ಬಾಲಿವುಡ್ ಸ್ಟಾರ್ ನಟಿ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ನಿಧನರಾಗಿದ್ದಾರೆ. 90 ವರ್ಷ ವಯಸ್ಸಿನ ಸ್ನೇಹಲತಾ ಶನಿವಾರ ಮುಂಬೈನಲ್ಲಿ ನಿಧನ ಹೊಂದಿರು.
ಬಾಲಿವುಡ್ ಸ್ಟಾರ್ ನಟಿ ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ನಿಧನರಾಗಿದ್ದಾರೆ. 90 ವರ್ಷ ವಯಸ್ಸಿನ ಸ್ನೇಹಲತಾ ಶನಿವಾರ (ಮಾರ್ಚ್ 11) ಮುಂಬೈನಲ್ಲಿ ನಿಧನ ಹೊಂದಿರು. ವಯೋಸಹಜ ಕಾಯಿಲೆಯಿಂದ ಸ್ನೇಹಲತಾ ಬಳಲುತ್ತಿದ್ದರು ಎನ್ನಲಾಗಿದೆ. ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಮಾಧುರಿ ದೀಕ್ಷಿತ್ ಇಡೀ ಕುಟುಂಬವಿದೆ. ತಾಯಿಯನ್ನು ಕಳೆದುಕೊಂಡ ಬಗ್ಗೆ ನಟಿ ಮಾಧುರಿ ದೀಕ್ಷಿತ್ ಮತ್ತು ಪತಿ ಶ್ರೀರಾಮ್ ನೆನೆ ಪೋಸ್ಟ್ ಶೇರ್ ಮಾಡಿದ್ದಾರೆ. 'ನಮ್ಮ ಪ್ರೀತಿಯ ತಾಯಿ ಸ್ನೇಹಲತಾ ನಿಧನ ಹೊಂದಿದರು' ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮಾಧುರಿ ದೀಕ್ಷಿತ್ ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. 1984ರಲ್ಲಿ ಮಾಧುರಿ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮೆರೆದ ಮಾಧುರಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಾಧುರಿ ನಟನೆ, ಡಾನ್ಸ್‌ಗೆ ಫಿದಾ ಆಗದ ಅಭಿಮಾನಿಗಳಿಲ್ಲ. ಸಖತ್ ಬೇಡಿಕೆಯ ನಟಿಯಾಗಿದ್ದ ಮಾಧುರಿ 1999ರಲ್ಲಿ ಡಾ ಶ್ರೀರಾಮ್ ನೆನೆ ಅವರನ್ನು ವಿವಾಹವಾದರು. ಮದುವೆ ಬಳಿಕವೂ ಮಾಧುರಿ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಹೆಚ್ಚಾಗಿ ಸಿನಿಮಾಗಳಲ್ಲಿ ನಟಿಸದಿದ್ದರೂ ಚಿತ್ರರಂಗದಿಂದ ದೂರ ಆಗಿಲ್ಲ. ಬೆಳ್ಳಿ ಪರದೆ ಜೊತೆಗೆ ಕಿರುತೆರೆಯ ಕಾರ್ಯಕ್ರಮಗಳಲ್ಲೂ ಬ್ಯುಸಿಯಾಗಿದ್ದಾರೆ. ಮಾಧುರಿ ಅವರ ಈ ಸಕಸ್ಸ್‌ನ ಹಿಂದೆ ಅವರ ತಾಯಿ ಪಾತ್ರ ಕೂಡ ದೊಡ್ಡದು. ಅನೇಕ ಬಾರಿ ತಾಯಿ ಬಗ್ಗೆ ಮಾಧುರಿ ಹೇಳಿಕೊಂಡಿದ್ದರು.
ಮದುವೆ ನಂತರದ ನೋವಿನ ದಿನಗಳ ನೆನೆದು ಕಣ್ಣೀರಾದ ನಟಿ Madhuri Dixit
ಇತ್ತೀಚಿಗಷ್ಟೆ ಮಾಧುರಿ ದೀಕ್ಷಿತ್ ಪತಿ ತನ್ನ ಅತ್ತೆಯ ಬಗ್ಗೆ ಪೋಸ್ಟ್ ಶೇರ್ ಮಾಡಿದ್ದರು. ಅವರ 90ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಭಾವುಕ ಸಾಲು ಹಂಚಿಕೊಂಡಿದ್ದರು. 'ನನ್ನ ಅತ್ತೆ 90ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮ್ಯಾಕ್ಯುಲರ್ ಡಿಜೆನರೇಶನ್ ಹೊಂದಿದ್ದಾರೆ. ಅವರು ವಿಶ್ವದ ಅತ್ಯಂತ ಪ್ರೀತಿಯ, ಅತ್ಯಂತ ಸಕಾರಾತ್ಮಕ ವ್ಯಕ್ತಿ. ಅವರ ಪ್ರತಿಭೆಯನ್ನು ನಮಗೆ ನೆನಪಿಸಲು ನಾವು ಅವಳ ವರ್ಣಚಿತ್ರಗಳನ್ನು ಮಗ್‌ಗಳ ಮೇಲೆ ಇರಿಸಿದ್ದೇವೆ.
'ಡೋಲಾ ರೆ ಡೋಲಾ' ಹಾಡಿಗೆ ಮಾಧುರಿ ದೀಕ್ಷಿತ್ - ಐಶ್ವರ್ಯಾ ರೈರಂತೆ ಕುಣಿದ ಭಾರತ - ಕೆನಡಾ ಜೋಡಿ: ನೆಟ್ಟಿಗರ ಮೆಚ್ಚುಗೆ
ಮಾಧುರಿ ದೀಕ್ಷಿತ್ ಕೂಡ ಅನೇಕ ಬಾರಿ ಸಂದರ್ಶನಗಳಲ್ಲಿ ತನ್ನ ತಾಯಿ ಬಗ್ಗೆ ಹೇಳಿಕೊಂಡಿದ್ದರು. ಸ್ಟಾರ್ ಆದ ಮೇಲೂ ತನ್ನ ವರ್ತನೆಗಳನ್ನು ಬದಲಾಯಿಸಿಕೊಳ್ಳಲು ತನ್ನ ತಾಯಿ ಬಿಟ್ಟಿಲ್ಲ ಎಂದು ಹೇಳಿದ್ದರು. 'ನಾನು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಕೋಣೆಯನ್ನು ಸರಿಯಾಗಿ ಇಟ್ಟುಕೊಂಡಿಲ್ಲ ಎಂದರೆ ನನ್ನ ತಾಯಿ ಬೈಯುತ್ತಿದ್ದರು. ಹಾಗಾಗಿ ನಾನು ಬೆಳೆದದ್ದು ಹೀಗೆ. ಮತ್ತು ನಾನು ಹಾಗೇ ಇದ್ದೀನೆ. ನಾನು ನನ್ನ ಮಕ್ಕಳನ್ನು ನೋಡುತ್ತೇನೆ ಮತ್ತು ನಾನು ನನ್ನ ಗಂಡನನ್ನು ನೋಡಿಕೊಳ್ಳುತ್ತೇನೆ. ನಾನು ನಿಜವಾಗಿಯೂ ಎಂದಿಗೂ ನನ್ನನ್ನು ಕಳೆದುಕೊಂಡಿಲ್ಲ' ಎಂದು ಹೇಳಿದ್ದರು. ಇದೀಗ ತಾಯಿ ನೆನಪು ಮಾತ್ರ.