ಕಣ್ಣು ಕುಕ್ಕಿಸುವ ಸೌಂದರ್ಯದಿಂದ ಎಲ್ಲರ ನಿದ್ದೆ ಕದ್ದ ಬಾಲಿವುಡ್ ಬೆಡಗಿ ವಿಮಿ 34ನೇ ವಯಸ್ಸಿನಲ್ಲಿಯೇ ಬೀದಿ ಬದಿ ಹೆಣವಾದದ್ದು ಹೇಗೆ?
ಆಕರ್ಷಕ ಕಣ್ಣುಗಳು, ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕು ಎನ್ನುವಂಥ ನೋಟ, ಕನಸಿನ ರಾಣಿಯೆಂದೇ ಈಕೆ ಖ್ಯಾತಿ ಪಡೆದ ನಟಿ ಈಕೆ. ಏಕಾಏಕಿ ಸೂಪರ್ಸ್ಟಾರ್ ಪಟ್ಟಕ್ಕೇರಿ, ಸಿನಿಮಾದ ಡೇಟ್ಸ್ಗಾಗಿ ನಿರ್ಮಾಪಕರನ್ನು ಮನೆಯ ಮುಂದೆ ನಿಲ್ಲಿಸಿದಾಕೆ! ಈಕೆಯನ್ನು ಒಮ್ಮೆ ಕಣ್ತುಂಬಿಸಿಕೊಳ್ಳಲು ಹವಣಿಸಿದ ಯುವಕರು ಅದೆಷ್ಟೋ ಮಂದಿ! ಆದರೆ ಕೊನೆಗೆ ಈಕೆ ಕಂಡದ್ದು ದುರಂತ ಸಾವು. ರಸ್ತೆ ಬದಿಯ ಹೆಣವಾದರೂ ಕಣ್ಣೆತ್ತಿ ನೋಡುವವರೂ ಗತಿಯಿಲ್ಲವಾದ ಕರಾಳ ಅಂತ್ಯ ಕಂಡಾಕೆ. ಈಕೆಯ ಒಂದೇ ಒಂದು ನೋಟಕ್ಕೆ ಹುಚ್ಚೆದ್ದು ಹೋಗುತ್ತಿದ್ದ ಜನರಿದ್ದರೂ ಈಕೆ ಸತ್ತಾಗ ನಾಲ್ಕು ಹೆಗಲು ಕೊಡುವವರೂ ಬರಲಿಲ್ಲ. ಆಕೆಯ ಮೃತ ದೇಹವನ್ನು ಕೈಗಾಡಿ ಮೇಲೆ ಇಟ್ಟು ಚಿತಾಗಾರಕ್ಕೆ ಕೊಂಡೊಯ್ಯಲಾಯಿತು ಎಂದರೆ ಆಕೆಯ ಬದುಕು ಅದೆಂಥ ದುರಂತವಾಗಿತ್ತು ಊಹಿಸಿ. ಇಂಥದ್ದೊಂದು ಕರಾಳ ಬದುಕು ಕಂಡವರು, 70ರ ದಶಕದಲ್ಲಿ ಮನೆಮಾತಾಗಿದ್ದ ನಟಿ ವಿಮಿ. ಹುಸನ್ ಕಿ ಮಲ್ಲಿಕಾ (Hussan E Mallika) ಎಂಬ ಬಿರುದು ಪಡೆದ ವಿಮಿ, ಹುಚ್ಚೆಬ್ಬಿಸುವ ಸೌಂದರ್ಯ ಘನಿಯಾಗಿದ್ದಾಕೆ. ಈಕೆಯ ಛಾಪು ಎಷ್ಟಿತ್ತು ಎಂದರೆ, ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಮೇಲೂ ಈಕೆಯ ಬೇಡಿಕೆ ಕುಗ್ಗಿರಲಿಲ್ಲ. ಆದರೆ ಕೇವಲ 34ನೇ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡರು. ಆಗಸ್ಟ್ 22 ನಟಿ ಸಾವನ್ನಪ್ಪಿ 47 ವರ್ಷಗಳೇ ಗತಿಸಿವೆ. 1977ರಲ್ಲಿ ನಟಿ ಸಾವನ್ನಪ್ಪಿದರೂ ಈಕೆಯ ಸಿನಿಮಾಗಳು ಇಂದಿಗೂ ಓಡುತ್ತಲೇ ಇವೆ!
ಈಕೆಯ ಜೀವನ ಕಥೆಯೇ ಕರಾಳವಾದದ್ದು. ಸುನಿಲ್ ದತ್ ಮತ್ತು ರಾಜ್‌ಕುಮಾರ್ ಅವರ ಮೊದಲ ಚಿತ್ರ 'ಹುಮ್ರಾಜ್' ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಈಕೆ ಪದಾರ್ಪಣೆ ಮಾಡಿದರು. ಆ ಕಾಲದ ಪ್ರಸಿದ್ಧ ಕೈಗಾರಿಕೋದ್ಯಮಿಯ ಮಗ ಶಿವ ಅಗರ್ವಾಲ್ (Shiv Agarwal) ಅವರನ್ನು ವಿವಾಹವಾದರು. ಇವರ ಮದುವೆಗೆ ವಿಮಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಮದುವೆಯಿಂದ ವಿಮಿಗೆ ಇಬ್ಬರು ಮಕ್ಕಳಿದ್ದರು. ಆಗಿನ ಕಲ್ಕತ್ತಾದಲ್ಲಿ ತಮ್ಮ ಪತಿಯೊಂದಿಗೆ ಪಾರ್ಟಿಗೆ ಬಂದಾಗ ಈಕೆ ಸಂಗೀತ ನಿರ್ದೇಶಕ ರವಿಯನ್ನು ಭೇಟಿಯಾದರು. ರವಿ ವಿಮಿಯ ಸೌಂದರ್ಯಕ್ಕೆ ಮಾರುಹೋಗಿ ಅವರು ವಿಮಿ ಮತ್ತು ಆಕೆಯ ಪತಿ ಶಿವ ಅವರನ್ನು ಮುಂಬೈಗೆ ಕರೆಸಿ ಬಿಆರ್ ಚೋಪ್ರಾರ 'ಹುಮ್ರಾಜ್' ನಲ್ಲಿ ನಟಿಸುವ ಅವಕಾಶ ಕಲ್ಪಿಸಿದರು. ಅತ್ತೆ ವಿರೋಧವಿದ್ದರೂ, ಗಂಡನ ಬೆಂಬಲದಿಂದ ವಿಮಿ ಚಿತ್ರದಲ್ಲಿ ನಟಿಸಿದರು.
undefined
ದೀಪಿಕಾ ಪಡುಕೋಣೆ ಮಗುವಿನ ಹೆಸರು ರಿವೀಲ್? ಹೆಸರಿಗೆ ಪರ್ಮಿಷನ್ ಪಡೆದಿದ್ದಾರೆ ರಣವೀರ್ ಸಿಂಗ್!
ಪತಿ ತಂದೆ ತಾಯಿಯ ಮಾತನ್ನೂ ಕೇಳದಿದ್ದಾಗ ತಂದೆ-ತಾಯಿ ಇಬ್ಬರನ್ನೂ ಆಸ್ತಿಯಿಂದ ಹೊರಹಾಕಿ ಮನೆಯಿಂದಲೂ ಹೊರಗಟ್ಟಿದರು. ಈಗ ಮನೆ ನಡೆಸುವ ಸಂಪೂರ್ಣ ಜವಾಬ್ದಾರಿ ವಿಮಿಯ ಹೆಗಲ ಮೇಲೆ ಬಿದ್ದಿತ್ತು. ಈಕೆಗೆ ಸಿನಿಮಾಗಳಿಂದ ಆಫರ್ ಬರಲು ಶುರುವಾದವು. ಸುನೀಲ್ ದತ್, ಶಶಿ ಕಪೂರ್, ರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಿದರು. ಬಿ.ಆರ್.ಚೋಪ್ರಾ ಅವರೊಂದಿಗೆ ಸಿನಿಮಾ ಪ್ರವೇಶಿಸಿದ ವಿಮಿ ಅವರ ಜತೆ 3 ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿದ್ದರು. ವಿಮಿಗೆ ಹಲವು ಚಿತ್ರಗಳಿಗೆ ಆಫರ್‌ಗಳು ಬಂದಿದ್ದವು, ಆದರೆ ಬಿಆರ್ ಚೋಪ್ರಾ ಅವರ ಒಪ್ಪಂದದಿಂದಾಗಿ ಅವರು ಚಿತ್ರಗಳಿಗೆ ಸಹಿ ಹಾಕಲು ಸಾಧ್ಯವಾಗಲಿಲ್ಲ. ಒಂದು ದಿನ ಅವರಿಬ್ಬರೂ ಒಂದು ಚಿತ್ರದ ಬಗ್ಗೆ ಜಗಳವಾಡಿದರು ಮತ್ತು ಬಿಆರ್ ಚೋಪ್ರಾ ಅವರನ್ನು ಒಪ್ಪಂದದಿಂದ ಬಿಡುಗಡೆ ಮಾಡಿದರು. ಈಗ ವಿಮಿಗೆ ಕೆಲಸ ಸಿಕ್ಕಿತು, ಆದರೆ ಚಿತ್ರಗಳು ವಿಫಲವಾದ ಕಾರಣ ಯಶಸ್ಸು ಕಳೆದುಹೋಯಿತು. ಫ್ಲಾಪ್ ಚಿತ್ರಗಳ ನಂತರವೇ ನಿರ್ಮಾಪಕರು ಈಕೆಗೆ ಚಿತ್ರಗಳನ್ನು ನೀಡಲಿಲ್ಲ. ಕೈಯಲ್ಲಿ ಹಣವಿಲ್ಲದೇ ಆರ್ಥಿಕ ಮುಗ್ಗಟ್ಟಿನ ಕಾಲ ಬಂದಾಗ ಪತಿ ಶಿವು ಕುಡಿತದ ಚಟಕ್ಕೆ ಬಿದ್ದು ವಿಮಿಯೊಂದಿಗೆ ಜಗಳವಾಡತೊಡಗಿದರು. ಸಣ್ಣ ನಿರ್ಮಾಪಕರ ಜೊತೆ ಸಣ್ಣಪುಟ್ಟ ಕೆಲಸ ಮಾಡುವಂತೆ ಶಿವ್ ವಿಮಿ ಮೇಲೆ ಒತ್ತಡ ಹೇರಿದ್ದರು. ಹೀಗಾಗಿ ಆಕೆಯ ಪತಿಯೊಂದಿಗೆ ಸಂಬಂಧ ಹದಗೆಟ್ಟಿತ್ತು.
ಅದೇ ಸಮಯದಲ್ಲಿ, ವಿಮಿ ಚಲನಚಿತ್ರ ನಿರ್ಮಾಪಕ ಜಾಲಿಯೊಂದಿಗೆ ಪ್ರೀತಿಯಲ್ಲಿ ಬಿದ್ದರು. ಪತಿಯನ್ನು ತೊರೆದು ಜಾಲಿಯೊಂದಿಗೆ ವಾಸಿಸಲು ಪ್ರಾರಂಭಿಸಿದರು. ಈ ಪ್ರೇಮವೂ ವಿಮಿಯ ಜೀವನದಲ್ಲಿ ಕೆಲವೇ ದಿನಗಳು ಉಳಿಯಲಿತ್ತು. ಕೆಲವು ದಿನಗಳ ನಂತರ ಜಾಲಿ ವಿಮಿ ಕುಡಿತದ ಚಟಕ್ಕೆ ಬಿದ್ದರು. ಪ್ರಿಯಕರ ಜಾಲಿ (Jolly) ಆಕೆಯನ್ನು ವೇಶ್ಯಾವಾಟಿಕೆಯತ್ತ ತಳ್ಳಿದ. ವಿಮಿಯ ವೃತ್ತಿಜೀವನ ಸಂಪೂರ್ಣ ಹಾಳಾಗಿ ಹೋಯಿತು. ವೇಶ್ಯಾವಾಟಿಕೆಯಲ್ಲಿ ದೇಹ ನಲುಗಿ ಹೋಯಿತು. ರೋಗ ಮೈಗೆ ಅಂಟಿತು. ಬದುಕು ಕುಸಿಯಿತು. ಒಂಟಿಯಾಗಿ ಹೋದರು. ಕೇವಲ 34 ನೇ ವಯಸ್ಸಿನಲ್ಲಿ, ವಿಮಿಯ ಯಕೃತ್ತು ಸಂಪೂರ್ಣವಾಗಿ ಹಾನಿಗೊಳಗಾಯಿತು. ಕಾಯಿಲೆಗೆ ಚಿಕಿತ್ಸೆ ಪಡೆಯಲು ಹಣವಿರಲಿಲ್ಲ. ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಿಸಲಾಯಿತು. 1977ರಲ್ಲಿ ಅಲ್ಲಿಯೇ ಆಕೆ ಕೊನೆಯುಸಿರು ಬಿಟ್ಟರು. ವಿಮಿ ಸತ್ತಾಗ, ಆಕೆಯ ಶವಕ್ಕೆ ಹೆಗಲು ಕೊಡುವವರು ಯಾರೂ ಇರಲಿಲ್ಲ ಮತ್ತು ಅವರನ್ನು ಸ್ಮಶಾನಕ್ಕೆ ಕರೆದೊಯ್ಯುವವರು ಯಾರೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಿದ್ದ ವಿಮಿಯ ಮೃತದೇಹವನ್ನು ಕೈಗಾಡಿಯಲ್ಲಿಟ್ಟು ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.
ಬಟ್ಟೆ ಕಳಚಿ ಬಿಟ್ಟಿ ಆಫರ್ ಕೊಟ್ಟ ಶೆರ್ಲಿನ್ ಹೊಸ ವೇಷಕ್ಕೆ ಶಾಕ್! ಮತಾಂತರವಾದ್ರಾ ಕೇಳ್ತಿದ್ದಾರೆ ಫ್ಯಾನ್ಸ್!