
ಐರಾವತ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಬಾಲಿವುಡ್ ಚೆಲುವೆ ಊರ್ವಶಿ ರೌಟೇಲಾ ಪದೇ ಪದೇ ಟ್ರೋಲ್ ಆಗುತ್ತಿರುವುದು ಒಂದೇ ವಿಚಾರಕ್ಕೆ, ಅದು wardrobe malfunctionನಿಂದ. ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ನಟಿ ಡಿಸೈನರ್ ಉಡುಪು ಧರಿಸಿರುತ್ತಾರೆ ಆದರೆ ಅದೆಲ್ಲಾ ಜಾರಿ ಬೀಳುವಂತಿರುತ್ತದೆ. ಹೀಗಾಗಿ ಊರ್ವಶಿ ಟ್ರೋಲ್‌ಗೆ ಗುರಿಯಾಗುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಊರ್ವಶಿ ರೌಟೇಲಾ ಇನ್‌ಸ್ಟಾಗ್ರಾಂನಲ್ಲಿ ಡ್ಯಾನ್ಸ್ ವಿಡಿಯೋ ಹಂಚಿಕೊಂಡರು. ' So greatful ಬುರ್ಜ್ ಅಲ್ ಅರಬ್‌ನಲ್ಲಿ ಕಾರ್ಯಕ್ರಮ ನೀಡಿದ ಭಾರತೀಯ ಏಕೈಕಾ ಕಲಾವಿದೆ ನಾನು. ವಿಶ್ವದ ಏಳು ಮಂದಿಯಲ್ಲಿ ನಾನೊಬ್ಬಳು. ವರ್ಲ್ಡ್ ಕ್ಲಾಸ್ ಅವಕಾಶ ನೀಡಿದಕ್ಕೆ ಧನ್ಯವಾದಗಳು' ಎಂದು ಊರ್ವಶಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಊರ್ವಶಿ ಹಸಿರು ಬಣ್ಣದ ಬಾಡಿಕಾನ್ ಡ್ರೆಸ್ ಧರಿಸಿದ್ದಾರೆ. ಇದು ಕೂಡ ಡಿಸೈನರ್ ವೇರ್ ಆಗಿದ್ದು ಕುಣಿದು ಕುಪ್ಪಳಿಸುವಾಗ ಡ್ರೆಸ್ ಜಾರಿ ಜಾರಿ ಬೀಳುತ್ತಿತ್ತು ಅದನ್ನು ಸರಿ ಮಾಡಿಕೊಂಡು ವೇದಿಕೆ ಮೇಲೆ ಹಾಗೆ ಮ್ಯಾನೇಜ್ ಮಾಡಿದ್ದಾರೆ.
ಇದೇನಪ್ಪ ವಿಡಿಯೋ ಸರಿ ಇದೆ ಅಂದುಕೊಳ್ಳಬೇಡಿ. ಇದು ಎರಡನೇ ವಿಡಿಯೋ, ಇದಕ್ಕೂ ಮೊದಲು ಒಂದು ದೊಡ್ಡ ವಿಡಿಯೋ ಅಪ್ಲೋಡ್ ಮಾಡಿದ್ದರು ಆದರೆ ಈ ಡ್ರೆಸ್ ಧರಿಸಿ ಕಷ್ಟ ಪಡುತ್ತಿರುವುದು ಸ್ಪಷ್ಟವಾಗಿ ಕಾಣಿಸಿತ್ತು. ನೆಟ್ಟಿಗರು ನೆಗೆಟಿವ್ ಆಗಿ ಕಾಮೆಂಟ್ ಮಾಡಲು ಶುರು ಮಾಡುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ್ದಾರೆ.
ಉತ್ತರಾಖಂಡದ ನೈನಿತಾಲ್‌ನಲ್ಲಿ 25 ಫೆಬ್ರವರಿ 1994 ರಂದು ದೊಡ್ಡ ಉದ್ಯಮಿಯೊಬ್ಬರ ಮನೆಯಲ್ಲಿ ಜನಿಸಿದ ಊರ್ವಶಿ ಬಾಲ್ಯದಿಂದಲೂ ತನ್ನನ್ನು ತಾನು ಸ್ಪೆಷಲ್ ಎಂದು ಪರಿಗಣಿಸುತ್ತಿದ್ದರು. ಕೇವಲ 15 ವರ್ಷ ವಯಸ್ಸಿನಲ್ಲೇ ತನ್ನ ಸೌಂದರ್ಯವನ್ನು ಗುರುತಿಸಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು.ಊರ್ವಶಿ ರೌಟೇಲಾ ಅವರು ತಮ್ಮ ಶಾಲಾ ಶಿಕ್ಷಣವನ್ನು ದೆಹಲಿಯ ಹಿಂದೂ ಮತ್ತು ಗಾರ್ಗಿ ಕಾಲೇಜಿನಲ್ಲಿ ಮಾಡಿದರು. ಬಾಲ್ಯದಿಂದಲೂ ಮಾಡೆಲಿಂಗ್ ಮತ್ತು ನಟನೆ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು ಬಯಸಿದ್ದರು.
ಕೇವಲ 17 ನೇ ವಯಸ್ಸಿನಲ್ಲಿ, ಅವರು ತಮ್ಮ ಹೆಸರಿನಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ. 2011 ರಲ್ಲಿ, ಊರ್ವಶಿ ರೌಟೇಲಾ ಅವರು ಮಿಸ್ ಟೂರಿಸಂ ಕ್ವೀನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದರು ಮತ್ತು ನಂತರ ಅವರು ಮಿಸ್ ಏಷ್ಯನ್ ಸೂಪರ್ ಮಾಡೆಲ್ ಕಿರೀಟವನ್ನು ಗೆದ್ದರು.ಊರ್ವಶಿ ರೌಟೇಲಾ 2013 ರಲ್ಲಿ 'ಸಿಂಗ್ ಸಾಬ್ ದಿ ಗ್ರೇಟ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ಸನಮ್ ರೇ, ಗ್ರೇಟ್ ಗ್ರ್ಯಾಂಡ್ ಮಸ್ತಿ, ಹೇಟ್ ಸ್ಟೋರಿ 4 ಮತ್ತು ಪಗಲ್ಪಂತಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು.
ಊರ್ವಶಿ ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡೆಲಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ದುಬೈನಲ್ಲಿ ರ‍್ಯಾಂಪ್ ವಾಕ್ ಮಾಡುವ ಮೂಲಕ ಎಲ್ಲರ ಗಮನ ಸೆಳದಿದ್ದಾರೆ. ಊರ್ವಶಿ ಸೌಂದರ್ಯವಷ್ಟೇ ಅಲ್ಲ ಇನ್ನೂ ಒಂದು ವಿಷಯವನ್ನು ಎಕ್ಸಪರ್ಟ್ ಆಗಿದ್ದಾರೆ. ಅವರು ಉತ್ತಮ ಬ್ಯಾಸ್ಕೆಟ್‌ಬಾಲ್ ಪಟು ಆಗಿದ್ದಾರೆ. ಊರ್ವಶಿ ರಾಷ್ಟ್ರ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ.ಊರ್ವಶಿಯ ತಂದೆ ಮಾನವ್ ಸಿಂಗ್ ಮತ್ತು ತಾಯಿ ಮೀರಾ ರೌಟೇಲಾ ಇಬ್ಬರೂ ಬ್ಯುಸಿನೆಸ್ ಕ್ಷೇತ್ರದಲ್ಲಿದ್ದಾರೆ. ಇನ್ನೂ ನಟಿಯ ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ ಕ್ರಿಕೆಟಿಗ ರಿಷಬ್ ಪಂತ್ ಜೊತೆ ಸಂಬಂಧ ಹೊಂದಿದ್ದರು. ಆದರೆ ಇತ್ತೀಚೆಗೆ ನಟಿ ತನಗೆ ಬಾಯ್ ಫ್ರೆಂಡ್ ಇಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.