ಮುಂಬೈ(ಮಾ.31): ಎಸ್.ಎಸ್ ರಾಜಾಮೌಳಿ ನಿರ್ದೇಶನದ ಚಲನಚಿತ್ರ ಆರ್‌ಆರ್‌ಆರ್ ಬಿಡುಗಡೆಯಾದ ಆರು ದಿನಗಳಲ್ಲೇ ಜಗತ್ತಿನಾದ್ಯಂತ 611 ಕೋಟಿ ರು. ಭರ್ಜರಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಈ ಮೂಲಕ ಸೂಪರ್ ಹಿಟ್ ಚಲನಚಿತ್ರ ಎನಿಸಿಕೊಂಡಿದ್ದ ಬಾಹುಬಲಿಯ 1 ವಾರದ ಗಳಿಕೆ ದಾಖಲೆಯನ್ನು ಮುರಿದಿದೆ.
ಚಿತ್ರವು ಬಿಡುಗಡೆಯಾದ ಮೊದಲನೇ ದಿನವೇ 223 ಕೋಟಿ ರು. ಹಾಗೂ ಮೂರು ದಿನಗಳಲ್ಲಿ 500 ಕೋಟಿ ರು. ಗಳಿಕೆ ಮಾಡಿ ದಾಖಲೆ ಸೃಷ್ಟಿಸಿತ್ತು. ಮುಂಬರುವ ದಿನಗಳಲ್ಲಿ ಚಿತ್ರವು ಮತ್ತಷ್ಟುಹೊಸ ದಾಖಲೆ ಸೃಷ್ಟಿಸುವ ನಿರೀಕ್ಷೆಯಿದೆ.
ಶುಕ್ರವಾರ ಮಾಚ್‌ರ್ 25 ರಂದು ಆರ್‌ಆರ್‌ಆರ್ ತೆಲುಗು, ತಮಿಳು, ಮಳಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಕೇವಲ 6 ದಿನಗಳಲ್ಲಿ ದೇಶಾದ್ಯಂತ ಚಿತ್ರವು 474 ಕೋಟಿ ರು. ಗಳಿಕೆ ಮಾಡಿದೆ. ಕೇವಲ ಹಿಂದಿ ಡಬ್ಬಿಂಗ್ ಆವೃತ್ತಿಯೇ 107 ಕೋಟಿ ರು. ಗಳಿಕೆ ಮಾಡಿದ್ದು, ಬಾಹುಬಲಿಯನ್ನು ಹಿಂದಿಕ್ಕಿದೆ.
'ನಾಟು ನಾಟು...'ಹಾಡು ಹೇಳಿ 'RRR' ಸಿನಿಮಾವನ್ನು ಹೊಗಳಿದ ರಣವೀರ್ ಸಿಂಗ್
ಚಿತ್ರವು ಅತ್ಯಂತ ವೇಗವಾಗಿ 100 ಕೋಟಿ ಕ್ಲಬ್‌ನಲ್ಲಿ ದಾಖಲಾಗಿದ್ದು, ಮುಂಬರುವ ದಿನಗಳಲ್ಲಿ ಹಿಂದಿ ಆವೃತ್ತಿಯೇ 200 ಕೋಟಿ ರು. ಗಳಿಕೆ ಮಾಡಬಹುದು ಎಂದು ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ ಅಂದಾಜಿಸಿದ್ದಾರೆ.
ಆರ್‌ಆರ್‌ಆರ್ ಚಲನಚಿತ್ರವು 1920ರ ಸ್ವಾತಂತ್ರ್ಯಯೋಧರಾದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಾಮ್ ಭೀಮ್ ಅವರ ಕಥಾ ಹಂದರ ಹೊಂದಿದೆ. ರಾಮ್‌ಚರಣ್ ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ಉಳಿದಂತೆ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಅಜಯ ದೇವಗನ್ ಚಿತ್ರದಲ್ಲಿದ್ದಾರೆ.
RRR ತಯಾರಕರ ಬಗ್ಗೆ Alia Bhatt ಅಸಮಾಧಾನ? SS Rajamouli ಅನ್ನು unfollow ಮಾಡಿದ ನಟಿ?
3 ದಿನದಲ್ಲಿ ಭರ್ಜರಿ 500 ಕೋಟಿ ಗಳಿಕೆ!
ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾದ ಮೂರೇ ದಿನದಲ್ಲಿ ಜಗತ್ತಿನಾದ್ಯಂತ 500 ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಮುಂಬರುವ ದಿನಗಳಲ್ಲಿ ಚಿತ್ರವು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆಯನ್ನು ಮುಂದುವರೆಸಲಿದೆ ಎಂದು ಸಿನಿಮಾ ವಿಶ್ಲೇಷಕರು ಅಂದಾಜಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಸಿನಿಮಾ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ, ‘500 ಕೋಟಿ ಗಳಿಕೆಯ ಮೂಲಕ ಆರ್‌ಆರ್‌ಆರ್ ಹೊಸ ದಾಖಲೆ ನಿರ್ಮಿಸುತ್ತಿದೆ. ಮುಂಬರುವ ದಿನದಲ್ಲಿ ಭರ್ಜರಿ ಗಳಿಕೆ ಮುಂದುವರೆಯಲಿದೆ. ನಿರ್ದೇಶಕ ಎಸ್.ಎಸ್. ರಾಜಾಮೌಳಿ ಭಾರತದ ಚಿತ್ರರಂಗದ ವೈಭವವನ್ನು ಮರಳಿ ತಂದಿದ್ದಾರೆ’ ಎಂದಿದ್ದಾರೆ.
ಆರ್‌ಆರ್‌ಆರ್ ಶುಕ್ರವಾರ ಮಾಚ್‌ರ್ 25 ರಂದು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. 450 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದ್ದು, ಬಿಡುಗಡೆಯಾದ ಮೊದಲನೇ ದಿನವೇ ಸುಮಾರು 223 ಕೋಟಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿತ್ತು. ತೆಲುಗು ಸ್ವಾತಂತ್ರ್ಯ ಯೋಧರಾದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್‌ರ ಕಥೆಯುಳ್ಳ ಈ ಚಿತ್ರದಲ್ಲಿ ರಾಮಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ ದೇವಗನ್, ಅಲಿಯಾ ಭಟ್, ಒಲಿವಿಯಾ ಮೊರಿಸ್ ಮೊದಲಾದವರೂ ಚಿತ್ರದಲ್ಲಿದ್ದಾರೆ.
ಬಹು ನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾ ಕೋಲಾರ ನಗರದ ನಾರಾಯಣಿ ಚಿತ್ರ ಮಂದಿರದಲ್ಲಿ ಪ್ಯಾನ್ ಶೋ ಬೆಳಗ್ಗೆ 6 ಗಂಟೆಗೆ ಆರಂಭವಾಯಿತು.ಬೆಳಗ್ಗೆ ಎರಡು ಶೋ ಗಳ ಟಿಕೆಟ್ ಸಂಪೂರ್ಣ ವ್ಯಾಪಾರ ಆಗಿದ್ದು ಚಿತ್ರಮಂದಿರ ಸಂಪೂರ್ಣ ಹೌಸ್ ಪುಲ್ ಆಗಿತ್ತು, ತೆಲುಗು ಭಾಷೆಯ ಆರ್‌ಆರ್‌ಆರ್ ಚಿತ್ರಮಂದಿರಕ್ಕೆ ಎನ್‌ಟಿಆರ್ ಮತ್ತು ರಾಮ್ ಚರಣ್ ರವರ ಸಾವಿರಾರು ಅಭಿಮಾನಿಗಳು ನಗರದ ನಾರಾಯಣಿ ಚಿತ್ರಮಂದಿರದ ಮುಂಭಾಗ ಸೇರಿದ್ದರಿಂದ ಅಭಿಮಾನಿಗಳನ್ನು ನಿಯಂತ್ರಿಸಲು ಚಿತ್ರ ಮಂದಿರದ ಎದುರು ಪೊಲೀಸ್ ಬಂದೋಬಸ್‌್ತ ಮಾಡಲಾಗಿತ್ತು.