
ಮುಂಬೈ: ಪ್ರತಿವರ್ಷ ಬಾಲಿವುಡ್‌ನಲ್ಲಿ ನೂರಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದ್ರೆ ಗೆಲುವಿನ ಜಯಮಾಲೆ ಬೆರಳಣಿಕೆಯ ಸಿನಿಮಾಗಳಿಗೆ ಮಾತ್ರ ಸಿಗುತ್ತದೆ. ಒಂದಿಷ್ಟು ಚಿತ್ರಗಳು ದೊಡ್ಡಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿ ಮೊದಲ ದಿನವೇ ಸೋಲಿನ ಸುಳಿಗೆ ಸಿಲುಕುತ್ತವೆ. ಸಿನಿಮಾಗಳ ಸೋಲಿನಿಂದ ನಿರ್ಮಾಪಕರು ಬೀದಿಗೆ ಬಂದಿರುತ್ತಾರೆ. ಇಂತಹ ಸೋಲುಗಳನ್ನು ಅಕ್ಷಯ್ ಕುಮಾರ್, ಅಜಯ್ ದೇವಗನ್ ಹೃತಿಕ್ ರೋಷನ್, ಸಲ್ಮಾನ್ ಖಾನ್ ಸೇರಿದಂತೆ ದೊಡ್ಡ ಸ್ಟಾರ್‌ಗಳು ಸಹ ನೋಡಿದ್ದಾರೆ. ಬಾಲಿವುಡ್ ಅಂಗಳದ 10 ಸೂಪರ್ ಫ್ಲಾಪ್ ಸಿನಮಾಗಳ ಕುರಿತ ಮಾಹಿತಿ ಇಲ್ಲಿದೆ.
1.ಕೈಟ್ಸ್ (Kites)
2010ರಲ್ಲಿ ಬಿಡುಗಡೆಯಾದ ಕೈಟ್ಸ್ ಸಿನಿಮಾದಲ್ಲಿ ಹೃತಿಕ್ ರೋಷನ್, ಕಂಗನಾ ರಣಾವತ್ ಸೇರಿದಂತೆ ಹಲವು ಸ್ಟಾರ್ ಕಲಾವಿದರು ನಟಿಸಿದ್ದರು. 82 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಕೇವಲ 47.84 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
2.ಗುಜಾರಿಷ್ (Guzarish)
2010ರಲ್ಲಿ ಬಿಡುಗಡೆಯಾದ ಗುಜಾರಿಷ್ ಸಿನಿಮಾದಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಜೊತೆಯಾಗಿ ನಟಿಸಿದ್ದರು. ವಿಭಿನ್ನ ಕಥೆಯನ್ನು ಹೊಂದಿದ್ರೂ ಸಿನಿಮಾಗೆ ಸೋಲಾಯ್ತು. 74 ಕೋಟಿಯ ಗುಜಾರಿಷ್ ಸಿನಿಮಾ 29.56 ಕೋಟಿ ರೂಪಾಯಿ ಗಳಿಸಿತ್ತು.
3.ಪ್ಲೇಯರ್ಸ್ (Players)
ಮಲ್ಟಿ ಸ್ಟಾರ್ ಸಿನಿಮಾ ಪ್ಲೇಯರ್ಸ್ 2012ರಲ್ಲಿ ಬಿಡುಗಡೆಯಾಗಿತ್ತು. ಅಭಿಷೇಕ್ ಬಚ್ಚನ್, ಬಿಪಾಶ ಬಸು, ನೀಲ್ ನಿತಿನ್ ಮುಕೇಶ್, ಸೋನಂ ಕಪೂರ್ ಸೇರಿದಂತೆ ಹಲವು ಸ್ಟಾರ್‌ಗಳು ನಟಿಸಿದ ಈ ಸಿನಿಮಾಗೆ 55 ಕೋಟಿ ಹಣ ಹಾಕಲಾಗಿತ್ತು. ಡಿಸಾಸ್ಟರ್ ಪಟ್ಟಿಗೆ ಸೇರಿದ ಪ್ಲೇಯರ್ಸ್ 29.90 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿತು.
4.ತೇಜ್ (Tezz)
ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಚಿತ್ರ ತೇಜ್ 2012ರಲ್ಲಿ ಬಿಡುಗಡೆಯಾಗಿತ್ತು. ಹಾಕಿದ 52 ಕೋಟಿ ಬಂಡವಾಳದಲ್ಲಿ 15.91 ಕೋಟಿ ರೂಪಾಯಿ ಮಾತ್ರ ಹಿಂದಿರುಗಿ ಬಂದಿತ್ತು.
5.ಜೋಕರ್ (Joker)
ಅಕ್ಷಯ್ ಕುಮಾರ್ ಮತ್ತು ಸೋನಾಕ್ಷಿ ಸಿನ್ಹಾ ನಟನೆಯ ಜೋಕರ್ ಸಿನಿಮಾ ಏಲಿಯನ್‌ಗಳ ಕುರಿತ ಕಥೆಯನ್ನು ಹೊಂದಿತ್ತು. 47 ಕೋಟಿಯ ಈ ಚಿತ್ರ ಕೇವಲ 20.23 ಕೋಟಿ ರೂಪಾಯಿ ಹಣ ಗಳಿಸಿತ್ತು. 2012ರಲ್ಲಿ ಜೋಕರ್ ಸಿನಿಮಾ ಬಿಡುಗಡೆಯಾಗಿತ್ತು.
6.ಒನ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ (Once Upon time in mumbai Dubara)
ಸೀಕ್ವೆಲ್ ಕಥೆಯನ್ನು ಹೊಂದಿದ್ದ ಒನ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಕಲೆಕ್ಷನ್ ಮಾಡುವಲ್ಲಿ ಸೋತಿತ್ತು. 100 ಕೋಟಿ ಬಜೆಟ್‌ನ ಈ ಸಿನಿಮಾ 58.49 ಕೋಟಿ ರೂಪಾಯಿ ಹಣವನ್ನು ಕಲೆಕ್ಷನ್ ಮಾಡಿತ್ತು.
7.ಜಂಜೀರ್ (Zanjeer)
ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ನಟನೆಯ ಈ ಸಿನಿಮಾ 2013ರಲ್ಲಿ ಬಿಡುಗಡೆಯಾಗಿತ್ತು. ರಾಮ್‌ಚರಣ್‌ಗೆ ಜೊತೆಯಾಗಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು. 60 ಕೋಟಿಯ ಈ ಸಿನಿಮಾ 13.07 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡುವಲ್ಲಿ ಶಕ್ತವಾಗಿತ್ತು.
8.ಬಾಂಬೆ ವೆಲ್ವೆಟ್ (Bombay Velvet)
ಅನುರಾಗ್ ಕಶ್ಯಪ್ ನಿರ್ದೇಶನದ ಬಾಂಬೆ ವೆಲ್ವೆಟ್ ಸಿನಿಮಾವನ್ನು 118 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಯ್ತು. ಆದರೆ ಕೇವಲ 22.80 ಕೋಟಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಇದನ್ನೂ ಓದಿ: ಒಂದಲ್ಲ, ಎರಡಲ್ಲ ಬರೋಬ್ಬರಿ 180 ಫ್ಲಾಪ್ ಸಿನಿಮಾ ಕೊಟ್ಟ ನಟ; ಇವರ ಹೆಸರಿನಲ್ಲಿದೆ ಸಿನಿ ಅಂಗಳದ ಕೆಟ್ಟ ದಾಖಲೆ
9.ಆಲ್ ಇಸ್ ವೆಲ್ (All is Well)
2015ರಲ್ಲಿ ತೆರೆ ಕಂಡ ಆಲ್ ಇಸ್ ವೆಲ್ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಆಸಿನ್ ಮತ್ತು ರಿಷಿ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಉಮೇಶ್ ಶುಕ್ಲಾ ಈ ಚಿತ್ರಕ್ಕೆ 24 ಕೋಟಿ ಹಾಕಿದ್ರಿ, ಆದ್ರೆ ಕೇವಲ 12.53 ಕೋಟಿ ಮಾತ್ರ ಇವರ ಜೇಬು ಸೇರಿತ್ತು.
10.ಶಾನ್‌ದಾರ್ (Shandar)
ಶಾನ್‌ದಾರ್ ಸಿನಿಮಾದ ಪ್ರದರ್ಶನ ಬಾಕ್ಸ್ ಆಫಿಸ್‌ನಲ್ಲಿ ನೀರಸವಾಗಿತ್ತು. ಶಾಹಿದ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ ಈ ಸಿನಿಮಾ 2015ರಲ್ಲಿ ಬಿಡುಗಡೆಯಾಗಿತ್ತು. 69 ಕೋಟಿಯ ಈ ಸಿನಿಮಾ, 39.48 ಕೋಟಿ ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: 450 ಕೋಟಿ ಸುರಿದ್ರೂ ವೇಸ್ಟ್ ಆಯ್ತು; ಹಾಡಿಗಾಗಿಯೇ 75 ಕೋಟಿ ಹಣ ಖರ್ಚು; ಇದುವೇ 2025ರ ಫಸ್ಟ್ ಫ್ಲಾಪ್ ಸಿನಿಮಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.