ಸಂಚಾರಿ ವಿಜಯ್ ಹುಟ್ಟುಹಬ್ಬ; 'ರಾಷ್ಟ್ರ ಪ್ರಶಸ್ತಿ' ವಿಜೇತ ನಟನನ್ನು ನೆನೆದ ಆಪ್ತರು

By Suvarna NewsFirst Published Jul 17, 2022, 5:55 PM IST
Highlights

ಸ್ಯಾಂಡಲ್ ವುಡ್‌ನ ಪ್ರತಿಭಾವಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ಅವರ ಜನ್ಮದಿನ (ಜುಲೈ 17). ಸಂಚಾರಿ ವಿಜಯ್ ಅಗಲಿ ವರ್ಷದ ಮೇಲಾಗಿದೆ. ಆದರೂ ಅವರ ಅಭಿಮಾನಿಗಳು, ಆಪ್ತರು ಗೆಳೆಯನನ್ನು ನೆನೆದು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಪ್ತರು ಮತ್ತು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. 

ಸ್ಯಾಂಡಲ್ ವುಡ್‌ನ ಪ್ರತಿಭಾವಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ಅವರ ಜನ್ಮದಿನ (ಜುಲೈ 17). ಸಂಚಾರಿ ವಿಜಯ್ ಅಗಲಿ ವರ್ಷದ ಮೇಲಾಗಿದೆ. ಆದರೂ ಅವರ ಅಭಿಮಾನಿಗಳು, ಆಪ್ತರು ಗೆಳೆಯನನ್ನು ನೆನೆದು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಪ್ತರು ಮತ್ತು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅವರ ಸಾಧನೆ ಮತ್ತು ವ್ಯಕ್ತಿತ್ವವನ್ನು ಸ್ಮರಿಸಿಕೊಳ್ಳಲಾಗುತ್ತಿದೆ. ಸಂಚಾರಿ ವಿಜಯ್ ಈಗ ನಮ್ಮೊಂದಿಗೆ ಇಲ್ಲ ಆದರೂ ಅವರ ಅದ್ಭುತ ವ್ಯಕ್ತಿತ್ವ ಮತ್ತು ಸಿನಿಮಾಗಳ ಮೂಲಕ ಶಾಶ್ವತವಾಗಿ ಜನರ ಮನದಲ್ಲಿ ಜಾಗಪಡೆದಿದ್ದಾರೆ. ಅದ್ಭುತ ಪಾಚ್ರಗಳ ಮೂಲಕ ಸಂಚಾರಿ ವಿಜಯ್ ನೆನಪು ಇನ್ನು ಹಸಿರಾಗಿವೆ. 

ಜುಲೈ 17, ಸಂಚಾರಿ ವಿಜಯ್ ಹುಟ್ಟುಹಬ್ಬವನ್ನು ಗೆಳೆಯರು ಸಂಭ್ರಮದಿಂದ, ಸಂತೋಷದಿಂದ ಆಚರಿಸಿತ್ತಿದ್ದರು. ಆದರೆ ಈ ವರ್ಷ ದುಃಖದಲ್ಲಿಯೇ ವಿಜಯ್ ನೆನೆಯುತ್ತಿದ್ದಾರೆ.  ಸಂಚಾರಿ ವಿಜಯ್​ ಅವರ ಅನುಪಸ್ಥಿತಿ ಕಾಡುತ್ತಿದೆ. ಇಂಥ ಪ್ರತಿಭಾವಂತ ನಟ ನಮ್ಮ ಚಿತ್ರರಂಗದಲ್ಲಿ ಇರಬೇಕಿತ್ತು ಎಂದು ಎಲ್ಲರೂ ಹೇಳುತ್ತಿದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಸಂಚಾರಿ ವಿಜಯ್ ಯಾವುದೇ ಪಾತ್ರ ಕೊಟ್ಟರು ಅದಕ್ಕೆ ಜೀವತುಂಬುತ್ತಿದ್ದರು. ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ಸಂಚಾರಿ ವಿಜಯ್ ಸಿನಿಮಾದಲ್ಲೂ ಅದ್ಭುತವಾಗಿ ನಟಿಸುತ್ತಿದ್ದರು​.

'ಹರಿವು' ಸಿನಿಮಾದಲ್ಲಿ ಮಗನನ್ನು ಕಳೆದುಕೊಂಡ ಅಸಹಾಯಕ ತಂದೆಯಾಗಿ, 'ನಾನು ಅವನಲ್ಲ ಅವಳು' ಸಿನಿಮಾದಲ್ಲಿ ಮಂಗಳಮುಖಿ ಪಾತ್ರ ಅಭಿಮಾನಿಗಳ ಮನಕಲಕುವಂತಿತ್ತು. ಈ ಸಿನಿಮಾಗೆ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿಯನ್ನು ಗೆದ್ದು ಬೀಗಿದ್ದರು. ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದ ನಟ ಸಂಚಾರಿ ವಿಜಯ್ ಇದೀಗ ನೆನಪು ಮಾತ್ರ.

ಸಂಚಾರಿ ವಿಜಯ್ ಪುಣ್ಯತಿಥಿ: ಪಂಚನಹಳ್ಳಿಯಲ್ಲಿ ಪ್ರತಿಮೆ ನಿರ್ಮಾಣ!

ಇನ್ನು ಸಂಚಾರಿ ವಿಜಯ್ ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿಗೆ ನೆರವಾಗಿದ್ದಾರೆ.​ ಲಾಕ್​ಡೌನ್​ ಸಂದರ್ಭದಲ್ಲಿಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಅನೇಕ ಜೀವಗಳಗೆ ಸಂಚಾರಿ ವಿಜಯ್ ನೆರವಾಗಿದ್ದರು. 

ಕಾಡಲ್ಲೊಂದು ಮಾಫಿಯಾ, ಕಾಪಾಡದ ಮಾಯಾವಿ

ದುರಂತ ಸಾವು

2021ರ ಜೂನ್​ 12ರ ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಸಂಚಾರಿ ವಿಜಯ್​ ಅಪಘಾತಕ್ಕೆ ತುತ್ತಾಗಿದ್ದರು. ಸ್ನೇಹಿತ ನವೀನ್​ ಜೊತೆ ಬೈಕ್​ನಲ್ಲಿ ಹಿಂದೆ ಕುಳಿತಿದ್ದರು. ಅಪಘಾತದ ತೀವ್ರತೆಗೆ ಅವರ ತಲೆ ಮತ್ತು ತೊಡೆ ಭಾಗಕ್ಕೆ ಬಲವಾದ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರ್ಜರಿ ಮಾಡಿದ ಬಳಿಕ 48 ಗಂಟೆ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಮೆದುಳು ನಿಶ್ಕ್ರೀಯವಾಗಿತ್ತು. ಬ್ರೈನ್ ಡೆಡ್ ಎಂದು ವೈದ್ಯರು ಘೋಷಣೆ ಮಾಡಿದರು. ನಂತರ ಜೂನ್​ 14ರಂದು ವೈದ್ಯರು ಮತ್ತು ಕುಟುಂಬದವರು ಸಂಚಾರಿ ವಿಜಯ್ ಇನ್ನಿಲ್ಲ ಎಂದು ಘೋಷಣೆ ಮಾಡಿದರು. ಸ್ಯಾಂಡಲ್ ವುಡ್‌ನ ಅದ್ಭುತ ನಟನ ಬದುಕು ದುರಂತದಲ್ಲಿ ಅಂತ್ಯವಾಯಿತು. 

  

click me!