ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ಚಲನಚಿತ್ರ ಮಾಧ್ಯಮ ಘಟಕಗಳ ವಿಲೀನ!

Published : Mar 30, 2022, 10:04 PM ISTUpdated : Mar 30, 2022, 10:34 PM IST
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದೊಂದಿಗೆ ಚಲನಚಿತ್ರ ಮಾಧ್ಯಮ ಘಟಕಗಳ ವಿಲೀನ!

ಸಾರಾಂಶ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಿಂದ ಮಹತ್ವದ ನಿರ್ಧಾರ ಸಾಕ್ಷ್ಯಚಿತ್ರ, ಚಲನಚಿತ್ರೋತ್ಸವ ಸಂಘಟನೆಗಳನ್ನು NFDC ಜೊತೆ ವಿಲೀನ ಒಂದೇ ನಿಗಮದಡಿ ಕಾರ್ಯನಿರ್ವಹಣೆಗೆ ಕೇಂದ್ರದಿಂದ ಮಹತ್ವದ ಕ್ರಮ

ನವದೆಹಲಿ(ಮಾ.30): ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳ ನಿರ್ಮಾಣ, ಚಲನಚಿತ್ರೋತ್ಸವಗಳ ಸಂಘಟನೆ ಮತ್ತು ಚಲನಚಿತ್ರಗಳ ಸಂರಕ್ಷಣೆ ಘಟಕಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಜೊತೆ ವಿಲೀನಗೊಳಿಸಿದೆ.

ಕೇಂದ್ರ ಮತ್ತು ಮಾಹಿತಿ ಪ್ರಸಾರ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಇದೀಗ ಎಲ್ಲಾ  ಚಲನಚಿತ್ರ ಮಾಧ್ಯಮ ಘಟಕಗ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಇದರಿಂದ ವಿವಿಧ ಘಟಕಗಳ ಎಲ್ಲಾ ಚಟುವಟಿಕೆಗಳು ಒಂದೇ ನಿರ್ವಹಣೆಯಡಿಯಲ್ಲಿ ಬರಲಿದೆ. ಇಷ್ಟೇ ಅಲ್ಲ ವಿವಿಧ ಚಟುವಟಿಕೆಗಳ ಅತಿಕ್ರಮ ಕಡಿಮೆಯಾಗಲಿದೆ. ಜೊತೆಗೆ ಸಾರ್ವಜನಿಕ ಸಂಪನ್ಮೂಲಗಳ ಉತ್ತಮ ಬಳಕೆಯೂ ಸಾಧ್ಯವಾಗಲಿದೆ ಅನ್ನೋ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದೆ.

4ನೇ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕಂಗನಾ

ರಾಷ್ಟ್ರೀಯ ಚಲನಚಿತ್ರಗಳ ಅಭಿವೃದ್ಧಿ ನಿಗಮ( NFDC) ಎಲ್ಲಾ ಚಲನಚಿತ್ರಗಳ ನಿರ್ಮಾಣದ ಆದೇಶ ನಿರ್ವಹಿಸುತ್ತಿದೆ. ಈ ವಿಲೀನದಿಂದ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಮಕ್ಕಳ ಚಲನಚಿತ್ರಗಳು ಮತ್ತು ಅನಿಮೇಷನ್ ಚಲನಚಿತ್ರಗಳು ಸೇರಿದಂತೆ ಎಲ್ಲಾ ಪ್ರಕಾರಗಳ ಚಲನಚಿತ್ರಗಳ ನಿರ್ಮಾಣಕ್ಕೆ ಉತ್ತೇಜನ ಸಿಗಲಿದೆ.

ವಿಲೀನದಿಂದ ಸದ್ಯ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆಯೋಜಿಸುವ ಅಂತಾರಾಷ್ಟ್ರೀಯ ಚಲನ ಉತ್ಸವ ಆಯೋಜನೆ, ಚಲನಚಿತ್ರ ಪ್ರಚಾರ, ಸಂರಕ್ಷಣೆ, ಡಿಜಿಟಲೀಕರಣ, ಚಲನಚಿತ್ರಗಳ ಮರುಸ್ಥಾಪನೆ, ವಿತರಣೆ ಮಾಲೀಕತ್ವ ಭಾರತ ಸರ್ಕಾರದಲ್ಲೇ ಇರಲಿದೆ.

ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್‌ಗೆ ‘ಮಿಸ್ ಇಂಡಿಯಾ’ ಕಿರೀಟ!

ಸಾಕ್ಷ್ಯಚಿತ್ರಗಳ ನಿರ್ಮಾಣ ಜವಾಬ್ದಾರಿಯನ್ನು ಸಂಪೂರ್ಣವಾಗಿ  NFDC ವರ್ಗಾಯಿಸಲಾಗಿದೆ. ಇದನ್ನು ಫಿಲ್ಮ್ಸ್ ವಿಭಾಗ ಎಂದು ಹೆಸರಿಡಲಾಗಿದೆ. ಇದರ ಜೊತೆಗೆ ಚಲನಚಿತ್ರೋತ್ಸವಗಳ ಸಂಘಟನೆಯನ್ನು NFDC ಗೆ ವರ್ಗಾಯಿಸಲಾಗಿದೆ. ಇದರಿಂದ  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳ ಸಂಘಟನೆ ಒಂದೇ ವಿಭಾಗದಡಿಯಲ್ಲಿ ಕಾರ್ಯನಿರ್ವಹಿಸಲಿದೆ. NFDC ಶೀಘ್ರದಲ್ಲಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಗೋವಾದಲ್ಲಿ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಮಕ್ಕಳ ಚಲನಚಿತ್ರೋತ್ಸವಗಳನ್ನು ಆಯೋಜಿಸಲಿದೆ.

ಚಲನಚಿತ್ರ ಸಂರಕ್ಷಣೆ ಕಾರ್ಯಗಳು ಕೂಡ ಇದೀಗ NFDC ನಿರ್ವಹಿಸಲಿದೆ. ಇದುವರೆಗೆ  ರಾಷ್ಟ್ರೀಯ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಈ ಕಾರ್ಯ ಮಾಡುತ್ತಿತ್ತು. ಇದೀಗ ವಿಲೀನದೊಂದಿಗೆ ಈ ಜವಾಬ್ದಾರಿ NFDC ಹೆಗಲೇರಿದೆ.  ಆಡಿಯೋ ವಿಶುವಲ್ ಸೇವಾ ವಲಯವನ್ನು ಮತ್ತಷ್ಟು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ  ಸೃಜನಶೀಲ ಮತ್ತು ತಾಂತ್ರಿಕ ಸೇವೆಗಳಿಗೂ ಪ್ರೋತ್ಸಾಹ ಸಿಗಲಿದೆ. ವಿಲೀನದ ಜೊತೆಗೆ  ಆಡಿಯೊ-ದೃಶ್ಯ ಸಹ-ನಿರ್ಮಾಣ, ಭಾರತದಲ್ಲಿ ವಿದೇಶಿ ಚಲನಚಿತ್ರಗಳ ಚಿತ್ರೀಕರಣದ ಪ್ರಚಾರ ಸೇರಿದಂತೆ ಇತರ ಕಾರ್ಯಗಳಿಗಾಗಿ ಹಣಕಾಸಿನ ಪ್ರೋತ್ಸಾಹವ ನೀಡಲಾಗಿದೆ.

 

 

ಕೇಂದ್ರ ಸರ್ಕಾರ ನಿಗದಿಪಡಿಸಿರುವ 1304.52 ಕೋಟಿ ರೂಪಾಯಿ ಮೊತ್ತದಲ್ಲಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಸಂಪೂರ್ಣ ಕಾರ್ಯಗಳು ಆರಂಭಗೊಳ್ಳಲಿದೆ. ಡಿಸೆಂಬರ್ 2020ರಲ್ಲಿ ಕೇಂದ್ರ ಸಚಿವ ಸಂಪುಟ ಚನಲಚಿತ್ರ ಮಾಧ್ಯಮಗಳನ್ನು ಘಟಕಗಳನ್ನು ವಿಲೀನಗೊಳಿಸಲು ನಿರ್ಧರಿಸಿತ್ತು.  ಚೆನ್ನೈ ಮತ್ತು ಮುಂಬೈನಲ್ಲಿ ನಡೆದ ಚಲನಚಿತ್ರೋದ್ಯಮಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಈ ಪ್ರಸ್ತಾವನ್ನು ಚರ್ಚಿಸಿತ್ತು. ಇದೀಗ ನಾಲ್ಕು ಚಲನಚಿತ್ರ ಮಾಧ್ಯಮ ಘಟಕಗಳನ್ನು ಕೇಂದ್ರ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಜೊತೆ ವಿಲೀನ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!