Veteran Actor Dharmendra: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

Published : May 01, 2022, 10:21 PM ISTUpdated : May 01, 2022, 10:30 PM IST
Veteran Actor Dharmendra: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು

ಸಾರಾಂಶ

'ಆಕ್ಷನ್ ಕಿಂಗ್', 'ಹೀ ಮ್ಯಾನ್' ಅಂತಲೇ ಜನಪ್ರಿಯರಾಗಿರುವ ಬಾಲಿವುಡ್ ನಟ ಧರ್ಮೇಂದ್ರ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರವೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನುರಿತ ವೈದ್ಯರ ತಂಡ ನಿರಂತರವಾಗಿ ಅವರಿಗೆ ಚಿಕಿತ್ಸೆ ನೀಡುತ್ತಿದೆ. 

'ಆಕ್ಷನ್ ಕಿಂಗ್', 'ಹೀ ಮ್ಯಾನ್' ಅಂತಲೇ ಜನಪ್ರಿಯರಾಗಿರುವ ಬಾಲಿವುಡ್ (Bollywood) ನಟ ಧರ್ಮೇಂದ್ರ (Dharmendra) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರವೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನುರಿತ ವೈದ್ಯರ ತಂಡ ನಿರಂತರವಾಗಿ ಅವರಿಗೆ ಚಿಕಿತ್ಸೆ (Treatment) ನೀಡುತ್ತಿದೆ. ಇದೀಗ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಈಗ ಕೊಂಚ ಚೇತರಿಕೆ ಕಂಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. 

ಧರ್ಮೇಂದ್ರ ಅವರಿಗೆ ಕೆಲ ದಿನಗಳ ಹಿಂದೆ ಅನಾರೋಗ್ಯ ಉಂಟಾಗಿತ್ತು. ಮಾತ್ರವಲ್ಲದೇ  ಬೆನ್ನು ನೋವಿನ ಸಮಸ್ಯೆ ಎದುರಾದ ಕಾರಣ ಆಸ್ಪತ್ರೆಗೆ (Hospitalised) ದಾಖಲು ಮಾಡಿದೆವು. ಇಂದು ರಾತ್ರಿ ಅವರನ್ನು ಡಿಸ್ಚಾರ್ಜ್ (Discharge) ಮಾಡುವ ​ಸಾಧ್ಯತೆ ಇದೆ. ಈ ಬಗ್ಗೆ ಅಭಿಮಾನಿಗಳು (Fans) ಚಿಂತಿಸುವ ಅಗತ್ಯವಿಲ್ಲ ಎಂದು ಅವರ ಕುಟುಂಬದ ಆಪ್ತರು ಹೇಳಿರುವುದಾಗಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. ಧರ್ಮೇಂದ್ರ ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಅವರ ವಯಸ್ಸು 85 ವರ್ಷ ದಾಟಿದೆ. ಈ ಕಾರಣಕ್ಕೆ ಅವರಿಗೆ ವಯೋ ಸಹಜ ಕಾಯಿಲೆಗಳು ಸುತ್ತಿಕೊಳ್ಳುತ್ತಿವೆ ಎನ್ನಲಾಗಿದೆ. 

ಮದುವೆಯಾಗಲು ತಯಾರಿದ Hema Malini Jeetendra ಜೋಡಿ ತಪ್ಪಿಸಿದ Dharmendra

ಇನ್ನೂ ದೀರ್ಘಕಾಲದವರೆಗೆ ಚಿತ್ರರಂಗದಿಂದ ದೂರ ಉಳಿದಿದ್ದ ಧರ್ಮೇಂದ್ರ ಅವರು ಆಲಿಯಾ ಭಟ್ (Alia Bhatt) ಹಾಗೂ ರಣವೀರ್ ಸಿಂಗ್ (Ranveer Singh) ಅವರು ನಟಿಸುತ್ತಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahani) ಸಿನಿಮಾ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕರಣ್ ಜೋಹರ್ (Karan Johar) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷವಾಗಿ ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಕರಣ್ ಅವರ ಮರಳುತ್ತಿದ್ದಾರೆ. ಜಯಾ ಬಚ್ಚನ್ (Jaya Bachchan) ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸನ್ನಿ ಡಿಯೋಲ್ (Sunny Deol) ಹಾಗೂ ಬಾಬಿ ಡಿಯೋಲ್ (Bobby Deol) ಧರ್ಮೇಂದ್ರ ಅವರ ಮಕ್ಕಳು.

ತನ್ನ ಮೊದಲ ಕಾರು ತೋರಿಸಿದ ನಟ ಧರ್ಮೇಂದ್ರ..! ಕೊಟ್ಟಿದ್ದು ಬರೀ 18 ಸಾವಿರ

ಇತ್ತೀಚೆಗೆ ಧರ್ಮೇಂದ್ರ ಅವರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯ ಸೆಟ್‌ಗಳಿಂದ ಫೋಟೋಗಳನ್ನು ಪೋಸ್ಟ್ ಮಾಡಿದ್ದರು ಮತ್ತು ಸ್ನೇಹಿತರೇ, ನಾನು ಎಲ್ಲರಿಂದ ತುಂಬಾ ಪ್ರೀತಿ ಮತ್ತು ಗೌರವವನ್ನು ಪಡೆದಿದ್ದೇನೆ ನಾನು ಹೊಸ ಘಟಕದೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ನನಗೆ ಅನಿಸಲಿಲ್ಲ ಎಂದು ಹೇಳಿದ್ದರು. ಅವರ ಹುಟ್ಟುಹಬ್ಬದ ಮೊದಲು, ನಟ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ದೆಹಲಿಯಲ್ಲಿ ಶೂಟಿಂಗ್ ಮುಗಿಸಿ ಹಿಂತಿರುಗಿದ್ದೇನೆ. ಅವರು ಯಾವುದೇ ಹುಟ್ಟುಹಬ್ಬದ ಪ್ಲಾನ್‌ಗಳನ್ನು ಹೊಂದಿಲ್ಲ ಮತ್ತು ತಾವಾತು ಬರ್ತ್‌ಡೇ ಪ್ಲಾನ್‌ ಮಾಡಿಲ್ಲ ಎಂದು ಹೇಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ