ಮದ್ವೆಯ ಮಾತನಾಡುತ್ತಲೇ ಸಮಂತಾ ನನ್ನ ಕ್ರಷ್​ ಎಂದ ವಿಜಯ ದೇವರಕೊಂಡ; ರಶ್ಮಿಕಾ ಶಾಕ್​!

By Suvarna News  |  First Published Aug 13, 2023, 5:31 PM IST

ತಮ್ಮ ಮದ್ವೆಯ ಕುರಿತು ಕೆಲ ದಿನಗಳ ಹಿಂದೆ ಮಾತನಾಡಿದ್ದ ನಟ ವಿಜಯ್​ ದೇವರಕೊಂಡ, ಈಗ  ಸಮಂತಾ ರುತ್​ ಪ್ರಭು ತಮ್ಮ  ಕ್ರಷ್​ ಎಂದಿದ್ದಾರೆ. ರಶ್ಮಿಕಾ ಫ್ಯಾನ್ಸ್​ಗೆ ಇದು ಶಾಕ್​ ಕೊಟ್ಟಿದೆ.
 


ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ ಎನಿಸಿರುವ ವಿಜಯ್​ ದೇವರಕೊಂಡ (Vijay Deverakonda) ಅವರು ಈಗ‘ಖುಷಿ’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.  ಸೆಪ್ಟೆಂಬರ್​ 1ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಮೊದಲ ಹಾಡು ಕಳೆದ ಮೇ 9ರಂದು ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿತ್ತು. ಹುಟ್ಟುಹಬ್ಬಕ್ಕೆ ಗಿಫ್ಟ್​ ಆಗಿ ನೀಡಲಾಗಿತ್ತು. ಅದಾದ ಬಳಿಕ ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 'ಲೈಗರ್‌' ಸಿನಿಮಾ ಸೋಲಿನಿಂದ ನಟ ವಿಜಯ್ ದೇವರಕೊಂಡ ಇನ್ನು ಹೊರಬಂದಿಲ್ಲ. ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಖುಷಿ (Khushi) ಹಾಡುಗಳನ್ನು ರಿಲೀಸ್​ ಮಾಡಲಾಗುತ್ತಿದೆ. ಈ ಸಮಯದಲ್ಲಿ ವಿಜಯ್ ದೇವರಕೊಂಡ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಲೈಗರ್ ಸಿನಿಮಾ ಸೋಲಿನ ಬಳಿಕ ಸಮಂತಾ ರುತ್​ ಪ್ರಭು ಜೊತೆ ಖುಷಿ ಸಿನಿಮಾದಲ್ಲಿ ಬ್ಯುಸಿ ಆಗಿರುವ ನಟ ವಿಜಯ್ ದೇವರಕೊಂಡ  ನಟಿ ರಶ್ಮಿಕಾ ಮಂದಣ್ಣ ಜೊತೆ    ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದರೂ, ಈ ಜೋಡಿ ಮಾತ್ರ ತುಟಿಕ್​ ಪಿಟಿಕ್​ ಅನ್ನಲಿಲ್ಲ. 

ವಿಜಯ್ ಹಾಗೂ ಸಮಂತಾ ಅವರ ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗುತ್ತಿವೆ. ಸಮಂತಾ ಹಾಗೂ ವಿಜಯ್ ಅವರ ಸಿನಿಮಾದ ರೊಮ್ಯಾಂಟಿಕ್ ಹಾಡುಗಳು ವೈರಲ್ ಆಗಿವೆ. ಸಿನಿಮಾದ ಟ್ರೈಲರ್​​ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ,  ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್​ ಪ್ರಭು ತಮ್ಮ ಕ್ರಷ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಖುಷಿ ಚಿತ್ರಕ್ಕೆ ಸಂಬಂಧಿಸಿದಂತೆ ಇದಾಗಲೇ ಈ ಜೋಡಿಯ ಹಲವಾರು ಫೋಟೋಗಳು ವೈರಲ್​ ಆಗಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಇದೀಗ ವಿಜಯ ದೇವರಕೊಂಡ ಅವರು ಸಮಂತಾ ಮೇಲೆ ತಮಗೆ ಕ್ರಷ್​ ಇದೆ ಎನ್ನುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಹಾಗೂ ಅವರ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ. ಸಮಂತಾ ನಿಮ್ಮ ಕ್ರಷ್​ ಆದರೆ ರಶ್ಮಿಕಾ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ. 

Tap to resize

Latest Videos

ವಿಜಯ್​ ದೇವರಕೊಂಡ ಮದ್ವೆಯಾದ್ಮೇಲೆ ಪ್ರೀತಿ, ಪ್ರೇಮ, ರೊಮ್ಯಾನ್ಸ್​ ಹೀಗಿರತ್ತಂತೆ!

ಈಚೆಗಷ್ಟೇ ತಮ್ಮ ದಾಂಪತ್ಯ ಜೀವನ ಹೇಗಿರಬೇಕು ಎಂದು ಬಣ್ಣಿಸಿದ್ದರು ವಿಜಯ್​. ಆ ಒಂದೊಮ್ಮೆ ನಾನು ಮದುವೆಯಾದರೆ ನನ್ನ ವೈವಾಹಿಕ ಜೀವನ ಹೀಗಿರಬೇಕೆಂದು ಉದಾಹರಣೆಯೊಂದನ್ನು ಸಹ ನೀಡಿದ್ದರು. ‘ಆರಾಧ್ಯ’ ಎಂದು ಪ್ರಾರಂಭವಾಗುವ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ವಿಜಯ್​ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಹೊಸದಾಗಿ ಮದುವೆಯಾದ ನವಜೋಡಿಯ ಪ್ರೀತಿ, ಪ್ರೇಮ, ಸರಸ ಸಲ್ಲಾಪವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರು ಲಿರಿಕ್ಸ್ ಬರೆದಿದ್ದಾರೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಖುಷಿ' ಸಿನಿಮಾ ರಿಲೀಸ್ ಆಗ್ತಿದೆ. ಕನ್ನಡದಲ್ಲಿ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಕುರಿತು ಮಾತನಾಡುವ ಸಂದರ್ಭದಲ್ಲಿ ವಿಜಯ್​ ಅವರು ತಮ್ಮ ಮದುವೆಯ ಬಗ್ಗೆಯೂ ವಿವರಿಸಿದ್ದರು. ಈ ಹಾಡಿನಲ್ಲಿ ಹೊಸದಾಗಿ ಮದುವೆಯಾಗಿರುವ ಜೋಡಿಯ ಮೊದಲ ಒಂದು ವರ್ಷದ ಸಮಯದಲ್ಲಿ ನಡೆಯುವ ಸರಸ, ತುಂಟಾಟ, ರೊಮ್ಯಾನ್ಸ್ (Romance) ಅನ್ನು   ತೋರಿಸಲಾಗಿದೆ. ಇದನ್ನೇ ಉದಾಹರಣೆಯಾಗಿ ನೀಡಿರುವ ವಿಜಯ್​, ಒಂದೊಮ್ಮೆ ನಾನು ಮದುವೆ ಆದರೆ ನನ್ನ ವೈವಾಹಿಕ ಜೀವನ ಹೀಗೆಯೇ ಇರಬೇಕು ಅಂದುಕೊಳ್ಳುತ್ತೇನೆ ಎಂದಿದ್ದಾರೆ. ನನಗೆ ಮದುವೆ ಆಗಿಲ್ಲ, ನನಗೆ ಮದುವೆ ಆಗದೇ ಇರಬಹುದು ಆದರೆ ಆ ಹಾಡಿನಲ್ಲಿ ತೋರಿಸಲಾಗಿರುವ ಹಲವು ದೃಶ್ಯಗಳು ನನ್ನ ನಿಜ ಜೀವನದಲ್ಲಿ ನಡೆದಿರುವಂಥಹದ್ದು. ನಾನು ಅನುಭವಿಸಿರುವ ದೃಶ್ಯಗಳನ್ನೇ ಸೇರಿಸಿ ಆ ಹಾಡು ಮಾಡಲಾಗಿದೆ ಎಂದಿದ್ದಾರೆ. ಈ ಎನ್ನುವ ಮೂಲಕ ರಿಯಲ್ ಲವ್ ಸ್ಟೋರಿ ಬಗ್ಗೆ ಸುಳಿವು ನೀಡಿದ್ದರು.


 
ವಿಜಯ್ ದೇವರಕೊಂಡ ಮಾತು ಕೇಳಿದ ಅಭಿಮಾನಿಗಳು ನಟ ಶೀಘ್ರದಲ್ಲೇ ಹಸೆಮಣೆ ಏರುವುದು ಪಕ್ಕಾ ಅಂತಿದ್ದರು. ಆದರೆ ಹುಡುಗಿ ಮಾತ್ರ ರಶ್ಮಿಕಾ ಮಂದಣ್ಣ (Rashmika Mandanna) ಎನ್ನಲಾಗಿತ್ತು. ಆದರೆ ಇದೀಗ ಸಮಂತಾ ಹೆಸರು ಹೇಳಿರುವ ಕಾರಣ, ಫ್ಯಾನ್ಸ್ ಫುಲ್​ ಕನ್​ಫ್ಯೂಸ್​ ಆಗಿದ್ದಾರೆ. 
ಫ್ಯಾನ್‌ಗೆ ಹೆದರಿ ಬಾಂಬ್​ ಬಿದ್ದವರಂತೆ ಸ್ಟೇಜಿಂದ ಎದ್ದು ಬಿದ್ನೋ ಓಡಿದ ವಿಜಯ್​ ದೇವರಕೊಂಡ!

click me!