ಮಲಯಾಳಂನ ಖ್ಯಾತ ನಟಿ ಮತ್ತು ನಿರೂಪಕಿ ಸುಬಿ ಸುರೇಶ್ ನಿಧನ ಹೊಂದಿದ್ದಾರೆ.
ಮಲಯಾಳಂನ ಖ್ಯಾತ ಹಾಸ್ಯ ನಟಿ, ನರೂಪಕಿ ಸುಬು ಸುರೇಶ್ ನಿಧನಹೊಂದಿದ್ದಾರೆ. 41 ವರ್ಷದ ನಟಿ ಸುಬಿ ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನಟಿ ಸುಬಿ ಚಿಕಿತ್ಸೆ ಫಲಕಾರಿಯಾಗದೆ ಕೊಚ್ಚಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಸುಬಿ ಸುರೇಶ್ ಮಿಮಿಕ್ರಿ ಕಲಾವಿದರಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ, ಎವರ್ ಗ್ರೀನ್ ಕಾಮಿಡಿ ಶೋ ‘ಸಿನಿಮಾಲಾ’ಗೆ ಎಂಟ್ರಿ ಕೊಟ್ಟ ನಂತರ ಮನೆಮಾತಾಗಿದ್ದರು. ಶೋನಲ್ಲಿ ಸುಬಿ ಪ್ರದರ್ಶನ ಪ್ರೇಕ್ಷಕರ ಹೃದಯ ಗೆದ್ದಿತ್ತು. ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಕಾರ್ಯಕ್ರಮದ ಜನಪ್ರಿಯತೆ ಸುಬಿಗೆ ಸಿನಿಮಾಗಳಿಂದ ಅವಕಾಶಗಳು ಹರಿದು ಬರಲು ಪ್ರಾರಂಭಿಸಿತು. ಸಿನಿಮಾಗಳಲ್ಲೂ ಕೈತುಂಬ ಪಾತ್ರ ಸಿಕ್ಕಿತು. ಅವರು 'ಹ್ಯಾಪಿ ಹಸ್ಬೆಂಡ್ಸ್', 'ಕಂಕಣ ಸಿಂಹಾಸನಂ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ಮಿಂಚಿದ್ದಾರೆ.
ತಮಿಳಿನ ಖ್ಯಾತ ಕಾಮಿಡಿ ನಟ ಮೈಲ್ ಸ್ವಾಮಿ ಹೃದಯಾಘಾತದಿಂದ ನಿಧನ
undefined
ಸಿನಿಮಾಲಾ ಸೋ ಬಳಿಕ ಮಕ್ಕಳ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಮಕ್ಕಳೊಂದಿಗಿನ ತಮಾಷೆಯ ಸಂವಹನವು ಪ್ರೇಕ್ಷಕರ ಹೃದಯಗೆದ್ದಿತ್ತು. ಬಳಿಕ ಅನೇಕ ಶೋಗಳನ್ನು ನಡೆಸಿಕೊಟ್ಟಿದ್ದರು. 2021 ರಲ್ಲಿ ಸುಬಿ ತನ್ನ ಡ್ರೆಸ್ಸಿಂಗ್ ಶೈಲಿಯ ಬಗ್ಗೆ ಕೆಟ್ಟಾದಾಗಿ ಕಾಮೆಂಟ್ ಮಾಡಿದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಸುಬಿ ಹಠಾತ್ ನಿಧನ ಅಭಿಮಾನಿಗಳು ಮತ್ತು ಕುಟುಂಬಕ್ಕೆ ಶಾಕ್ ನೀಡಿದೆ.
ಫಲಿಸಲಿಲ್ಲ ಪ್ರಾರ್ಥನೆ, 39ರ ಹರೆಯದ ತೆಲಗು ನಟ ತಾರಕರತ್ನ ಬೆಂಗಳೂರಲ್ಲಿ ನಿಧನ!
ಅಭಿಮಾನಿಗಳು, ಆಪ್ತರ ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸಿ ಟ್ವೀಟ್ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ರಿಯಾಲಿಟಿ ಶೋಗಳು ಮತ್ತು ಹಾಸ್ಯ ಕಾರ್ಯಕ್ರಮಗಳ ಮೂಲಕ ಮಲಯಾಳಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಹೇಳಿದ್ದಾರೆ.