
ಹಿಂದಿ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಕಪಿಲ್ ಶರ್ಮಾ ಶೋ ಕೂಡ ಒಂದು. ಕಾಮಿಡಿ ಶೋ ಇದಾಗಿದ್ದು ಬಾಲಿವುಡ್‌ನ ಬಹುತೇಕ ಸ್ಟಾರ್ಸ್ ಈ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳನ್ನು ರಂಜಿಸಿದ್ದಾರೆ. ಸಿನಿಮಾ ಗಣ್ಯರು ಮಾತ್ರವಲ್ಲದೇ ಕ್ರಿಕೆಟ್ ತಾರೆಯರು ಕೂಡ ಕಪಿಲ್ ಶೋನಲ್ಲಿ ಭಾಗಿಯಾಗಿದ್ದರು. ಶಾರುಖ್ ಖಾನ್, ಬಾಬಾ ರಾಮದೇಶ್, ಅನುಷ್ಕಾ ಶರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಮಿಥಾಲಿ ರಾಜ್, ರಣಬೀರ್ ಕಪೂರ್, ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಆಹ್ವಾನಿಸಲಾಗಿತ್ತು ಎನ್ನುವುದನ್ನು ಸ್ವತಃ ಕಪಿಲ್ ಶರ್ಮಾ ಅವರೇ ಬಹಿರಂಗ ಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ಶರ್ಮಾ ಅವರಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸಿದ್ದೀರಾ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಕಪಿಲ್ ಶರ್ಮಾ, ಮೋದಿ ನಮ್ಮ ಪ್ರಸ್ತಾಪವನ್ನು ತಿರಸ್ಕರಿಸಲಿಲ್ಲ ಎಂದು ಹೇಳಿದರು. ಮೋದಿ ಅವರನ್ನು ಹೋಸ್ಟ್ ಮಾಡಲು ನಮ್ಮ ತಂಡ ಪುಣ್ಯ ಮಾಡಿದೆ ಎಂದು ಹೇಳಿದರು.
Kapil Sharma: ನಕ್ಕು ನಗಿಸುವ ಹಾಸ್ಯನಟ ಕಪಿಲ್ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
'ನಾನು ಪ್ರಧಾನಿ ಮೋದಿಯವರನ್ನು ಖುದ್ದಾಗಿ ಭೇಟಿಯಾದಾಗ, 'ಸರ್ ನಮ್ಮ ಕಾರ್ಯಕ್ರಮಕ್ಕೆ ಬನ್ನಿ' ಎಂದು ಕೇಳಿದ್ದೆ. ಆದರೆ ಅವರು ಬೇಡ ಎನ್ನಲಿಲ್ಲ, 'ಸದ್ಯ ನನ್ನ ವಿರೋಧಿಗಳು ತುಂಬಾ ಕಾಮಿಡಿ ಮಾಡುತ್ತಿದ್ದಾರೆ' ಅಂತ ಹೇಳಿದ್ರು. ಆದರೆ 'ಇಲ್ಲ' ಅಂತ ಮಾತ್ರ ಹೇಳಲಿಲ್ಲ. ನಮ್ಮ ಶೋನಲ್ಲಿ ಅವರನ್ನು ಹೋಸ್ಟ್ ಮಾಡುವುದು ನಮ್ಮ ಗೌರವ' ಎಂದು ಹೇಳಿದರು. ಪ್ರಧಾನಿ ಮೋದಿ ಅವರು ಯಾವುದೇ ಶೋ ಅಥವಾ ಟಿವಿ ಕಾರ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಅವರು ಪ್ರಸಿದ್ಧ ಕಾಮಿಡಿ ಶೋನಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.