ಹಂಪಿ ವರ್ಣಿಸಿದ ಬಾಲಿವುಡ್​ ನಟ ಆದಿತ್ಯರಾಯ್, ಕನ್ನಡಿಗರು ಫುಲ್​ ಖುಷ್​

Published : Aug 14, 2023, 03:29 PM ISTUpdated : Aug 14, 2023, 04:59 PM IST
ಹಂಪಿ ವರ್ಣಿಸಿದ ಬಾಲಿವುಡ್​ ನಟ ಆದಿತ್ಯರಾಯ್, ಕನ್ನಡಿಗರು ಫುಲ್​ ಖುಷ್​

ಸಾರಾಂಶ

ಜಗತ್ಪ್ರಸಿದ್ಧಿ ಪಡೆದಿರುವ ಹಂಪಿಯ ಕುರಿತು ಬಾಲಿವುಡ್​ ಸ್ಟಾರ್​ ಆದಿತ್ಯರಾಯ್​ ಕಪೂರ್ ಹೇಳಿದ್ದೇನು? ಕನ್ನಡಿಗರು ಫುಲ್​ ಖುಷ್​  

ಕರ್ನಾಟಕದಲ್ಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೇಳುತ್ತಾ ಹೋದರೆ ಒಂದು ದಿನ ಸಾಲದು.  ರಾಜ್ಯದಲ್ಲಿ ವೈವಿಧ್ಯಮಯವಾದ ಪ್ರಾಕೃತಿಕ ಸೌಂದರ್ಯ ಹಾಗೂ ಮಾನವನಿರ್ಮಿತ ಗುಡಿ ಗೋಪುರಗಳು ಲೆಕ್ಕವಿಲ್ಲದಷ್ಟಿದ್ದು, ಅವುಗಳಿಗೆ ಅವುಗಳದ್ದೇ ಆದ ಒಂದೊಂದು ಸೊಬಗಿದೆ, ಅವುಗಳದ್ದೇ ಆದ ಇತಿಹಾಸವಿದೆ. ಅಂಥವುಗಳಲ್ಲಿ ಒಂದು ಹಂಪಿ. ತುಂಗಭದ್ರಾ (Tunga Badra) ನದಿಯ ದಂಡೆಯಲ್ಲಿ ಬೆಳೆದು ನಿಂತಿರೋ ಈ ಅದ್ಭುತ ಸ್ಥಳಕ್ಕೆ, ಯುನೆಸ್ಕೋ  ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಿದೆ.  ವಿಜಯ ನಗರ  ರಾಜಮನೆತನ, ಕಲ್ಲಿನಲ್ಲಿ ಅರಳಿ ನಿಂತ  ದೇವಾಲಯಗಳು, ಕಲಾ ಕುಸುರಿಯಿಂದಲೇ ಕಣ್ಮನ ಸೆಳೆಯುವ  ಗೋಪುರಗಳು.. ಇಲ್ಲಿಯ ಸೊಬಗನ್ನು ಬಣ್ಣಿಸಲು ಸಾಧ್ಯವಿಲ್ಲ.  ಆ ಕಾಲದ ವಾಸ್ತುಶಿಲ್ಪಿಗಳು  ಈ ದೈತ್ಯಾಕಾರದ ಕಲ್ಲುಗಳನ್ನು  ಕತ್ತರಿಸಿ ಅವುಗಳಿಗೆ ನಾನಾ ರೂಪ ನೀಡಿ, ಅವುಗಳಿಗೆ ಇಲ್ಲಿ ಜೀವ ತುಂಬಿದ್ದಾರೆ.   ಹೀಗೆ ಕೆತ್ತನೆ ಸಂದರ್ಭದಲ್ಲೂ ಒಂದು ಕುತೂಹಲಕಾರಿ ತಂತ್ರವನ್ನು ಅನುಸರಿಸಲಾಗಿದೆ.  ವಿಜಯ ವಿಠ್ಠಲ ದೇಗುಲದಲ್ಲಿರುವ 56 ಸಂಗೀತ  ಸ್ತಂಭಗಳಂತೂ ಮೂಕವಿಸ್ಮಿತವಾಗಿಸುತ್ತದೆ. ಈ ಸ್ತಂಭಗಳನ್ನು   ಸೂಕ್ಷ್ಮವಾಗಿ ತಟ್ಟಿದಾಗ ಬರುವ ಸುಮಧುರವಾಗಿ ಸರಿಗಮಪ.. ನಾದದ ಕುರಿತು ಇಂದಿಗೂ ಹಲವರು ತಲೆಕೆಡಿಸಿಕೊಂಡಿರೋದಿದೆ. 

ಹಂಪಿಯ (Hampi) ಕುರಿತು ಇಷ್ಟೆಲ್ಲಾ  ಮಾತನಾಡಲು ಕಾರಣ, ಇದು ಎಂದಿಗೋ ವಿಶ್ವ ಖ್ಯಾತಿಯನ್ನು ಗಳಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಿಧಾನವಾಗಿ ಹಂಪಿ ಎಲ್ಲರ ಹೃದಯವನ್ನೂ ಆವರಿಸುತ್ತಿದೆ ಎನ್ನುವುದಕ್ಕೆ ಬಾಲಿವುಡ್​ ನಟ ಆದಿತ್ಯರಾಯ್​ ಕಪೂರ್​ ಹೇಳಿರುವ ಮಾತೇ ಸಾಕ್ಷಿಯಾಗಿದೆ. ಸಂದರ್ಶನವೊಂದರ ವೇಳೆ ಸಂದರ್ಶಕಿ ಭಾರತದಲ್ಲಿ ನಿಮ್ಮ ಫೆವರೆಟ್​ ಸ್ಥಳ ಯಾವುದು ಎಂದು ಕೇಳಿದರು. ಎಲ್ಲರೂ ಅಲ್ಲಿಗೆ ಹೋಗಲೇಬೇಕು ಎಂದುಕೊಳ್ಳುವ ಸ್ಥಳದ ಆಯ್ಕೆಯ ಬಗ್ಗೆ ಕೇಳಿದಾಗ ನಟ ಆದಿತ್ಯರಾಯ್​ ಕಪೂರ್​ ಅವರು ಹಂಪಿಯ ಬಗ್ಗೆ ವರ್ಣಿಸಿಸಿದ್ದಾರೆ. ಹಂಪಿಯು ಸ್ಟನ್ನಿಂಗ್​ ಪ್ಲೇಸ್ ಎಂದಿದ್ದಾರೆ. 

ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​

ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. ನಮ್ಮ ನೆಚ್ಚಿನ ಬಾಲಿವುಡ್​ ನಟನ (Bollywood star) ಬಾಯಿಯಿಂದ ಹಂಪಿಯ ಹೆಸರು ಹೇಳಿ ಸಿನಿ ಪ್ರಿಯರು ಅದರಲ್ಲಿಯೂ ಕನ್ನಡಿಗರು ಪುಳಕಿತರಾಗಿದ್ದಾರೆ. ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ. ನಟ ಹಂಪಿಯ ಹೆಸರು ಹೇಳುತ್ತಿದ್ದಂತೆಯೇ, ಜನಿಸು ಬಾ ಮನುಜನೇ, ಕನ್ನಡ ಮಣ್ಣಲಿ, ಸ್ವರ್ಗವಾ ಕಾಣುವೆ ನನ್ನ ಈ ಮಣ್ಣಲಿ ಹಾಡಿನ ಬ್ಯಾಕ್​ಗ್ರೌಂಡ್​ನಲ್ಲಿ ಹಂಪಿಯ ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದ್ದು, ಕನ್ನಡ ನಾಡಿನ ಬಗ್ಗೆ ಕನ್ನಡಾಭಿಮಾನಿಗಳು ಹೆಮ್ಮೆಯಿಂದ ಕಮೆಂಟ್​ ಮಾಡುತ್ತಿದ್ದಾರೆ. ಈ ಹಾಡನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ ಎಂದಿದ್ದಾರೆ.

ಇನ್ನು ಬಾಲಿವುಡ್‌ ನಟ ಆದಿತ್ಯ ರಾಯ್ ಕಪೂರ್ (Aditya Roy Kapur) ಅವರ ಬಗ್ಗೆ ಹೇಳುವುದಾದರೆ ಸದ್ಯ ಅವರು ಸದ್ಯ  ಶೋಭಿತಾ ಧೂಲಿಪಾಲ ನಟಿಸಿರುವ ದಿ ನೈಟ್ ಮ್ಯಾನೇಜರ್ ವೆಬ್ ಸೀರಿಸ್​ನ ಎರಡನೇ ಭಾಗದಿಂದಾಗಿ ಸಕತ್​ ಸುದ್ದಿಯಲ್ಲಿದ್ದಾರೆ. ಆದರೆ ಆದಿತ್ಯ ಅವರು,  ತಮ್ಮ ಲವ್​ ಸ್ಟೋರಿಗಳಿಂದ ಹೆಚ್ಚು  ಸದ್ದು ಮಾಡುತ್ತಿದ್ದಾರೆ. ಈಚೆಗೆ  ಅನನ್ಯಾ ಪಾಂಡೆ  (Ananya Pandey) ಜೊತೆಗಿನ  ಫೋಟೋಗಳು ವೈರಲ್ ಆಗಿದ್ದವು.  ಅನನ್ಯಾ ಪಾಂಡೆ ಜೊತೆ ಆದಿತ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು  ದೃಢಪಟ್ಟಿತ್ತು. ಆದರೆ ಇದಕ್ಕೂ  ಅವರು ಡೇಟ್ ಮಾಡಿದ ಮಹಿಳೆಯರ ದೊಡ್ಡ ಪಟ್ಟಿಯೇ ಇರುವುದಾಗಿ ಸಕತ್​ ಸುದ್ದಿಯಾಗಿತ್ತು.  ಶ್ರದ್ಧಾ ಕಪೂರ್,  ಸೂಪರ್ ಮಾಡೆಲ್ ದಿವಾ ಧವನ್‌, ಅಮೆರಿಕದ ಪ್ರಸಿದ್ಧ ಮೇಕಪ್ ಕಲಾವಿದೆ ಮರಿಯಾನ್ನಾ ಮುಕುಚ್ಯಾನ್‌ ಜೊತೆಗೂ ಆದಿತ್ಯ ಹೆಸರು ಲಿಂಕ್ ಮಾಡಲಾಗಿದೆ.   ಆದಿತ್ಯ ರಾಯ್ ಕಪೂರ್ ಹೇಮಾ ಮಾಲಿನಿ ಅವರ ಕಿರಿಯ ಮಗಳು ಅಹಾನಾ ಡಿಯೋಲ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ. ಜತೆಗೆ, ಸೋನಾಕ್ಷಿ ಸಿನ್ಹಾ , ನಟಿ ನಿಧಿ ಅಗರ್ವಾಲ್ ಜೊತೆಗೂ ಹೆಸರು ಥಳಕು ಹಾಕಿಕೊಂಡಿತ್ತು.  ಪ್ರಸ್ತುತ ಆದಿತ್ಯ ಕಪೂರ್ ತಮಗಿಂದ 13 ವರ್ಷ ಕಿರಿಯ ನಟಿ ಅನನ್ಯಾ ಪಾಂಡೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್‌ಗಳು ಬಂದಿದ್ದು,  ಅವರಿಬ್ಬರೂ ಒಟ್ಟಿಗೆ ವಿದೇಶದಲ್ಲಿ ಕಾಣಿಸಿಕೊಂಡಿರುವುದಕ್ಕೆ ಅವರ ಹೆಸರು ಸದ್ಯ ಚಾಲ್ತಿಯಲ್ಲಿದೆ. ನಟನ ವೈಯಕ್ತಿಯ ವಿಷಯ ಏನೇ ಇದ್ದರೂ,  ಈಗ ಹಂಪಿಯ ಬಗ್ಗೆ ನಟ ಹೇಳಿರುವ ಕಾರಣ, ಕನ್ನಡಿಗರು ಫುಲ್​ ಖುಷ್​ ಆಗಿದ್ದಾರೆ.      

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!