ಸಮಂತಾಗೆ ಈಗ ಜ್ಞಾನೋದಯ ಆಯ್ತಾ ಅಂತ ಕೇಳಿದ್ರೆ ಏನ್ ಹೇಳೋದು ಅಂತ ಯೋಚಿಸ್ತಿದೀರಾ..!?

By Shriram Bhat  |  First Published Aug 18, 2024, 1:54 PM IST

ತೆಲುಗು ಹಾಗು ತಮಿಳು ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡಿರುವ ನಟಿ ಸಮಂತಾ ಅವರು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಕೂಡ ಪಡೆದಿದ್ದಾರೆ. ನಟಿ ಸಮಂತಾ ಅವರು ತೆಲುಗು ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ..


ತೆಲುಗು ಮೂಲದ ಖ್ಯಾತ ನಟಿ ಸಮಂತಾ (Samantha Ruth Prabhu) ಯಾರಿಗೆ ಗೊತ್ತಿಲ್ಲ. ಸದ್ಯ ಮಯೋಸೈಟಿಸ್ ಖಾಯಿಲೆಯಿಂದ ಹಂತಹಂತವಾಗಿ ಚೇತರಿಕೆ ಕಾಣುತ್ತಿರುವ ನಟಿ ಸಮಂತಾ ಅವರು ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ಆಕ್ವಿವ್ ಆಗಿರುತ್ತಾರೆ. ಆಗಾಗ ಹಲವು ಸಂದರ್ಶನಗಳಲ್ಲಿ ಕೂಡ ನಟಿ ಸಮಂತಾ ಭಾಗಿಯಾಗುತ್ತಾರೆ. ಆದರೆ, ಸಮಂತಾ ಮಾತನಾಡಿರುವ ಹಲವು ಸಂದರ್ಶನಗಳ ಕ್ಲಿಪ್ಪಿಂಗ್ಸ್‌ ಇಂಟರ್ನೆಟ್‌ಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. 

ಹೀಗೆ ವೈರಲ್ ಆಗುತ್ತಿರುವ ವೀಡಿಯೋ ಒಂದರಲ್ಲಿ ನಟಿ ಸಮಂತಾ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. 'ನನಗೆ ಈಗ ಜ್ಞಾನೋದಯ ಆಗಿದೆ. ಅದೇನೆಂದರೆ, ಇತ್ತೀಚೆಗೆ ಸಕ್ಸಸ್ ಪದದ ಅರ್ಥ ಬದಲಾಗಿದೆ. ಹೆಲ್ತ್‌ ಇಂಪಾರ್ಟೆಂಟ್, ಫ್ಯಾಮಿಲಿ ಮುಖ್ಯ, ಫ್ಯಾಮಿಲಿಗೆ ಕೊಡುವ ಟೈಮ್ ಮುಖ್ಯ. ಸಂತೋಷ ಮುಖ್ಯ, ಈ ಕ್ಷಣದಲ್ಲಿ ಬದುಕುವುದು ತುಂಬಾ ಮುಖ್ಯ.. ಹೀಗೆ ಹತ್ತು ಹಲವು ಸಂಗತಿಗಳಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆ ಆಗಿದೆ' ಎಂದಿದ್ದಾರೆ ನಟಿ ಸಮಂತಾ. 

Latest Videos

undefined

ಪ್ರಿಯಾಂಕಾ ಚೋಪ್ರಾ ಬಾಯಿಂದ ಇದೆಂಥಾ ಮಾತು, ಲೈಫ್ ರಿಯಾಲಿಟಿ ಅಂದ್ರೆ ಇದೇನಾ..!?

ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಮಿಂಚಿರುವ ನಟಿ ಸಮಂತಾ, ಬಾಲಿವುಡ್‌ ಸಿನಿರಂಗದಲ್ಲಿ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಎಸ್‌ ಎಸ್‌ ರಾಜಮೌಳಿ ನಿರ್ದೇಶನದ 'ಈಗ' ಚಿತ್ರವೂ ಸೇರಿದಂತೆ, ಸಮಂತಾ ಅಭಿನಯದ ಹಲವು ಸಿನಿಮಾಗಳು ಬಾಲಿವುಡ್‌ನಲ್ಲೂ ಡಬ್ ಆಗಿವೆ. ಹೀಗಾಗಿ ನಟಿ ಸಮಂತಾ ಅವರು ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತದಲ್ಲಿ ಕೂಡ ಸಖತ್ ಫೇಮಸ್!

ತೆಲುಗು ಹಾಗು ತಮಿಳು ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡಿರುವ ನಟಿ ಸಮಂತಾ ಅವರು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಕೂಡ ಪಡೆದಿದ್ದಾರೆ. ನಟಿ ಸಮಂತಾ ಅವರು ತೆಲುಗು ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ದಾಂಪತ್ಯದಲ್ಲಿ ಅದೇನು ಆಯಿತೋ ಗೊತ್ತಿಲ್ಲ, ಡಿವೋರ್ಸ್ ಆಗಿದೆ. ಈಗ ನಾಗ ಚೈತನ್ಯ ಅವರು ಮತ್ತೊಬ್ಬರು ನಟಿ ಶೋಭಿತಾ ಅವರೊಂದಿಗೆ ಎಂಜೇಗ್‌ಮೆಂಟ್ ಮಾಡಿಕೊಂಡಿದ್ದಾರೆ. 

ಹೃದಯಗೀತೆ ಚಿತ್ರ ಶುರುವಾಗಿದ್ದು ಯಾಕೆ, ನಟ ವಿಷ್ಣುವರ್ಧನ್ ಸ್ವೀಕರಿಸಿದ್ದ ಚಾಲೆಂಜ್ ಎಂಥದ್ದು?

ನಟಿ ಸಮಂತಾ ಅವರು ಕಳೆದ ಎರಡು ವರ್ಷಗಳಿಂದ ಮಯೋಸೈಟಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ, ಈಗ ಅದರಿಂದ ಸಾಕಷ್ಟು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೂ ಕೂಡ ಇನ್ನೂ ಕಂಪ್ಲೀಟ್ ಕ್ಯೂರ್ ಆಗಿಲ್ಲ ಎನ್ನಲಾಗುತ್ತಿದ್ದು, ಇನ್ನೂ ಟ್ರೀಟ್‌ಮೆಂಟ್ ನಡೆಯುತ್ತಿದೆಯಂತೆ. ಮಯೋಸೈಟಿಸ್ ಖಾಯಿಲೆ ಗುಣವಾದ ಬಳಿಕ ನಟಿ ಸಮಂತಾ ಮತ್ತೆ ತಮ್ಮ ಕೆರಿಯರ್ ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ನಟಿ ಸಮಂತಾ ಅವರು ಆಗಾಗ ಸುದ್ದಿಯಾಗುವುದಂತೂ ಸುಳ್ಳಲ್ಲ!

click me!