
ತ್ರಿಷಾ (Trisha) ಮತ್ತು ದಳಪತಿ ವಿಜಯ್ ಅವರ 'ಲಿಯೋ' ಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ. ತ್ರಿಷಾ ಮತ್ತು ವಿಜಯ್ ಹಲವು ವರ್ಷಗಳ ಹಿಂದೆ ಗಿಲ್ಲಿ ಸೇರಿದಂತೆ ಹಲವಾರು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದರು. ಅವರು ಕೊನೆಯದಾಗಿ 2008 ರಲ್ಲಿ ಕುರುವಿಯಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರು ಮತ್ತು ಈಗ, ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ, ಅವರು ಲೋಕೇಶ್ ಕನಕರಾಜ್ ಅವರ ಲಿಯೋಗಾಗಿ ಮತ್ತೆ ಒಟ್ಟಿಗೆ ಸೇರಿದ್ದಾರೆ. ಈ ಜೋಡಿ, 'ಲಿಯೋ' ಗಾಗಿ ತಮ್ಮ ಜೋಡಿಯ ಮೂಲಕ ಫೇಮಸ್ ಆಗಿದ್ದು, ಇದೀಗ ಇನ್ನೊಂದು ಸುದ್ದಿ ಹೊರಬಂದಿದೆ. ಅದೇನೆಂದರೆ, ಇವರಿಬ್ಬರೂ ನಾರ್ವೆಯಲ್ಲಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಲಿಯೋ ಚಿತ್ರದ ಚಿತ್ರೀಕರಣ ಮುಗಿಸಿದ ವಿಜಯ್ ಸ್ವಲ್ಪ ವಿರಾಮಕ್ಕೆಂದು ನಾರ್ವೆಗೆ ಹೋಗಿರುವುದು ತಿಳಿದಿತ್ತು. ಆದರೆ ಈಗ ಅವರು ನಾರ್ವೆಯಲ್ಲಿ ತ್ರಿಷಾ ಜೊತೆ ಕಾಣಿಸಿಕೊಂಡು ಹಲವರ ಬಾಯಿಗೆ ಆಹಾರವಾಗಿದ್ದಾರೆ.
ನಾರ್ವೆಯಲ್ಲಿನ ಶಾಪಿಂಗ್ ಸೆಂಟರ್ (Shoping Centre) ಒಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ತ್ರಿಷಾ ಕಳೆದ ಒಂದು ವಾರದಿಂದ ಯುರೋಪಿಯನ್ ದೇಶಗಳಾದ್ಯಂತ ಪ್ರವಾಸ ಮಾಡುತ್ತಿದ್ದು, ಇತ್ತೀಚೆಗೆ ತನ್ನ 'ಲಿಯೋ' ಸಹನಟನ ಜೊತೆ ಈ ರೀತಿ ಕಾಣಿಸಿಕೊಂಡಿರುವುದುದ ಹಲವು ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ. 5 ವರ್ಷಗಳ ನಂತರ ಸಿನಿಮಾದಲ್ಲಿ ಒಂದಾಗುತ್ತಿರುವ ವಿಜಯ್ ಮತ್ತು ತ್ರಿಷಾ ಪ್ರೀತಿಯಲ್ಲಿ ಬಿದ್ದಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ನಾರ್ವೆಯಲ್ಲಿ ಈ ಜೋಡಿ ಜೊತೆಯಾಗಿ ಓಡಾಡ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಟ ವಿಜಯ್ ಪತ್ನಿಯಿಂದ ಡಿವೋರ್ಸ್ ಪಡೆಯಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದ ಬೆನ್ನಲ್ಲೇ ಈ ವಿಷಯ ಹೊರಬಂದಿದೆ. ವಿಜಯ್ ಮತ್ತು ತ್ರಿಷಾ ಡೇಟಿಂಗ್ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದ್ದು, ಡಿವೋರ್ಸ್ ಪಕ್ಕಾ ಎನ್ನುವ ಮಾತುಗಳು ಸಹ ಕೇಳಿಬಂದಿದೆ.
ರಾತ್ರೋರಾತ್ರಿ ದಳಪತಿ ವಿಜಯ್ ರಹಸ್ಯ ಮೀಟಿಂಗ್: ರಾಜಕೀಯ ಎಂಟ್ರಿ ಫಿಕ್ಸ್? ನಟನೆಗೆ ಬ್ರೇಕ್?
ಈ ಹಿಂದೆ, ನಟಿ ತ್ರಿಷಾ ಅವರು ಕ್ರೂಸ್‌ನಲ್ಲಿ ವಿಹಾರ ಮಾಡುತ್ತಿರುವ ಪ್ರವಾಸದ ಚಿತ್ರವನ್ನು ಹಂಚಿಕೊಂಡು ಎಲ್ಲರ ಕಣ್ಣು ಅರಳಿಸಿದ್ದರು. ಅದಕ್ಕೆ ಕಾರಣ, ಹೀಗೆ ಪೋಸ್ ನೀಡುವಾಗ ತ್ರಿಷಾ ಯಾರದ್ದೋ ಕೈಗಳನ್ನು ಹಿಡಿದಿರುವುದನ್ನು ಫೋಟೋದಲ್ಲಿ ನೋಡಬಹುದಾಗಿತ್ತು. "ಸಮುದ್ರದ ಪರಿಮಳ ಮತ್ತು ಆಕಾಶದ ಸೊಗಸನ್ನು ಅನುಭವಿಸುತ್ತಿದ್ದೇನೆ, ಆತ್ಮವು ಚೈತನ್ಯದಿಂದ ಹಾರುತ್ತಿದೆ... ಓ ಬೇಸಿಗೆ! ನೀನು ಅದ್ಭುತ ಎಂದು ನಟಿ ಬರೆದುಕೊಂಡಿದ್ದರು. ಬಹುಶಃ ಆ ಕೈ ಹಿಡಿದಿರುವ ವ್ಯಕ್ತಿ ವಿಜಯ್ ಅವರೇ ಇರಬಹುದು ಎನ್ನಲಾಗುತ್ತಿದೆ. ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್ 2' ನಲ್ಲಿ ಕೊನೆಯದಾಗಿ ಕಾಣಿಸಿಕೊಂಡ ತ್ರಿಶಾ, ದಳಪತಿ ವಿಜಯ್ ಜೊತೆ ಲಿಯೋ ಕೂಡ ಪೈಪ್‌ಲೈನ್‌ನಲ್ಲಿ ಲೈನ್‌ನಲ್ಲಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್ (Mansur Ali Khan) ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಅಕ್ಟೋಬರ್ 18 ರಂದು ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 'ಲಿಯೋ' ಸಿನಿಮಾ ಬಿಡುಗಡೆಯಾಗಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅದೇ ಇನ್ನೊಂದೆಡೆ, ದಳಪತಿ ವಿಜಯ್ (Thalapathy Vijay) ಅವರ ಸಂಸಾರದಲ್ಲಿ ಕಲಹ ಉಂಟಾಗಿದೆ ಎಂದು ಕೆಲ ತಿಂಗಳ ಹಿಂದೆ ಕೇಳಿಬಂದಿತ್ತು. ಪತ್ನಿ ಸಂಗೀತಾ ಜೊತೆಗಿನ 22 ವರ್ಷಗಳ ದಾಂಪತ್ಯ ಜೀವನಕ್ಕೆ ದಳಪತಿ ವಿಜಯ್ ಅಂತ್ಯ ಹಾಡಲಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿತ್ತು. ಆದರೆ . ಈ ಬಗ್ಗೆ ವಿಜಯ್ ಮತ್ತು ಸಂಗೀತಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕೌತುಕ ನಿರ್ಮಾಣ ಆಗಿದೆ.
ಹದ್ದು-ಕಾಗೆ ಕಥೆ ಹೇಳಿ ದಳಪತಿ ಫ್ಯಾನ್ಸ್ ಪಿತ್ತ ನೆತ್ತಿಗೇರಿಸಿದ್ರಾ ರಜನೀಕಾತ್? ಶುರುವಾಯ್ತು ಸ್ಟಾರ್ ವಾರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.