Rakhi Sawant surgery: ಹೊಟ್ಟೆ ಗಂಟು ತೆಗೆಸಿಕೊಳ್ಳಲು 4 ಗಂಟೆ ಆಪರೇ‍ಷನ್ ಮಾಡಿಸಿಕೊಂಡ ರಾಖಿ!

Published : Sep 01, 2022, 07:48 AM IST
Rakhi Sawant surgery: ಹೊಟ್ಟೆ ಗಂಟು ತೆಗೆಸಿಕೊಳ್ಳಲು 4 ಗಂಟೆ ಆಪರೇ‍ಷನ್ ಮಾಡಿಸಿಕೊಂಡ ರಾಖಿ!

ಸಾರಾಂಶ

ಆಪರೇಷನ್‌ ನಂತರ ಬಾಯ್‌ಫ್ರೆಂಡ್‌ ಜೊತೆ ಡ್ಯಾನ್ಸ್ ಮಾಡಿದ ರಾಖಿ ಸಾವಂತ್ ಟ್ರೋಲ್. ಹೊಟ್ಟೆಯಲ್ಲಿದದ್ದು ಗಂಟಾ ಅಥವಾ ಮಗುನಾ ಎಂದು ಟೀಕೆ....

ಬಾಲಿವುಡ್ ನ್ಯೂಸ್‌ ಬ್ರೇಕರ್ ರಾಖಿ ಸಾವಂತ್‌ (Rakhi Sawant) ಹೊಟ್ಟೆಯಲ್ಲಿ ಗಂಟು ಪತ್ತೆಯಾಗಿದ್ದು ಆಪರೇಷನ್ ಮಾಡಿಸಿಕೊಂಡಿದ್ದಾರಂತೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಆಪರೇಷನ್ (Operation) ಮುನ್ನ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ವಿಚಾರ ತಿಳಿಸಿದ್ದಾರೆ. ಬೇಸರದ ಸಂಗತಿ ಏನೆಂದರೆ ರಾಖಿ ಆಪರೇಷನ್‌ ಮುನ್ನ ಡ್ಯಾನ್ಸ್ ಮಾಡಿರುವುದಕ್ಕೆ ನೆಟ್ಟಿಗರು ಟ್ರೋಲ್ (Troll) ಮಾಡಿದ್ದಾರೆ. ಇದು ಗಂಟಿದೆ ಎಂದು ಮಾಡಿರುವ ಆಪರೇಷನ್ ಅಲ್ಲ ಗರ್ಭಪಾತ ಇರಬೇಕು ಎಂದಿದ್ದಾರೆ.....

'ಜೀವನದಲ್ಲಿ ಎಷ್ಟೇ ಕಷ್ಟ ಇರಲಿ ಎಂಥಾ ಸಂದರ್ಭವೇ ಎದುರಾಗಲಿ ಡ್ಯಾನ್ಸ್‌ ನನ್ನ ಕೈಯನ್ನು ಬಿಡುವುದಿಲ್ಲ. ಆಸ್ಪತ್ರೆಯಲ್ಲಿ ಆಪರೇಷನ್‌ಗೂ ಮುನ್ನ ಆಡಿರುವ ಡ್ಯಾನ್ಸ್‌' ಎಂದು ರಾಖಿ ಬರೆದುಕೊಂಡಿದ್ದಾರೆ. 'ಏನ್‌ ಸರ್ಜರಿ ಮಾಡಿಸಿಕೊಳ್ಳುತ್ತಿದ್ದೀರಾ? ನೋಡಲು ಚೆನ್ನಾಗಿದ್ದೀರಾ ನಿಮಗೆ ಏನು ಸಮಸ್ಯೆ ನಿಮ್ಮ ಜೊತೆ ಆದಿಲ್ ಇರುವಾಗ ನೀವು ಕೂಲ್ ಕೂಲ್' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು 'ಆದಿಲ್ ಡ್ಯಾನ್ಸ್‌ ಫನ್ನಿಯಾಗಿದೆ ನಿಮ್ಮ ಜೊತೆ ಸೇರಿಕೊಂಡು ಆದಿಲ್ ಕೂಡ ಲೂಸ್ ಆಗಿದ್ದಾನೆ. ಇದು ಗರ್ಭಪಾತ ಇರಬೇಕು ಅದಿಕ್ಕೆ ನಿನ್ನ ಜೊತೆಗಿದ್ದಾನೆ ಇಲ್ಲದಿದ್ದರೆ ಹಣ ಕೊಟ್ಟು ಓಡಿ ಹೋಗುತ್ತಿದ್ದ' ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾನೆ.

ಮೈಸೂರು ಬಾಯ್‌ಫ್ರೆಂಡ್‌ ಜೊತೆ ದುಬೈಗೆ ಹಾರಿದ ರಾಖಿ ಸಾವಂತ್ ಗರ್ಭಿಣಿ?

ಬಾಯ್‌ಫ್ರೆಂಡ್ ಆದಿಲ್:

ರಾಖಿ ಸಾವಂತ್‌ಗೂ ಮದುವೆಗೂ ಆಗ್ಬರೋದಿಲ್ಲ. ಜೊತೆಗಿದ್ದವರು ಮೂರ್ನಾಲ್ಕು ತಿಂಗಳಿಗೆ ಅಬ್ಬಬ್ಬಾ ಅಂದ್ರೆ 1 ವರ್ಷಕ್ಕೆ ಬಿಟ್ಟು ಹೋಗುತ್ತಾರೆ. ಸದ್ಯಕ್ಕೆ ರಾಖಿ ಮೈಸೂರು ಹುಡುಗನ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಆದಿಲ್ ಮೂಲತಃ ಮೈಸೂರಿನವರು ದುಬೈನಲ್ಲಿ ಉದ್ಯಮಿ ಆಗಿದ್ದಾರೆ. ಇವರಿಬ್ಬರ ಪ್ರೀತಿ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತದೆ. ಆಗಾಗ ಆದಿಲ್‌ ಜೊತೆಗೂ ಬ್ರೇಕಪ್ ಮಾಡಿಕೊಂಡಿದ್ದಾರೆ, ಪ್ಯಾಪರಾಜಿಗಳ ಸಹಾಯದಿಂದ ಪ್ಯಾಚಪ್ ಕೂಡ ಮಾಡಿಕೊಂಡಿದ್ದಾರೆ.

 

ಬಾಯ್ ಫ್ರೆಂಡ್‌ನಿಂದ ಸಿಕ್ತು BMW ಕಾರು:

ಅಂದಹಾಗೆ ರಾಖಿ ಸಾವಂತ್ ಬಾಯ್ ಫ್ರೆಂಡ್ ಆದಿಲ್ ಬಗ್ಗೆ ಈ ಮೊದಲೇ ಬಹಿರಂಗ ಪಡಿಸಿದ್ದರು. ಅಲ್ಲದೇ ತನ್ನ ಬಾಯ್ ಫ್ರೆಂಡ್ ಬಿಎಂಡ್ಲ್ಯೂ ಕಾರನ್ನು ಗಿಫ್ಟ್ ಮಾಡಿದ್ದಾನೆ ಎಂದು ಹೇಳಿದ್ದರು. ನನಗೆ ಕಾರನ್ನು ಗಿಫ್ಟ್ ಮಾಡಿದ ನನ್ನ ಆತ್ಮೀಯ ಸ್ನೇಹಿತ ಆದಿಲ್‌ಗೆ ಧನ್ಯವಾದಗಳು. ಇಂತ ದೊಡ್ಡ ಸರ್ಪ್ರೈಸ್ ಗೆ ಧನ್ಯವಾದಗಳು ಎಂದು ಹೇಳಿದ್ದರು. ಅಲ್ಲದೇ ಆದಿಲ್ ಬಗ್ಗೆ ರಾಖಿ ಸಾವಂತ್ ಈವೆಂಟ್ ಒಂದರಲ್ಲಿ ಹಾಡಿ ಹೊಗಳಿದ್ದರು. ಮದುವೆ ಮುರಿದು ಬಿದ್ದ ಬಳಿಕ ಖಿನ್ನತೆಯಿಂದ ಹೊರಬರಲು ಆದಿಲ್ ಸಹಾಯ ಮಾಡಿದರು ಎಂದು ಹೇಳಿದ್ದರು. ಅಲ್ಲದೆ ತನ್ನ ತಂಗಿ ಜೊತೆ ಸೇರಿ ನನ್ನನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಲು ಬಿ ಎಂ ಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದರು.

ಆದಿಲ್ ಯೂಸ್ ಮಾಡಿ ಬಿಸಾಕ್ತಾನೆ; ಮೈಸೂರು ಬಾಯ್‌ಫ್ರೆಂಡ್ ಬಗ್ಗೆ ಎಕ್ಸ್ ಪತಿ ಹೇಳಿದ್ದಕ್ಕೆ ರಾಖಿ ಕಣ್ಣೀರು

BMW ಬಳಿಕ ಮನೆ ಗಿಫ್ಟ್: 

ಆದಿಲ್ ಪ್ರೇಯಸಿ ರಾಖಿ ಸಾವಂತ್‌ಗೆ ಮನೆ ಗಿಫ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಆದಿಲ್ ನನ್ನ ಹೆಸರಿನಲ್ಲಿ ದುಬೈನಲ್ಲಿ ಮನೆ ಖರೀದಿಸಿದ್ದಾರೆ. ಈ ಮೊದಲು ನನಗೆ ಬಿಎಂಡ್ಲ್ಯೂ ಉಡುಗೊರೆ ನೀಡಿದ್ದರು. ಅವನ ಪ್ರೀತಿಯೇ ನನ್ನ ಸಂಪತ್ತು. ಅವನ ಪ್ರೀತಿ ನಿಜ. ಅವನು ನಿಷ್ಠಾವಂತ ಎಂದು ಹಾಡಿ ಹೊಗಳಿದ್ದಾರೆ.

ಇನ್ನು ಆದಿಲ್ ತನ್ನ ಪ್ರೇಯಸಿ ರಾಖಿ ಸಾವಂತ್ ಬಗ್ಗೆ ಮಾತನಾಡಿ, ಹೆಚ್ಚು ಏನು ಹೇಳುವುದಿಲ್ಲ. ಕಡಿಮೆ ಗ್ಲಾಮರಸ್ ಮತ್ತು ಹೆಚ್ಚು ಕವರ್ ಆಗಿರುವ ಡ್ರೆಸ್ ಹಾಕಬೇಕು ಎಂದು ಭಾವಿಸಬೇಕು ಎಂದು ಹೇಳುತ್ತೀನಿ ಎಂದು ಹೇಳಿದ್ದಾರೆ. ರಾಖಿ ಸಾವಂತ್‌ಗಿಂತ 6 ವರ್ಷದ ಚಿಕ್ಕವರಾದ ಆದಿಲ್ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?