
ಹಾಲಿವುಡ್ ನ ಖ್ಯಾತ ಗಾಯಕಿ ರಿಹಾನ್ನಾ (Hollywood singer Rihanna). ತಮ್ಮ ಅದ್ಭುತವಾದ ಸಂಗೀತದಿಂದ ದೇಶ ವಿದೇಶದಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ. ಕಳೆದ ವರ್ಷ ಅಂಬಾನಿ ಮಗನ ಮದುವೆ ಸಮಾರಂಭದಲ್ಲಿ ಕಾರ್ಯಕ್ರಮ ನೀಡಲು ರಿಹಾನ್ನಾ ಆಗಮಿಸಿದ್ದು, ಅವರಿಗೆ ಬರೋಬ್ಬರಿ 66 ಕೋಟಿ ರೂಪಾಯಿ ನೀಡಲಾಗಿತ್ತು. ಈ ಸುದ್ದಿ ಸಖತ್ ಟ್ರೆಂಡಿಂಗ್ ನಲ್ಲಿತ್ತು. ಇದೀಗ ರಿಹಾನ್ನಾ ತನ್ನ ಮಕ್ಕಳ ಡೆಲಿವರಿ ಸಮಯದಲ್ಲಿ ಸ್ಟೈಲಿಶ್ ಆಗಿ ಸನ್ ಗ್ಲಾಸ್ ಧರಿಸಿ, ಜ್ಯುವೆಲ್ಲರಿ ಧರಿಸಿ ಜನ್ಮ ನೀಡಿದ್ದಾರೆ.
83 ಕೋಟಿ ಪಡೆದ್ರೂ ಹಾಕಳ್ಳೋಕೆ ಬಟ್ಟೆ ಸಿಗಲಿಲ್ವಾ? ರಿಹಾನಾ ಬಳಿಕ ಜಸ್ಟಿನ್ ಬೀಬರ್ ಟ್ರೋಲ್
ಖ್ಯಾತ ಗಾಯಕಿ ರಿಹಾನ್ನಾ ಇತ್ತೀಚೆಗೆ ತನ್ನ ಹೆರಿಗೆ ಕೋಣೆಯಿಂದ ಮಕ್ಕಳ ಜೊತೆಗಿನ ಸುಂದರವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ, ರಿಹಾನ್ನಾ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಚಿತ್ರಗಳಲ್ಲಿ, ರಿಹಾನ್ನಾ ತನ್ನ ಮಕ್ಕಳೊಂದಿಗೆ ಆಭರಣಗಳು ಮತ್ತು ಸನ್ಗ್ಲಾಸ್ (sun glass) ಧರಿಸಿ ಹೆರಿಗೆ ಕೋಣೆಯಲ್ಲಿರೋದನ್ನು ಸಹ ಕಾಣಬಹುದು.. ಇತ್ತೀಚೆಗೆ, ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ರಿಹಾನ್ನಾ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಇಬ್ಬರು ಗಂಡು ಮಕ್ಕಳನ್ನು ಎದೆಗೆ ಹತ್ತಿರವಾಗಿ ಹಿಡಿದಿದ್ದಾರೆ. ಈ ಚಿತ್ರಗಳನ್ನು ಶೇರ್ ಮಾಡುವಾಗ, ರಿಹಾನ್ನಾ ಕುತ್ತಿಗೆಯಲ್ಲಿ ಸ್ಟೈಲಿಶ್ ಆಗಿ ಆಭರಣಗಳು ಮತ್ತು ಕಣ್ಣಿಗೆ ಸ್ಟೈಲಿಶ್ ಆಗಿ ಸನ್ಗ್ಲಾಸ್ ಧರಿಸಿರೋದನ್ನು ಕಾಣಬಹುದು. ಇದರ ಜೊತೆಗೆ ರಿಹಾನ್ನ ತನ್ನ ಗಂಡು ಮಕ್ಕಳ ಹೆಸರನ್ನು ಸಹ ರಿವೀಲ್ ಮಾಡಿದ್ದಾರೆ.
ರಿಹಾನ್ನಾ ಕ್ಯಾಪ್ಶನಲ್ಲಿ ಏನು ಬರೆದಿದ್ದಾರೆ ಅಂದ್ರೆ, 'ನಾನು ಇಲ್ಲಿಯವರೆಗೆ ಮಹಿಳೆಯಾಗಿ ಮಾಡಿದ ನನ್ನ ಸಣ್ಣ ಪವಾಡಗಳು! ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಕ್ಕಳಿಗೆ ಹೆಸರನ್ನೂ ಸಹ ಕಂಡು ಕೊಂಡಿದ್ದು, RZA ಮತ್ತು Riot Rose ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಹೌದು, ನಾನು ಆಭರಣಗಳು ಮತ್ತು ಸನ್ ಗ್ಲಾಸ್ ಗಳನ್ನು ಧರಿಸಿಯೇ ಮಕ್ಕಳಿಗೆ ಜನ್ಮ ನೀಡಿದ್ದೇನೆ, ಕೇಳಬೇಡಿ, ಬಹಳಷ್ಟು ನಡೆಯುತ್ತಿದೆ ಎನ್ನುತ್ತಾ ಪ್ರಶ್ನಿಸವವರಿಗೆ ಉತ್ತರ ನೀಡಿದ್ದಾರೆ. ಇನ್ನು ಅಭಿಮಾನಿಗಳು ಸಹ ರಿಹಾನ್ನ ಅವರ ಈ ಚಿತ್ರಕ್ಕೆ ಕಾಮೆಂಟ್ ಮಾಡಿದ್ದು ಕೇವಲ ನೀವು ಮಾತ್ರ ನಿಮ್ಮ ಮಗುವಿಗೆ ಈ ರೀತಿ ಜನ್ಮ ನೀಡಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬರು ನೀವು ನಮ್ಮನ್ನು ಹೆದರಿಸಿದ್ದೀರಿ ಮತ್ತೆ ಮಕ್ಕಳಾಗಿದೆ ಎಂದು ಅಂದುಕೊಂಡೆವು ಎಂದರೆ, ಮತ್ತೊಬ್ಬರು ನೀವು ಕ್ವೀನ್ ಎಂದಿದ್ದಾರೆ. ಇನ್ನೊಬ್ಬರು ಡೆಲಿವರಿ ಸಮಯದಲ್ಲೂ ನೀವು ಬ್ಯಾಡ್ ಗರ್ಲ್ ಆಗಿದ್ದೀರಾ ಎಂದು ಕೇಳಿದ್ದಾರೆ.
ಜಾಮ್‌ನಗರದ ತಾಪ ಹೆಚ್ಚಿಸಿದ ರಿಹಾನ್ನಾ ಡಾನ್ಸ್: ಇವಳೇನು ಚಡ್ಡಿ ಹಾಕಿಲ್ವಾ ಎಂದ ನೆಟ್ಟಿಜೆನ್ಸ್
ಅಂದ ಹಾಗೇ ರಿಹಾನ್ನ ತನ್ನ ಮತ್ತು ತನ್ನ ಬಾಯ್ ಫ್ರೆಂಡ್ ಅಮೇರಿಕನ್ ರಾಪರ್ ASAP Rocky ಜೊತೆ 2022 ರಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದಳು. ಅದರ ನಂತರ, ಅವರು ಆಗಸ್ಟ್ 2023 ರಲ್ಲಿ ತಮ್ಮ ಎರಡನೇ ಮಗನಿಗೆ ಜನ್ಮ ನೀಡಿದರು. ಆದರೆ ಇದೀಗ ಫೋಟೊ ನೋಡಿ ಜನ ನಿಮಗೆ ಮತ್ತೆ ಮಗು ಆಗಿದ್ಯಾ ಎಂದು ಕೇಳುತ್ತಿದ್ದಾರೆ.
ರಿಹಾನ್ನಾ ಅವರ ನಿವ್ವಳ ಮೌಲ್ಯ 1.7 ಮಿಲಿಯನ್ ಡಾಲರ್. ರಿಹಾನ್ನಾ ಹಾಲಿವುಡ್ ನ ಶ್ರೀಮಂತ ಪಾಪ್ ಗಾಯಕಿ. ಬಾರ್ಬಡೋಸ್ ಮೂಲದ ರಿಹಾನ್ನಾ ಹೆಸರು ರಾಬಿನ್ ರಿಹಾನ್ನಾ ಫೆಂಟಿ. ಫೋರ್ಬ್ಸ್ ಪ್ರಕಾರ, ರಿಹಾನ್ನಾ ಅವರ ನಿವ್ವಳ ಮೌಲ್ಯ 1.7 ಮಿಲಿಯನ್ ಡಾಲರ್. ಹಾಡು ಮತ್ತು ನಟನೆಯ ಜೊತೆಗೆ, ರಿಹಾನ್ನಾ ತನ್ನ ಸೌಂದರ್ಯವರ್ಧಕಗಳು ಮತ್ತು ಒಳ ಉಡುಪುಗಳ ವ್ಯವಹಾರದಿಂದ ಆದಾಯವನ್ನು ಗಳಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.