ಬಾಲಿವುಡ್ ಸೆಕ್ಸಿ ಬಾಂಬ್ ಶೆರ್ಲಿನ್ ಚೋಪ್ರಾ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೆರ್ಲಿನ್ ವಿಡಿಯೋ ನೋಡಿದ ಬಳಕೆದಾರರು ಕೆಂಡಾಮಂಡಲವಾಗಿದ್ದಾರೆ. ಬೆತ್ತಲೆ ಬರಬಹುದಿತ್ತಲ್ಲ ಎಂದಿದ್ದಾರೆ.
ಬಾಲಿವುಡ್ ನಟಿ ಹಾಗೂ ರೂಪದರ್ಶಿ ಶೆರ್ಲಿನ್ ಚೋಪ್ರಾ ಅರೆಬರೆ ಬಟ್ಟೆ ಧರಿಸಿ ರಸ್ತೆಗಿಳಿಯೋದು ಹೊಸದಲ್ಲ. ಶೆರ್ಲಿನ್ ಚೋಪ್ರಾ ಈಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ಡ್ರೆಸ್ ನೋಡಿ ನೆಟ್ಟಿಗರು ಉರಿದುಕೊಂಡಿದ್ದಾರೆ. ಇಂಥ ಹುಡುಗಿಯರನ್ನೆಲ್ಲ ಯಾಕೆ ಭಾರತದಲ್ಲಿ ಇಡ್ಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂಬೈ (Mumbai) ಬಾಂದ್ರಾದಲ್ಲಿ ಕಾಣಿಸಿಕೊಂಡ ಶೆರ್ಲಿನ್ ಚೋಪ್ರಾ (Sherlyn Chopra) ಕಪ್ಪು ಬಣ್ಣದ ತುಂಡುಡಿಗೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಕಪ್ಪು ಬಣ್ಣದ ದುಪ್ಪಟ್ಟಾ ಒಂದನ್ನು ಶೆರ್ಲಿನ್ ಸುತ್ತಿಕೊಂಡು ಬಂದಂತಿದೆ. ಆಕೆ ಕಾರ್ ನಿಂದ ಇಳಿಯುತ್ತಿರುವ ದೃಶ್ಯವನ್ನು ಪಾಪರಾಜಿಗಳು ಸೆರೆ ಹಿಡಿದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಇಷ್ಟೇ ಅಲ್ಲ, ಪಾಪರಾಜಿ (paparazzi) ಗಳಿಗೆ ಫೋಸ್ ನೀಡಿದ ಶೆರ್ಲಿನ್ ಚೋಪ್ರಾ, ಏನು ಕಾಣ್ತಿಲ್ಲ ಅಲ್ವಾ ಅಂತಾ ನಾಲ್ಕೈದು ಬಾರಿ ಕೇಳಿದ್ದಾಳೆ. ಯಾಕೆ ಇನ್ನೇನು ಕಾಣ್ಬೇಕಿತ್ತು ಅನ್ನೋದು ನೆಟ್ಟಿಗರ ಪ್ರಶ್ನೆ.
ಬಿಡಿ ಬಿಡಿ ಎಂದ್ರೂ ಹುಡುಗನನ್ನು ಹಿಡಿದು ಶೆರ್ಲಿನ್ ಮಾಡ್ತಿರೋದೇನು? ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!
ಶೆರ್ಲಿನ್ ಈ ಅವತಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶೆರ್ಲಿನ್ ಚೋಪ್ರಾ ವಿಡಿಯೋ ನೋಡಿದ ನೆಟ್ಟಿಗರು ಬಾಯಿಗೆ ಬಂದಂತೆ ಉಗಿದಿದ್ದಾರೆ. ಈಕೆ ಮುಂದಿನ ಜನರೇಜನ್ ಗೆ ಹಾರ್ಮ್ ಫುಲ್ ಅಂತಾ ಒಬ್ಬರು ಕಮೆಂಟ್ ಮಾಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಉಪದ್ರವಕೊಡುವ ಇಂಥವರ ವಿರುದ್ಧ ಪೊಲೀಸ್ ಸೂಕ್ತ ಕ್ರಮಕೈಗೊಳ್ಳಬೇಕು ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಪಾಪರಾಜಿಗಳು ಇವಳ ಫೋಟೋ ಏಕೆ ಸೆರೆ ಹಿಡಿತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವಳು ತನಗಿಷ್ಟ ಬಂದಂತೆ ಮಾಡ್ತಿದ್ದಾಳೆ, ಜನರು ಆಕೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಅವಳು ಯಾರಿಗೂ ಸ್ಪೂರ್ತಿ ನೀಡುವ ಸೆಲೆಬ್ರಿಟಿ ಅಲ್ಲ. ಅವಳನ್ನೇಕೆ ಮಹಾನ್ ಮಾಡ್ತಿದ್ದೀರಿ ಅಂತಾ ಇನ್ನೊಬ್ಬ ಬಳಕೆದಾರರು ಪಾಪರಾಜಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಕೆ ಧರಿಸಿದ ಬಟ್ಟೆಗಿಂತ ಹೆಚ್ಚು ಬಟ್ಟೆಯನ್ನು ನಮ್ಮ ಸಾಕು ನಾಯಿಗೆ ಹಾಕ್ತೇವೆ ಎಂದು ಇನ್ನೊಬ್ಬರು ಕೋಪ ವ್ಯಕ್ತಪಡಿಸಿದ್ರೆ ಮತ್ತೊಬ್ಬರು ಇವಳಿಗಿಂತ ಉರ್ಫಿ ಎಷ್ಟೋ ಬೆಟರ್ ಎಂದಿದ್ದಾರೆ. ಭಾರತೀಯರ ಮಾನ ಹರಾಜು ಮಾಡ್ತಿರೋ ಈಕೆ ಬೆತ್ತಲಾಗಿ ಬರಬಹುದಿತ್ತು ಎಂದು ಮತ್ತೆ ಕೆಲವರು ಹೇಳಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಬರೋ ಇಂಥ ವಿಡಿಯೋ ನೋಡಿದ್ರೆ ಮಕ್ಕಳು ಹಾಳಾಗ್ತಾರೆ. ಇನ್ಸ್ಟಾಗ್ರಾಮ್ ಲಾಗ್ ಔಟ್ ಮಾಡೋದು ಬೆಸ್ಟ್ ಎನ್ನುವ ಅಭಿಪ್ರಾಯವೂ ಇಲ್ಲಿ ಕೇಳಿ ಬಂದಿದೆ.
ಏರ್ಪೋರ್ಟ್ನಲ್ಲಿ ಶೆರ್ಲಿನ್ ಹಾಟ್ ಅವತಾರ: ವಿಮಾನ ಹಾರಾಟ ರದ್ದಾಗೋಯ್ತಾ? ವಿಡಿಯೋ ವೈರಲ್
ಶೆರ್ಲಿನ್ ಚೋಪ್ರಾ ಇಂಥ ಬಟ್ಟೆ ಧರಿಸಿ ಬಂದಿದ್ದು ಇದೇ ಮೊದಲಲ್ಲ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೆರ್ಲಿನ್ ಇಂಥ ಫೋಟೋಗಳ ಬಂಡಲ್ ಇದೆ. ಹಾಟ್ ವಿಡಿಯೋ, ಫೋಟೋಗಳನ್ನು ಶೆರ್ಲಿನ್ ತನ್ನ ಇನ್ಸ್ಟಾ ಪೋಸ್ಟ್ ನಲ್ಲಿ ಹಂಚಿಕೊಳ್ತಾಳೆ. ಶೆರ್ಲಿನ್ ಗೆ ಜನರು ಎಷ್ಟೇ ಛೀಮಾರಿ ಹಾಕ್ಲಿ, ಆಕೆ ತನ್ನ ಅಭ್ಯಾಸ ಬಿಟ್ಟಿಲ್ಲ. ಬೋಲ್ಡ್ ನೆಸ್ ಗೆ ಶೆರ್ಲಿನ್ ಹೆಸರುವಾಸಿ. 40ನೇ ವಯಸ್ಸಿನಲ್ಲೂ ಶೆರ್ಲಿನ್ ಹಾಟ್ ಆಗಿದ್ದಾಳೆ. ಫಿಟ್ನೆಸ್ ಮೆಂಟೇನ್ ಮಾಡಿದ್ದಾಳೆ. ಆಕೆ ಅರೆ ಬರೆ ಬಟ್ಟೆ ಪಡ್ಡೆ ಹುಡುಗರನ್ನು ಸೆಳೆಯುತ್ತದೆ. ಆಕೆಗೆ ಶಾಪ ಹಾಕುತ್ಲೇ, ಕೊಳಕು ಎನ್ನುತ್ಲೇ ಆಕೆ ಫೋಟೋ, ವಿಡಿಯೋ ನೋಡುವ ಜನರ ಸಂಖ್ಯೆ ಸಾಕಷ್ಟಿದೆ. ಹಾಗಾಗಿಯೇ ಇನ್ಸ್ಟಾಗ್ರಾಮ್ ನಲ್ಲಿ ಶೆರ್ಲಿನ್ 15.9 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಆಕೆಯ ಒಂದೊಂದು ಫೋಟೋ, ಪೋಸ್ಟ್ ಗೂ ಲಕ್ಷ ಲಕ್ಷ ಲೈಕ್ ಸಿಗ್ತಿದೆ. ಶೆರ್ಲಿನ್ ಚೋಪ್ರಾ ಕಾಮ ಸೂತ್ರ 3D, ವಾಝಾ ತುಮ್ ಹೋ, ಟೈಮ್ ಪಾಸ್ ಮತ್ತು ನಾಟಿ ಬಾಯ್ ಮುಂತಾದ ಚಿತ್ರಗಳ ನಟಿಸಿದ್ದಾಳೆ. ಪೌರಾಶ್‌ಪುರ ಸೀಸನ್ 3 ಆಕೆ ಕಾಣಿಸಿಕೊಳ್ಳಲಿದ್ದಾಳೆ.