
'ಬಾಲಿಕಾ ವಧು' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡ ನಟ ವಿಕ್ರಾಂತ್ ಮಾಸ್ಸಿ 2014ರಲ್ಲಿ 'ಲೂಟೆರಾ' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದಾದ ನಂತರ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಜನಪ್ರಿಯತೆ ಪಡೆಯದೆ ಸುಮ್ಮನಿದ್ದಾಗ ವೃತ್ತಿ ಜೀವನದಲ್ಲಿ ಬಿಗ್ ಹಿಟ್ ತಂದುಕೊಟ್ಟಿದ್ದು ದೀಪಿಕಾ ಪಡುಕೋಣೆ ಜೊತೆ 'ಚಪಾಕ್' ಚಿತ್ರದಲ್ಲಿ ಕಾಣಿಸಿಕೊಂಡಾಗ.
ಸುಶಾಂತ್ ಸಿಂಗ್ ಅಗಲಿಕೆ ನಂತರ ಬಾಲಿವುಡ್‌ನಲ್ಲಿ ನೆಪೊಟಿಸಮ್ ಬಗ್ಗೆ ಚರ್ಚೆ ಶುರುವಾಗಿದೆ. ಇದರಿಂದ ಸ್ಟಾರ್ ನಟರ ನಡುವೆಯೇ ವಾದ-ವಿವಾದ ಸೃಷ್ಟಿಯಾಗಿದೆ. ಯಾವುದೇ ರೀತಿಯ ಬ್ಯಾಗ್ರೌಂಡ್ ಇಲ್ಲದೆ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಕ್ರಾಂತ್ ತಮಗೆ ಅವಾರ್ಡ್ ಕಾರ್ಯಕ್ರಮದಿಂದ ಆದ ಅವಮಾನ ಮತ್ತು ನೆಪೊಟಿಸಮ್ ಬಗ್ಗೆ ಮಾತನಾಡಿದ್ದಾರೆ.
'ನಾನು ತುಂಬಾ ವರ್ಷಗಳ ಹಿಂದೆ ಸಿನಿ ಜರ್ನಿ ಆರಂಭಿಸಿದೆ ಆ ಸಮಯದಲ್ಲಿ ಕಿರುತೆರೆಯಿಂದ ಸಿನಿಮಾಗೆ ಕಾಲಿಟ್ಟ ನಟರಿಗೆ ಹೆಚ್ಚಾಗಿ ಪ್ರಮುಖ್ಯತೆ ನೀಡುತ್ತಿರಲಿಲ್ಲ. ನನ್ನ ಮೊದಲ ಸಿನಿಮಾಗೆ ನಾನೂ ಆಡಿಷನ್ ನೀಡಿದಾಗ ಸೆಲೆಕ್ಟ್ ಆಗಲಿಲ್ಲ. ಆದರೆ ಸೆಲೆಕ್ಟ್ ಆಗಿದ್ದ ವ್ಯಕ್ತಿ ಸಿನಿಮಾ ರಿಜೆಕ್ಟ್ ಮಾಡಿದಕ್ಕೆ ಅದು ನನ್ನ ಪಾಲಾಯ್ತು. ಸಿನಿಮಾ ಮಾಡಲು ಇನ್ನೇನು 20 ದಿನಗಳು ಬಾಕಿ ಇದ್ದಾಗ ನನಗೆ ಕರೆ ಮಾಡಿ ತಿಳಿಸಿದ್ದರು. ಬಾಲಿವುಡ್‌ನಲ್ಲಿ ಎಲ್ಲವೂ ಲಕ್‌ನಿಂದಲೇ ಅವಕಾಶಗಳು ಸಿಗುವುದು ಕಡಿಮೆ, ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು' ಎಂದು ಮಾತನಾಡಿದ್ದಾರೆ.
Nepotism ಬಗ್ಗೆ:
'ನೆಪೊಟಿಸಮ್ ಎಲ್ಲಾ ಕಡೆ ಇರುತ್ತೆ ಸಿನಿಮಾ ಒಂದೇ ಅಲ್ಲ. ಚಿತ್ರರಂಗದಲ್ಲಿ ಅನೇಕರಿಗೆ ಆಫರ್ ಇಲ್ಲ ಇನ್ನು ಹೊಸಬರು ಬಂದರೆ ಯಾರು ಏನು ಮಾಡಲು ಸಾಧ್ಯ. ಅದರಲ್ಲೂ ಮೊದಲ ಸಿನಿಮಾ ಫ್ಲಾಪ್ ಆದರೆ ಅಲ್ಲಿಗೆ ಸಿನಿಮಾ ಜೀವನ ಅಷ್ಟೇ ಎಂದರ್ಥ. ಈ ಕಾರಣಕ್ಕೆ ಸಣ್ಣ ರೋಲ್ ಆದರೂ ಪರ್ವಾಗಿಲ್ಲ ಎಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದೆ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಎಂಟ್ರಿ ಕೊಟ್ಟ ಕಾರಣ ನಡೆಯುವುದನೆಲ್ಲಾ ಮುಷ್ಟಿ ಬಿಡಿ ಮಾಡಿಕೊಂಡು ಸಹಿಸಿಕೊಂಡೆ' ಎಂದು ಬರೆದುಕೊಂಡಿದ್ದಾರೆ.
ಸುಶಾಂತ್ ಸಿಂಗ್ 'ಮಿನುಗುತಾರೆ'ಯಾಗಿರಲೆಂದು ಅಭಿಮಾನಿ ಏನ್ ಮಾಡಿದ್ರು ನೋಡಿ..!
ಅವಾರ್ಡ್ ಕಾರ್ಯಕ್ರಮ:
'ನಾನು ಕೆಲವೊಂದು ಸಿನಿಮಾಗಳಿಂದ ಬೆಸ್ಟ್ ನಟ ಎಂಬ ಪ್ರಶಸ್ತಿಗಳ ಪಟ್ಟಿಯಲ್ಲಿದೆ. ಅವಾರ್ಡ್ ಬರುವುದು ಸೆಕೆಂಡರಿ ಆದರೆ ನಮ್ಮನ್ನು ಕರೆಯುವುದು ಮುಖ್ಯ. ಆಯ್ಕೆ ಆಗಿದ್ದ ಸ್ಟಾರ್ ನಟರನ್ನು ಮಾತ್ರ ಆಹ್ವಾನಿಸಿದ್ದರು ಆದರೆ ನನಗೆ ಮಾಡಲಿಲ್ಲ. ಇದರಿಂದ ತುಂಬಾನೇ ನೋವು ಉಂಟಾಗಿದ್ದು ಅಲ್ಲಿಯೇ ನಿರ್ಧರಿಸಿದೆ ಜೀವನದಲ್ಲಿ ಇದನ್ನೆಲ್ಲಾ ಗೆಲ್ಲಬೇಕೆಂದು' ಎಂದು ಹಂಚಿಕೊಂಡಿದ್ದಾರೆ.
9 ವರ್ಷಗಳ ನಂತರ ಸತ್ಯ ಬಿಚ್ಚಿಟ್ಟ ಅಭಯ್; ನಿಜಕ್ಕೂ ಹೃತಿಕ್ ಇರೋದಕ್ಕೆ ಮೋಸವಾಯ್ತಾ?
ಒಟಿಟಿಯಲ್ಲಿ ಶಾರ್ಟ್ ಫಿಲ್ಮಂ ಮತ್ತು ವೆಬ್ ಸೀರಿಸ್ ಮಾಡುವ ಮೂಲಕ ವಿಕ್ರಾಂತ್ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.