ಅಕ್ಷಯ್ ಕುಮಾರ್‌ಗೆ ಕೊರೋನಾ ಪಾಸಿಟಿವ್; ಅಂಬಾನಿ ಮದುವೆಯಿಂದ ದೂರ ಉಳಿದ ನಟ!

By Vaishnavi Chandrashekar  |  First Published Jul 12, 2024, 4:21 PM IST

ಇಡೀ ಬಾಲಿವುಡ್‌ ಅಂಬಾನಿ ಮದುವೆಯಲ್ಲಿದ್ದರೂ ಅಕ್ಷಯ್ ಕುಮಾರ್ ಮಿಸ್ಸಿಂಗ್. ಕೋವಿಡ್‌ ಪಾಸಿಟಿವ್ ಅಂತ ಮುಚ್ಚಿಟ್ಟಿದ್ದು ಯಾಕೆ?


ಬಾಲಿವುಡ್ ಹಾರ್ಡ್‌ ವರ್ಕಿಂಗ್, ಡಿಸಿಪ್ಲಿನ್ ಯವರ್‌ ಗ್ರೀನ್ ಮ್ಯಾನ್ ಅಕ್ಷನ್ ಕುಮಾರ್ ಕೆಲವು ದಿನಗಳಿಂದ ಚಿತ್ರೀಕರಣ ನಿಲ್ಲಿಸಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಲ್ಲ ಅಲ್ಲದೆ ಭಾರತದ ಅತಿ ದುಬಾರಿ ಮದುವೆಯಲ್ಲಿ ಭಾಗಿಯಾಗುತ್ತಿಲ್ಲ ಯಾಕೆ ಏನು ಎಂದು ನೆಟ್ಟಿಗರು ಹುಡುಕಲು ಶುರು ಮಾಡಿದಾಗ ತಿಳಿಯಿತ್ತು ಅಕ್ಷಯ್ ಕುಮಾರ್‌ಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು.

ಹೌದು! ಇಡೀ ದೇಶವೇ ತಿರುಗಿ ನೋಡುತ್ತಿರುವ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಾಲಿವುಡ್‌ ತಾರ ಬಳಗವಿದೆ. ಸುಮಾರು 6 ತಿಂಗಳಿನಿಂದ ಅದ್ಧೂರಿಯಾಗಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆಯುತ್ತಿದೆ. ಜುಲೈ 12ರಂದು ಮದುವೆ ನಡೆಯಲಿದೆ. ಈಗಾಗಲೆ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ ಆದರೆ ಅಕ್ಷಯ್ ಕುಮಾರ್ ಯಾಕೆ ಮಿಸ್ಸಿಂಗ್ ಎಂದು ಪ್ರಶ್ನೆ ಮಾಡಿದಾಗ ಕೋವಿಡ್‌ ಎಂದು ತಿಳಿದು ಬರುತ್ತಿದೆ.

Tap to resize

Latest Videos

ಸಹೋದರನ 50ನೇ ಹುಟ್ಟುಹಬ್ಬಕ್ಕೆ ಪ್ರಿಯಾ ಸುದೀಪ್‌ ಬರೆದ ಸಾಲುಗಳು ವೈರಲ್!

ಅಕ್ಷಯ್ ಕುಮಾರ್ ನಟನೆಯ ಸರ್ಫಿರಾ ಸಿನಿಮಾ ಕೂಡ ಇಂದು ರಿಲೀಸ್ ಆಗುತ್ತಿದೆ. ಸಿನಿಮಾ ಪ್ರಮೋಷನ್‌ನಿಂದ ಬ್ರೇಕ್ ತೆಗೆದುಕೊಂಡು ಹಾಗೆ ಬಂದು ಮದುವೆಯಲ್ಲಿ ಮುಖ ತೋರಿಸಿ ಹೋಗುತ್ತಾ ಅಂದುಕೊಂಡಿದ್ದರು ಫ್ಯಾನ್ಸ್‌ ಏಕೆಂದರೆ ಸ್ವತಃ ಅನಂತ್ ಅಂಬಾನಿ ಹೋಗಿ ಆಹ್ವಾನಿಸಿದ್ದರು. ಆದರೆ ಈ ಕಡೆ ಮದುವೆಗೂ ಹೋಗಿಲ್ಲ ತಮ್ಮ ಸಿನಿಮಾ ಓಪನ್ ದಿನವೂ ಹೋಗಿಲ್ಲ ಕಾರಣ ಕೋವಿಡ್ 19. 

ತುಂಬಾ ಬೇಗ ಹೊರಟ್ ಬಿಟ್ರಿ; ಮಜಾ ಟಾಕೀಸ್ ವರು ಇಲ್ಲದೆ ರಾಣಿ ಹೇಗಿರ್ತಾಳೆ?

'ಬ್ರೇಕ್ ತೆಗೆದುಕೊಳ್ಳದೆ ಅಕ್ಷಯ್ ಕುಮಾರ್ ತಮ್ಮ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಕೊಂಚ ಅನಾರೋಗ್ಯ ಕಂಡು ಬಂದಿತ್ತು ತಕ್ಷಣವೇ ಮೆಡಿಕಲ್ ಟೆಸ್ಟ್‌ ಮಾಡಿಸಿದಾಗ ಜ್ವರ ಅಂತ ತಿಳಿಯಿತ್ತು ಆನಂತರ ಕೋವಿಡ್ ಪಾಸಿಟಿವ್ ಆಗಿದೆ. ಚಿತ್ರತಂಡದಲ್ಲಿ ಇನ್ನು ಕೆಲವರಿಗೂ ಕೊರೋನಾ ಪಾಸಿಟಿವ್ ಆಗಿದೆ ಎನ್ನಲಾಗಿದೆ. ಅಕ್ಷಯ್ ತಕ್ಷಣವೇ ಐಸೋಲೇಟ್ ಆಗಿದ್ದಾರೆ' ಎಂದು ಇಂಗ್ಲಿಷ್‌ ವೆಬ್‌ಸೈಟ್‌ನಲ್ಲಿ ಸುದ್ದಿಯಾಗಿದೆ. 

click me!