ಅಣ್ಣನ ಹುಟ್ಟುಹಬ್ಬದೊಂದು ಸಾಲು ಸಾಲು ನೆನಪುಗಳನ್ನು ಹಂಚಿಕೊಂಡಿದ್ದಾರೆ ಪ್ರಿಯಾ ಸುದೀಪ್. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಪೋಸ್ಟ್‌....

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಇತ್ತೀಚಿಗೆ ಸೋಷಿಯಲ್ ಮೀಡಿಯಾಗೆ ಕಾಲಿಟ್ಟರು. ಸುಪ್ರಿಯಾನ್ವಿ ಸ್ಟುಡಿಯೋ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿದ್ದು ಸುಮಾರು 18 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. ಅತಿ ಕಡಿಮೆ ಪೋಸ್ಟ್‌ ಮಾಡುವ ಪ್ರಿಯಾ ಮೊದಲ ಸಲ ತಮ್ಮ ಸಹೋದರನ ಹುಟ್ಟುಹಬ್ಬಕ್ಕೆ ದೊಡ್ಡ ಸಾಲುಗಳು ಬರೆದುಕೊಂಡಿದ್ದಾರೆ.

'ಹ್ಯಾಪಿ 50ನೇ ಹುಟ್ಟುಹಬ್ಬ. ಕೊನೆಗೂ ನನಗಿಂತ ದೊಡ್ಡವನಂತೆ ಕಾಣುತ್ತಿರುವೆ..ಇದು ನಂಬಲು ಸಾಧ್ಯವೇ? ನೀನು ಸದಾ ಯಂಗ್ ಆಗಿ ಕಾಣಿಸುವ ಸಹೋದರ. you've always been lightyears ahead in the brain department. ನನಗೆ ಏನೇ ಬೇಕಿದ್ದರೂ ಏನೇ ಕೆಲಸವಿದ್ದರೂ ಸದಾ ಜೊತೆಯಾಗಿ ನಿಂತು ಸಪೋರ್ಟ್ ಮಾಡುತ್ತಿದ್ದ ವ್ಯಕ್ತಿ, ತಮಾಷೆ ಮತ್ತು ಓದಿನ ವಿಚಾರದಲ್ಲೂ. ನನ್ನನ್ನು ಚೆಸ್, ಬ್ಯಾಡ್ಮಿಂಟನ, ಬಿಲಿಯಾರ್ಡ್ಸ್‌, ಮತ್ತು ಕ್ರಾಸ್‌ವರ್ಡ್ ಪಜಲ್‌ಗೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ನನ್ನನ್ನು ಒತ್ತಾಯಿಸಿ ನೀನು ಕರೆದುಕೊಂಡು ಹೋಗುತ್ತಿದ್ದ ವಾಕಿಂಗ್ ನಾನು ಎಂದೂ ಬರೆಯುವುದಿಲ್ಲ. ಸುಸ್ತಾಗುತ್ತಿತ್ತು ಎಂದು ಕಾಲೆಳೆದುಕೊಂಡು ಬರುತ್ತಿದ್ದೆ' ಎಂದು ಪ್ರಿಯಾ ಸುದೀಪ್ ಬರೆದುಕೊಂಡಿದ್ದಾರೆ. 

ತುಂಬಾ ಬೇಗ ಹೊರಟ್ ಬಿಟ್ರಿ; ಮಜಾ ಟಾಕೀಸ್ ವರು ಇಲ್ಲದೆ ರಾಣಿ ಹೇಗಿರ್ತಾಳೆ?

'ನಿನ್ನ ಬರವಣಿಗೆಯನ್ನು ನಾನು ಎಷ್ಟು ಇಷ್ಟ ಪಡುತ್ತೀನಿ ಎಂದು ನಿನಗೆ ಗೊತ್ತಿದೆ. ನೀನು ಬರೆಯುವ ಪ್ರತಿಯೊಂದು ಪಾತ್ರ ಮತ್ತು ಅದರ ಸಾಲುಗಳನ್ನು ಓದಿದರೆ ನಿಜಕ್ಕೂ ಬಣ್ಣ ಹಚ್ಚಿ ಕಣ್ಣು ಮುಂದೆ ಬಂದಂತೆ ಇರುತ್ತದೆ. ಸಣ್ಣ ಕಥೆ ಇರಲಿ ಅಥವಾ ಪುಸ್ತಕವೇ ಬರೆಯಲಿ ಬರವಣಿಗೆಯಲ್ಲಿ ನಿನಗಿರುವ ಟ್ಯಾಲೆಂಟ್‌ ಗ್ರೇಟ್. ಸ್ಕೂಲ್‌ನಲ್ಲಿ ನೀನು ಟಾಪ್‌ ಸ್ಟುಡೆಂಟ್‌ ಮಾತ್ರವಲ್ಲ ಪ್ರಬಂಧ ಬರೆಯುವುದರಲ್ಲಿ ಎತ್ತಿದ ಕೈ. ಟೀಚರ್‌ಗಳು ತುಂಬಾ ಖುಷಿ ಪಡುತ್ತಿದ್ದರು. ಈಗಲೂ ನಿನ್ನ ಬರವಣಿಗೆ ನನಗೆ ಖುಷಿ ಕೊಡುತ್ತದೆ' ಎಂದು ಪ್ರಿಯಾ ಹೇಳಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಿರುತೆರೆ ನಟಿ ಯಮುನಾ ಶ್ರೀನಿಧಿ ಸಹಾಯ!

'ನನ್ನ ಬುದ್ಧಿವಂತ, ಹಾಸ್ಯ ಮಾಡುವವ, ನನ್ನ ಅದ್ಭುತ ಬರಹಗಾರ ನನ್ನ ಸಹೋದರ ಇಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೊಂದು ಅದ್ಭುತ ಆಚರಣೆಯಾಗಲಿ, ನೆನೆಪುಗಳು ಸರಿಯಲಿ ..ಜೀವನದಲ್ಲಿ ಇನ್ನು ಹೆಚ್ಚು ಅಡ್ವೆಂಚರ್‌ ಬರಲಿ. ನಿನ್ನ ಹಿಂದೆ ನಾನು ಸದಾ ಇರುವೆ. ಅಮ್ಮನೂ ಇರುತ್ತಾಳೆ' ಎಂದಿದ್ದಾರೆ ಪ್ರಿಯಾ. 

View post on Instagram