ಅರೆ, ಸಲ್ಮಾನ್ ಖಾನ್ ನಿಜ ಹೆಸರು ಬೇರೆನೇ ಇದೆಯಂತೆ, ಅದೇನು ಗೊತ್ತಾ?

Published : Feb 22, 2023, 02:12 PM IST
ಅರೆ, ಸಲ್ಮಾನ್ ಖಾನ್ ನಿಜ ಹೆಸರು ಬೇರೆನೇ ಇದೆಯಂತೆ, ಅದೇನು ಗೊತ್ತಾ?

ಸಾರಾಂಶ

ಸಿನಿಮಾ ಇಂಡಸ್ಟ್ರಿಗೆ ಬರ್ತಾ ಇದ್ದಂಗೆ ಹೆಸರೂ ಬದಲಾಗುತ್ತೆ. ಹಾಗ್ ನೋಡಿದ್ರೆ ಬಾಲಿವುಡ್‌ನಲ್ಲಿ ಸಲ್ಲು ಭಾಯ್ ನಿಂದ ಕಿಯಾರ ತನಕ ಅನೇಕ ತಾರೆಯರ ರಿಯಲ್ ಹೆಸ್ರು ಬೇರೆನೇ ಇದೆ.

ಹುಟ್ಟಿಂದ ಬಂದ ಹೆಸರು ಒಂದಾದ್ರೆ ಆಮೇಲೆ ಯಾವ್ಯಾವುದೋ ಕಾರಣಕ್ಕೆ ಸಾಕಷ್ಟು ಜನ ಹೆಸ್ರು ಬದಲಿಸಿಕೊಳ್ತಾರೆ. ಬದಲಿಸಿಕೊಂಡ ಹೆಸರಿನಿಂದಲೇ ಅವರು ಪ್ರಸಿದ್ಧರಾಗ್ತಾರೆ. ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ಇದೇ ಕಥೆ . ಬಾಲಿವುಡ್‌ ಹೀರೋಗಳೂ ಹೀಗೆ ಹೆಸರು ಬದಲಿಸಿಕೊಂಡು ರಿಯಲ್‌ ನೇಮ್ ತಮಗೇ ಮರ್ತು ಹೋಗೋ ಅಷ್ಟು ಫೇಮಸ್ ಆಗ್ತಾರೆ. ನಿಜಕ್ಕೂ ಹೆಸರು ಅನ್ನೋದು ಆ ಲೆವಲ್‌ಗೆ ವ್ಯಕ್ತಿಯೊಬ್ಬನ ಪ್ರಸಿದ್ಧಿಗೆ ಕಾರಣ ಆಗುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಆದರೆ ಈಗ ಪ್ರಸಿದ್ಧಿ ಪಡೆದ ಹೆಚ್ಚಿನವರು ತಮ್ಮ ಹೆಸರು ಬದಲಿಸಿಕೊಂಡವರೇ. ಸಲ್ಮಾನ್ ಖಾನ್ ರಿಂದ ಕೆಲವು ದಿನಗಳ ಹಿಂದೆ ಮದುವೆ ಆದ ಕಿಯಾರ ತನಕ ಹೆಚ್ಚಿನವರು ಇಂಡಸ್ಟ್ರಿಗೆ ಎಂಟ್ರಿ ಕೊಡ್ತಿದ್ದ ಹಾಗೆ ಹೊಸ ಹೆಸರು ಇಟ್ಟುಕೊಂಡಿದ್ದಾರೆ. ಅಂಥಾ ತಾರೆಯರ ರಿಯಲ್ ನೇಮ್ ಏನಾಗಿತ್ತು ಅನ್ನೋದೂ ಇಂಟರೆಸ್ಟಿಂಗೇ. ಆ ಸಂಗತಿಗಳು ಇಲ್ಲಿವೆ.

ಶಿಲ್ಪಾ ಶೆಟ್ಟಿ ರಿಯಲ್ ನೇಮ್
ವಯಸ್ಸು ನಲವತ್ತೈದು ಕಳೆದರೂ ಬಾಲಿವುಡ್‌ನ ಚಿರ ಯೌವನೆಯಂತೆ ಇರೋ ಲೇಡಿ ಶಿಲ್ಪಾ ಶೆಟ್ಟಿ. ಇಬ್ಬರು ಮಕ್ಕಳ ತಾಯಿ ಇತ್ತೀಚೆಗೆ ತಾನೇ ತನ್ನ ಮಗಳ ಬರ್ತ್ ಡೇಯನ್ನು ಅದ್ದೂರಿಯಾಗಿ ಆಚರಿಸಿಕೊಂಡರು. ಅವರು ಇಂಡಸ್ಟ್ರಿಗೆ ಕಾಲಿಡೋ ಮುಂಚೆ ಅವರ ಹೆಸರೇ ಬೇರೆ ಇತ್ತು ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲ. ಬ್ರಿಟಿಷ್ ರಿಯಾಲಿಟಿ ಟಿವಿ ಶೋ ಬಿಗ್ ಬ್ರದರ್ ಸೀಸನ್ 5 ಅನ್ನು ಗೆಲ್ಲುವ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದಾಕೆ ಶಿಲ್ಪಾ. ಆದರೆ ಶಿಲ್ಪಾ ಶೆಟ್ಟಿ ಅವರ ನಿಜವಾದ ಹೆಸರು ಅಶ್ವಿನಿ ಶೆಟ್ಟಿ. ಜ್ಯೋತಿಷಿಯೊಬ್ಬರು ಶಿಲ್ಪಾ ತಾಯಿಗೆ ಅಶ್ವಿನಿ ಅನ್ನೋ ಹೆಸರು ಬದಲಾಯಿಸಲು ಕೇಳಿದ್ದರಿಂದ ಅವರ ತಾಯಿ ಮಗಳ ಹೆಸರನ್ನು ಬದಲಾಯಿಸಲು ನಿರ್ಧರಿಸಿದರು.

ಕಿಯಾರಾ ಅಡ್ವಾಣಿ ನಿಜ ನಾಮಧೇಯ ಬೇರೆ ಇದೆ
ಕಿಯಾರಾ ಅವರ ನಿಜವಾದ ಹೆಸರು ಆಲಿಯಾ ಅಡ್ವಾಣಿ. ಈಗಾಗಲೇ ಇಂಡಸ್ಟ್ರಿಯಲ್ಲಿ ಆಲಿಯಾ ಭಟ್ ಎಂಬ ನಟಿ ಇದ್ದ ಕಾರಣ, ಸಲ್ಮಾನ್ ಖಾನ್ ಈಕೆಯ ಹೆಸರನ್ನು ಬದಲಾಯಿಸುವಂತೆ ಸಲಹೆ ನೀಡಿದ್ದರು. ಈ ಕಾರಣಕ್ಕಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಈಗ ಅವರು ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಈಗಷ್ಟೇ ಮದುವೆಯಾಗಿ ಹೊಸ ಜೀವನ ಶುರು ಮಾಡಿದ್ದಾರೆ.

ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!

ಪ್ರೀತಿ ಜಿಂಟಾ
ಪ್ರೀತಿ ಜಿಂಟಾ ಅವರ ಕಾಲದ ಅತ್ಯಂತ ಸುಂದರ(Beautiful) ನಟಿಯರಲ್ಲಿ ಒಬ್ಬರು. ನಟಿ 'ವೀರ್-ಜಾರಾ', 'ಕ್ಯಾ ಕೈಹೆನಾ' ಮತ್ತು 'ಕಲ್ ಹೋ ನ ಹೋ' ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ಡಿಂಪಲ್‌ಗಳಿಂದಾಗಿ ಅವರು ಯಾವಾಗಲೂ ಜನಮನದಲ್ಲಿದ್ದಾರೆ. ಪ್ರೀತಿ ಜಿಂಟಾ ಹೆಸರು ಪ್ರೀತಿ ಅಲ್ಲ. ಬದಲಾಗಿ ಪ್ರೀತಮ್ ಸಿಂಗ್ ಜಿಂಟಾ ಎಂದು.

ಸಾಜಿಬ್ ಖಾನೇ ಈ ಸೈಫು
ನಮಗೆಲ್ಲ ತಿಳಿದಿರುವಂತೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಶಾಹಿ ಪಟೌಡಿ ರಾಜ ವಂಶಸ್ಥರು. ಇದೀಗ ಹೋರಾಟ(Fight) ಮಾಡಿ ಪಟೌಡಿ ಅರಮನೆಯನ್ನು ಉಳಿಸಿಕೊಂಡಿದ್ದಾರೆ. ಅವನ ಹೆಸರೂ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಸೈಫ್ ಅಲಿ ಖಾನ್ ಅವರ ನಿಜವಾದ ಹೆಸರು ಸಾಜಿಬ್ ಅಲಿ ಖಾನ್.

ಸನ್ನಿ ಲಿಯೋನ್
 ಬಿ-ಟೌನ್ ನ 'ಬೇಬಿ ಡಾಲ್' , ಮಾಜಿ ನೀಲಿ ತಾರೆ ಸನ್ನಿ ಲಿಯೋನ್. ಸನ್ನಿ ಅವರ ನಿಜವಾದ ಹೆಸರು(Real name) ಕರಣ್​ಜಿತ್ ಕೌರ್ ವೋಹ್ರಾ

Pathaan: ಸುಳ್ಳು ಹೇಳ್ತೀರಾ? ಕೇಸ್​ ದಾಖಲಿಸ್ತೇನೆ ಎಂದು ಶಾರುಖ್​ ಖಾನ್​ಗೆ ಬೆದರಿಕೆ!

ಸಲ್ಮಾನ್ ಖಾನ್
ಸಲ್ಲೂ ಭಾಯ್ ಅಂದರೆ ಮುಂಬಯಿ ಜನರಿಗೆ ಅಪಾರ ಪ್ರೀತಿ. ವಯಸ್ಸು ಐವತ್ತಾದರೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂತಲೇ ಈಗಲೂ ಕರೆಸಿಕೊಳ್ಳುತ್ತಿರುವ ಈ ಹೀರೋ ರಿಯಲ್ ನೇಮ್ ಕೊಂಚ ಭಿನ್ನವಾಗಿದೆ. ಅವರ ನಿಜ ಹೆಸರು ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್. ಇಂಡಸ್ಟ್ರಿಗೆ ಬಂದಮೇಲೆ ತಮ್ಮ ಊದ್ದದ ಹೆಸರಿನ ಮೊದಲ ಭಾಗಕ್ಕೆ ಕತ್ತರಿ ಹಾಕಿ ಶಾರ್ಟ್ ಆಂಡ್ ಸ್ವೀಟ್ ಆಗಿ ಸಲ್ಮಾನ್ ಖಾನ್ ಆದ್ರು.

ಅಕ್ಷಯ್ ಕುಮಾರ್ ರಿಯಲ್ ನೇಮ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂದು ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಈ ನಟನ ನಿಜವಾದ ಹೆಸರು ರಾಜೀವ್ ಹರಿ ಓಂ ಭಾಟಿಯಾ. ಅವರ ಹೆಸರಿನ ಬಗ್ಗೆ ಸ್ವತಃ ಅಕ್ಷಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಈಗ ಅಕ್ಷಯ್ ಕುಮಾರ್ ಅನ್ನೋ ಹೆಸರು ವರ್ಲ್ಡ್ ಫೇಮಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!