ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿದ್ದೇನೆ, ಲಂಚ ಬೇಕಿಲ್ಲ, ಟ್ರೋಲ್‌ಗೆ ತಿರುಗೇಟು ನೀಡಿದ ಲಲಿತ್ ಮೋದಿ!

By Suvarna NewsFirst Published Jul 17, 2022, 8:33 PM IST
Highlights

ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಲಲಿತ್ ಮೋದಿ ಹಾಗು ಸುಶ್ಮಿತಾ ಸೇನ್ ಸುದ್ದಿಯಾಗಿದ್ದೇ ತಡ,  ನಿಮಗ್ಯಾಕೆ ನಮ್ಮ ಜೀವನ ಅಂಥಾ ಪ್ರಶ್ನೆ ಮಾಡಿ ತಡ ಯದ್ವಾ ತದ್ವಾ ಟ್ರೋಲ್ ಆಗಿತ್ತು ಈ ಸೆಲೆಬ್ರೆಟೀಸ್.  ಈ ಟ್ರೋಲ್, ಮೀಮ್ಸ್ ನೋಡಿದ ಲಲಿತ್ ಮೋದಿ ಒಂದಷ್ಟ ಸಮಯ ತೆಗೆದು ಅತೀ ದೊಡ್ಡ ಪ್ರತಿಕ್ರಿಯೆ ನೀಡಿದ್ದಾರೆ. 

ಲಂಡನ್(ಜು.17):  ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಹೊಸ ಬದುಕು, ಹೊಸ ಆರಂಭ ಎಂದು ಟ್ವೀಟ್ ಮಾಡಿ ಮದುವೆ ಮಾಹಿತಿ ಬಹಿರಂಗ ಪಡಿಸಿದ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಬಳಿಕ ಯು ಟರ್ನ್ ಹೊಡೆದಿದ್ದು ಇದೀಗ ವಿವಾದ. ಇತ್ತ ಸುಶ್ಮೀತಾ ಸೇನ್ ಕೂಡ ಏನಿಲ್ಲಾ, ಏನಿಲ್ಲಾ, ನಮ್ಮ ನಡುವೆ ಏನಿಲ್ಲಾ ಅಂದು, ನಿಮಗ್ಯಾಕೆ ನಮ್ ಉಸಾಬರಿ ಅಂತಾ ಕೋಪ ಮಾಡಿಕೊಂಡಿದ್ದರು. ಮಳೆ, ಪ್ರವಾಹ, ಜನಜೀವನ, ಶ್ರೀಲಂಕಾ ಪರಿಸ್ಥಿತಿ ಬ್ಯೂಸಿಯಾಗಿದ್ದ ಭಾರತದ ಮಾಧ್ಯಮ ಲಲಿತ್ ಮೋದಿ ಮಾಹಿತಿಯನ್ನು ಜನರ ಮುಂದಿಟ್ಟಿತ್ತು. ನಿಮಗ್ಯಾಕೆ ನಮ್ಮ ಜೀವನ ಅಂಥಾ ಪ್ರಶ್ನೆ ಮಾಡಿದ್ದೇ ತಡ ಯದ್ವಾ ತದ್ವಾ ಟ್ರೋಲ್ ಶುರುವಾಗಿತ್ತು.  ಈ ಟ್ರೋಲ್, ಮೀಮ್ಸ್ ನೋಡಿದ ಲಲಿತ್ ಮೋದಿ ಒಂದಷ್ಟ ಸಮಯ ತೆಗೆದು ಅತೀ ದೊಡ್ಡ ಪ್ರತಿಕ್ರಿಯೆ ನೀಡಿದ್ದಾರೆ. ಸುಶ್ಮೀತಾ ಸೇನ್ ಜೊತೆಗಿನ ರಿಲೇಷನ್‌ಶಿಪ್‌ನಿಂದ ಹಿಡಿದು, ಐಪಿಎಲ್ ಸೇರಿದಂತೆ ಎಲ್ಲಾ ಟ್ರೋಲ್‌ಗೆ ಉತ್ತರ ನೀಡಿದ್ದಾರೆ. ಎಲ್ಲಾ ಮಾಧ್ಯಗಳು ಡೋನಾಲ್ಡ್ ಟ್ರಂಪ್ ರೀತಿ ಸುಳ್ಳು ಸುದ್ದಿ ಹರಡುತ್ತಿದೆ. ಫೋಟೋ ಹಂಚಿಕೊಂಡಿದ್ದೇನೆ ಅದರಲ್ಲಿ ತಪ್ಪೇನು? ಲಂಚ ಪಡೆದು ವಿದೇಶಕ್ಕೆ ಪರಾರಿಯಾಗುವ ಅವಶ್ಯಕತೆ ನನಗಿಲ್ಲ. ನಾನು ಹುಟ್ಟುವಾಗಲೇ ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿದ್ದೇನೆ. ನನಗ್ಯಾಕೆ ಬೇಕು ಲಂಚ ಎಂದು ಲಲಿತ್ ಮೋದಿ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳು ಯಾಕ ತಪ್ಪಾಗಿ ನನ್ನನ್ನು ಟ್ಯಾಗ್ ಮಾಡಿ ಟ್ರೋಲ್ ಮಾಡುತ್ತಿದೆ. ನಾನು ಇನ್‌ಸ್ಟಾದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದೇನೆ. ಅದು ತಪ್ಪಲ್ಲ ಎಂದು ಭಾವಿಸುತ್ತೇನೆ.  ನಾವು ಇನ್ನೂ ಮಧ್ಯಯುಗದಲ್ಲಿ ವಾಸಿಸುತ್ತಿದ್ದೇವೆ. ಸ್ನೇಹಿತರಾಗಿರಲು ಸಾಧ್ಯವಿಲ್ಲವೇ, ಸ್ನೇಹಿತರ ನಡುವೆ ಕೆಮೆಸ್ಟ್ರಿ ಚೆನ್ನಾಗಿದ್ದರೆ, ಸಮಯವೂ ಸರಿಯಾಗಿದ್ದರೆ ಮ್ಯಾಜಿಕ್ ನಡೆಯಬುಹುದು.  ಯಾರಿಗೂ ಯಾವುದೇ ಹೊಣೆಗಾರಿಗೆ ಇಲ್ಲ.  ಭಾರತದಲ್ಲಿ ಎಲ್ಲರೂ ಅರ್ನಬ್ ಗೋಸ್ವಾಮಿ ಆಗಲು ಬಯಸುತ್ತಿದ್ದಾರೆ. ದೊಡ್ಡ ಕೊಡಂಗಿ ಆತ. ನನ್ನ ಸಲಹೆ ಅಂದರೆ ಇತರರನ್ನು ಬದುಕಲು ಬಿಡಿ. ಸರಿಯಾದ ಹಾಗೂ ಸತ್ಯವನ್ನು ಬರೆಯಿರಿ. ಡೋನಾಲ್ಡ್ ಟ್ರಂಪ್ ರೀತಿ ಸುಳ್ಳು ಸುದ್ದಿ ಹಾಕಬೇಡಿ. ನಿಮಗೆ ಗೊತ್ತಿಲ್ಲದಿದ್ದರೆ ಜ್ಞಾನೋದಯ ಮಾಡುತ್ತೇನೆ. 12 ವರ್ಷ ಮಿಲನ್ ಮೋದಿ ಜೊತೆ ಕಳೆದಿದ್ದೇನೆ. ಅಗಲಿಕೆ ಬಳಿಕ ಇಲ್ಲ ಸಲ್ಲದ ಸುದ್ದಿಗಳು ಹರಿದಾಡಿತ್ತು. ಆಕೆ ನನ್ನ ತಾಯಿಯ ಗೆಳತಿ ಆಗಿರಲಿಲ್ಲ. ಆ ಗಾಸಿಪ್ ಪಟ್ಟಭದ್ರ ಹಿತಾಸಕ್ತಿಗಳಿಂದ ಹರಡಿತು. ಯಾರಾದರೂ ಜೀವನದಲ್ಲಿ ಏಳಿಗೆಯಾದರೆ ಅಭಿನಂದಿಸಿ, ಸಂತೋಷ ಪಡಿ. ಇದರಿಂದ ಅವರು ಮತ್ತಷ್ಟು ದೇಶಕ್ಕೆ ಕೊಡುಗೆ ನೀಡುತ್ತಾರೆ.  ನಾನು ನಿಮ್ಮಲ್ಲರಿಗಿಂತ ತಲೆಯನ್ನು ಎತ್ತಿ ಹಿಡಿದು ನಡೆಯುತ್ತಿದ್ದೇನೆ. ಆದರೆ ನೀವು ನನ್ನನ್ನು ಪರಾರಿ ಎನ್ನತ್ತಿದ್ದೀರಿ.  ಯಾವುದೇ ನ್ಯಾಯಾಲಯ ನನ್ನನ್ನು ದೋಷಿ ಎಂದು ಹೇಳಿಲ್ಲ. ಭಾರತದಲ್ಲಿ ವ್ಯಾಪಾರ ಮಾಡುವುದು ಎಷ್ಟು ಕಷ್ಟ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. 2008ರಲ್ಲಿ ಆರ್ಥಿಕ ಹಿಂಜರಿತದ ನಡುವೆ ನಾನು ಐಪಿಎಲ್ ಆರಂಭಿಸಿದೆ. ಅಂದು ನನ್ನನ್ನು ಗೇಲಿ ಮಾಡಿದವರೇ ಹೆಚ್ಚು. ನಾನು ಒಬ್ಬನೇ ಓಡಾಡಿ  ಈ ಟೂರ್ನಿ ಆಯೋಜಿಸಿದ್ದೆ.

ಸುಶ್ಮಿತಾ ಲಲಿತ್‌ ಮೋದಿ ಪೋಟೋ ಎಡಿಟ್ ಮಾಡಿ ಕಿಚಾಯಿಸಿದ ಹಾಸ್ಯನಟ

ಬಿಸಿಸಿಐ ಯಾವುದೇ ವಿಚಾರಕ್ಕೂ ಬರಲಿಲ್ಲ. ಬಿಸಿಸಿಐ ದಿನ ಭತ್ಯೆ, ಖರ್ಚು ವೆಚ್ಚ ಎಂದು ಪ್ರತಿ ದಿನ 500 ಡಾಲರ್ ಪಡೆಯಲು ಬಂದಿತ್ತು ಅಷ್ಟೆ. ಆದರೆ ಇಡೀ ದೇಶವನ್ನು ಐಪಿಎಲ್ ಒಂದೂಗಿಡಿಸಿತು. ದೇಶದ  ಮೂಲೆ ಮೂಲೆಯಲ್ಲಿ ಕ್ರಿಕೆಟ್ ಹಬ್ಬ ಆಚರಣೆಗೊಂಡಿತು. ಆದರೆ ನನ್ನನ್ನು ಪರಾರಿ ಎಂದು ಕರೆದಿದ್ದೀರಿ. ನಾನು ಡೈಮಂಡ್ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದೇನೆ. ನಾನು ಲಂಚ ಪಡೆದುಕೊಂಡಿಲ್ಲ. ನನಗೆ ಅದರ ಅಗತ್ಯವೂ ಇರಲಿಲ್ಲ.  ನಾನು ರಾಯಬಹ ದುರ್ಗಜರಮಲ್ ಮೋದಿ ಮೊಮ್ಮಗ.  ಹಣ ಸಂಪಾದಿಸಿದ್ದೇನೆ. ತೆಗೆದುಕೊಂಡಿಲ್ಲ. 2005ರಲ್ಲಿ ನಾನು ಬಿಸಿಸಿಐ ಸೇರಿದಾಗ ಬಿಸಿಸಿಐ ಖಾತೆಯಲ್ಲಿ 40 ಕೋಟಿ ರೂಪಾಯಿ ಇತ್ತು. ನನ್ನನ್ನು ಬ್ಯಾನ್ ಮಾಡಿದಾಗ ಬಿಸಿಸಿಐ ಖಾತೆಯಲ್ಲಿ 47,680 ಕೋಟಿ ರೂಪಾಯಿ ಇತ್ತು. ಬಿಸಿಸಿಐಗೆ ಇದರ ಕಲ್ಪನೆ ಇರಲಿಲ್ಲ. ನಕಲಿ ಮಾಧ್ಯಮಗಳಿಗೆ ನಾಚಿಕೆಯಾಗಬೇಕು. ಈಗ ಅವರನ್ನು ಹೀರೋಗಳಂತೆ ಕೊಂಡಾಡುತ್ತಿದ್ದೀರಿ ಎಂದು ಲಲಿತ್ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
 

click me!