Ganesh Chaturthi 2022; ಶಾರುಖ್ ಮನೆಯಲ್ಲಿ ಅದ್ದೂರಿ ಗಣೇಶ ಸಂಭ್ರಮ, ಮೋದಕ ತಿಂದು ಹೇಳಿದ್ದೇನು?

Published : Sep 01, 2022, 11:10 AM IST
Ganesh Chaturthi 2022; ಶಾರುಖ್ ಮನೆಯಲ್ಲಿ ಅದ್ದೂರಿ ಗಣೇಶ ಸಂಭ್ರಮ, ಮೋದಕ ತಿಂದು ಹೇಳಿದ್ದೇನು?

ಸಾರಾಂಶ

ಶಾರುಖ್ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮ ಜೋರಾಗಿತ್ತು. ಅವರ ಮುಂಬೈ ನಿವಾಸ ಮನ್ನತ್​ನಲ್ಲಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಬ್ಬದ ಸಂಭ್ರಮದ ಕಾರಣ ಶೂಟಿಂಗ್​ ಕೆಲಸಗಳಿಗೆ ಶಾರುಖ್ ಖಾನ್ ಬ್ರೇಕ್​ ನೀಡಿದ್ದಾರೆ. ಕುಟುಂಬದ ಜೊತೆ ಸೇರಿ ಹಬ್ಬ ಆಚರಿಸಿದ್ದಾರೆ. ಮನ್ನತ್ ಸಿನಿಮಾದಲ್ಲಿ ಗಣೇಶ ಹಬ್ಬದ ಸಂಭ್ರಮದ ಫೋಟೋಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.  

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಗಣೇಶನನ್ನು ಕೂರಿಸಿ ಅದ್ದೂರಿಯಾಗಿ ಪೂಜಿಸಿ ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಕೂಡ ಅದ್ದೂರಿಯಾಗಿ ಗಣೇಶ ಹಬ್ಬವನ್ನುುಆಚರಿಸಿದ್ದಾರೆ. ಬಾಲಿವುಡ್‌ನಲ್ಲಿ ಜಾತಿ, ಧರ್ಮ ಭೇದವಿಲ್ಲದೇ ಹಬ್ಬವನ್ನು ಆಚರಣೆ ಮಾಡುತ್ತಾರೆ. ಬಾಲಿವುಡ್ ಖಾನ್‌ಗಳು ಸಹ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಾರೆ. ಶಾರುಖ್ ಖಾನ್ ಮನೆಯಲ್ಲೂ ಗಣೇಶ ಚತುರ್ಥಿ ಸಂಭ್ರಮ ಜೋರಾಗಿತ್ತು. ಅವರ ಮುಂಬೈ ನಿವಾಸ ಮನ್ನತ್​ನಲ್ಲಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಬ್ಬದ ಸಂಭ್ರಮದ ಕಾರಣ ಶೂಟಿಂಗ್​ ಕೆಲಸಗಳಿಗೆ ಶಾರುಖ್ ಖಾನ್ ಬ್ರೇಕ್​ ನೀಡಿದ್ದಾರೆ. ಕುಟುಂಬದ ಜೊತೆ ಸೇರಿ ಹಬ್ಬ ಆಚರಿಸಿದ್ದಾರೆ. ಮನ್ನತ್ ಸಿನಿಮಾದಲ್ಲಿ ಗಣೇಶ ಹಬ್ಬದ ಸಂಭ್ರಮದ ಫೋಟೋಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.  

ಗಣಪತಿಯ ಫೋಟೋ ಶೇರ್ ಮಾಡಿ ಮೋದಕದ ಬಗ್ಗೆ ಬರೆದುಕೊಂಡಿದ್ದಾರೆ. ‘ಮನೆಗೆ ಗಣಪತಿಯನ್ನು ಸ್ವಾಗತಿಸಲಾಗಿದೆ. ನಂತರ ಸವಿದ ಮೋದಕ ತುಂಬ ರುಚಿಕರವಾಗಿತ್ತು. ಪರಿಶ್ರಮ ಮತ್ತು ದೇವರ ಮೇಲಿನ ನಂಬಿಕೆಯಿಂದ ನಾವು ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು’ ಎಂದು ಶಾರುಖ್​ ಖಾನ್​ ಪೋಸ್ಟ್​ ಮಾಡಿದ್ದಾರೆ. ತಮ್ಮ ಮನೆಯಲ್ಲಿ ಕೂರಿಸಿದ ಗಣೇಶನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ಶಾರುಖ್ ಖಾನ್ ಮನೆಯಲ್ಲಿ ಪ್ರತಿವರ್ಷ ಗಣೇಶ ಹಬ್ಬವನ್ನು ಆಚರಿಸುತ್ತಾರೆ. ಮುಸ್ಲಿಂ ಆಗಿದ್ದರೂ ಹಿಂದು ಹಬ್ಬವನ್ನು ಆಚರಿಸುವ ಶಾರುಖ್ ಖಾನ್ ಕುಟುಂಬಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶಾರುಖ್ ಮನೆಯ ಗಣಪತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 8 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್​ ಮಾಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ಶಾರುಖ್​ ಖಾನ್​ ಅವರು ಎಲ್ಲ ಧರ್ಮವನ್ನು ಗೌರವಿಸುವಂತಹ ವ್ಯಕ್ತಿ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಎಲ್ಲರೂ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಕೋರಿದ್ದಾರೆ. 

ಸಲ್ಮಾನ್ ಖರೀದಿಸಬೇಕಿದ್ದ ಮನ್ನತ್ ಬಂಗಲೆ ಶಾರುಖ್ ಪಾಲಾಗಿದ್ದು ಹೇಗೆ? ಇಂಟ್ರಸ್ಟಿಂಗ್ ವಿಚಾರ ಬಹಿರಂಗ

ಇನ್ನು ಬಾಲಿವುಡ್‌ನಲ್ಲಿ ಶಾರುಖ್​ ಖಾನ್​ ಮಾತ್ರವಲ್ಲದೇ ಆಲಿಯಾ ಭಟ್​, ಶಿಲ್ಪಾ ಶೆಟ್ಟಿ, ಅಮಿತಾಭ್​ ಬಚ್ಚನ್​, ಶ್ರದ್ಧಾ ಕಪೂರ್​ ಸೇರಿದಂತೆ ಎಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಗಣೇಶ ಚತುರ್ಥಿಯನ್ನು ಸಡಗರದಿಂದ ಆಚರಿಸಲಾಗಿದೆ. ಶಿಲ್ಪಾ ಶೆಟ್ಟಿ ಮನೆಯಲ್ಲೂ ಅದ್ದೂರಿಯಾಗಿ ಗಣೇಶ ಹಬ್ಬ ಸಂಭ್ರಮಿಸು್ತಾರೆ. ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮನೆಯಲ್ಲೂ ಅದ್ದೂರಿಯಾಗಿ ಗಣೇಶ ಹಬ್ಬ ಆಚರಿಸಲಾಗತ್ತೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಅರ್ಪಿತಾ ಖಾನ್ ಮನೆಯ ಗಣೇಶ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ರಣವೀರ್ ಸಿಂಗ್ ಬಟ್ಟೆ ಧರಿಸದಿದ್ದಕ್ಕಾಗಿ ಆರೆಸ್ಟ್‌ ಆಗುತ್ತಾರೆಂದು ಭವಿಷ್ಯ ಹೇಳಿದ್ದ ಶಾರುಖ್‌ ಖಾನ್

ಶಾರುಖ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಕಿಂಗ್ ಖಾನ್ ತೆರೆಮೇಲೆ ಬರದೆ ಅನೇಕ ವರ್ಷಗಳೆ ಆಗಿವೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಸಿನಿಮಾ ಮಾಡುವುದನ್ನೇ ಬಿಟ್ಟಿದ್ದರು. ಇದೀಗ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ಶಾರುಖ್ ಕೈಯಲ್ಲಿವೆ. ಈಗಾಗಲೇ ಪಠಾಣ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ.  ಜವಾನ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಜೊತೆಗೆ ಡಂಕಿ ಕೂಡ ಶಾರುಖ್ ಕೈಯಲ್ಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?