲಿ ಬಾಳೆ ಎಲೆ ಊಟ ಮಾಡಿದ ರಣಬೀರ್ ಕಪೂರ್; ನಾಗಾರ್ಜುನ, ರಾಜಮೌಳಿ ಸಾಥ್
ಇತ್ತೀಚಿಗಷ್ಟೆ ರಿಲೀಸ್ ಆದ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ ನಟನೆಯ ರಕ್ಷಾಬಂಧನ್ ಸಿನಿಮಾಗೆ ಬಾಯ್ಕಟ್ ಬಿಸಿ ತಟ್ಟಿತ್ತು. ತಾಪ್ಸಿ ಪನ್ನು ನಟನೆಯ ದೋಬಾರಾ ಸಿನಿಮಾ ಕೂಡ ಬಾಯ್ಕಟ್ ಸುಳಿಗೆ ಸಿಲುಕ್ಕಿತ್ತು. ಇದೀಗ ರಣಬೀರ್ ಕಪೂರ್ ಕೂಡ ಬಾಯ್ಕಟ್ ಸಮಸ್ಯೆಗೆ ಸಿಲುಕಿದ್ದು ಬ್ರಹ್ಮಾಸ್ತ್ರ ಬಿಡುಗಡೆಗೆ ದೊಡ್ಡ ಸಮಸ್ಯೆ ಆಗುವ ಸಾಧ್ಯತೆ ಇದೆ.
"I am a Beef Guy" ~ Ranbir Kapoor pic.twitter.com/AHWgbTUA2E
— srxhari (@srxhari)ಇಷ್ಟವಿಲ್ಲ ಎಂದರೆ ನನ್ನನ್ನ ನೋಡ್ಬೇಡಿ; ಬಾಯ್ಕಟ್‌ಗೆ ಉತ್ತರಿಸಿದ ಆಲಿಯಾ ಭಟ್ ಸಖತ್ ಟ್ರೋಲ್
ಅಲಿಯಾ ಭಟ್ ಹೇಳಿಕೆ
ಇತ್ತೀಚಿಗಷ್ಟೆ ಅಲಿಯಾ ಭಟ್ ಸಂದರ್ಶನವೊಂದರಲ್ಲಿ ಬಾಯ್ಕಟ್ ಬಗ್ಗೆ ಮಾತನಾಡಿದ್ದರು. ಅಲಿಯಾ, 'ನೀವು ನನ್ನನ್ನು ಇಷ್ಟಪಡದಿದ್ದರೆ, ನನ್ನನ್ನು ನೋಡಲೇ ಬೇಡಿ' ಎಂದು ಹೇಳಿದ್ದರು. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿತ್ತು. ಆಲಿಯಾ ಭಟ್ ಈ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಆಲಿಯಾ ಭಟ್ ಬ್ರಹ್ಮಾಸ್ತ್ರ ಸಿನಿಮಾ ಮೇಲು ಎಫೆಕ್ಟ್ ಆಗಿದ್ದು ಬಾಯ್ಕಟ್ ಟ್ರೆಂಡ್ ಜೋರಾಗಿತ್ತು. ಇದರ ಬೆನ್ನಲ್ಲೇ ಈಗ ರಣಬೀರ್ ಕಪೂರ್ ಹಳೆಯ ವಿಡಿಯೋ ವೈರಲ್ ಆಗಿರುವುದು ಸಿನಿಮಾಗೆ ಮತ್ತೊಂದು ದೊಡ್ಡ ಹೊಡೆತಬಿದ್ದಂತೆ ಆಗಿದೆ.