KK ಘಟನೆ ನಂತರ ಹಾರ್ಟ್‌ ಚೆಕ್‌ ಮಾಡಿಸಿಕೊಳ್ಳಲು ನನ್ನ ಮಕ್ಕಳ ಒತ್ತಾಯಿಸುತ್ತಿದ್ದಾರೆ: ಗಾಯಕ ಶಾನ್

Published : Jun 11, 2022, 12:48 PM IST
KK ಘಟನೆ ನಂತರ ಹಾರ್ಟ್‌ ಚೆಕ್‌ ಮಾಡಿಸಿಕೊಳ್ಳಲು ನನ್ನ ಮಕ್ಕಳ ಒತ್ತಾಯಿಸುತ್ತಿದ್ದಾರೆ: ಗಾಯಕ ಶಾನ್

ಸಾರಾಂಶ

ಗೆಳೆಯನನ್ನು ಕಳೆದುಕೊಂಡ ನಂತರ ಶಾನ್‌ಗೆ ಕುಟುಂಬದಿಂದ ಹೃದಯ ತಪಾಸಣೆ ಮಾಡಿಸಿಕೊಳ್ಳಲು ಒತ್ತಾಯ. 

ಬಹುಭಾಷ ಗಾಯಕ ಕೃಷ್ಣಕುಮಾರ್ ಕುನ್ನತ್ ಹೃದಯಘಾತದಿಂದ ಅಗಲಿದ ನಂತರ ಸಂಗೀತ ಲೋಕದಲ್ಲಿ ಮೌನ ಆವರಿಸಿಕೊಂಡಿದೆ. ಕೊಲ್ಕತಾದ ಕಾಲೇಜ್‌ವೊಂದರಲ್ಲಿ ಸ್ಟೇಜ್ ಪರ್ಫಾರ್ಮೆನ್ಸ್‌ ನೀಡುವಾಗ ಸುಸ್ತು ಎನ್ನುತ್ತಿದ್ದ ಗಾಯಕ ಇದ್ದಕ್ಕಿದ್ದಂತೆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ ಆಸ್ಪತ್ರೆ ಕಡೆ ಓಡಿ ಹೋದರು. ಒಂದು ಗಂಟೆ ಅವಧಿಯಲ್ಲಿ ಕೆಕೆ ಇನ್ನಿಲ್ಲ ಎನ್ನುವ ವಿಚಾರ ಹರಡಿತ್ತು. 

ಅಭಿಮಾನಿಗಳು ಮತ್ತು ಮಾಧ್ಯಮಗಳ ಒತ್ತಾಯದಿಂದ ಅಗಲಿರುವ ವಿಚಾರವನ್ನು ಬೇಗ ಬಹಿರಂಗ ಪಡಿಸಿದ್ದರು. ಕೆಕೆಗೆ ಚಿಕಿತ್ಸೆ ನೀಡಿರುವ ವೈದ್ಯರು ಹೃದಯಘಾತವಾಗಿ ಎಂದು ಅನೌನ್ಸ್‌ ಮಾಡಿದ್ದರು. ರಾಜಕಾರಣಿಗಳು, ಗಾಯಕರು, ನಟ-ನಟಿಯರು ಮತ್ತು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಈಗಲೂ ಕೆಕೆ ಅವರಿಗೆ ಪೂಜೆ ಅಲ್ಲಿಸಿದ ನಂತರವೇ ಸಂಗೀತ ಕಾರ್ಯಕ್ರಮಗಳು ಶುರುವಾಗುವುದು. ಕೆಕೆ ಅವರ ಆಪ್ತ ಸ್ನೇಹಿತ ಶಾನ್‌ ಮಾಧ್ಯಮಗಳಿಂದ ದೂರ ಉಳಿದುಕೊಂಡಿದ್ದಾರೆ. ಆದರೆ ಇದಕ್ಕೊಂದು ಕಾರಣ ಇದೆ ಎಂದು ಹೇಳಿಕೊಂಡಿದ್ದಾರೆ.

ಕೆಕೆ ಘಟನೆ ನಡೆದ ನಂತರ ಶಾನ್‌ ಕುಟುಂಬ ಹೃದಯ ತಪಾಸಣೆ ಮಾಡಿಸಿಕೊಳ್ಳಲು ಒತ್ತಾಯ ಮಾಡುತ್ತಿದ್ದಾರಂತೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ನಟ ಮಕ್ಕಳ ಒತ್ತಾಯಕ್ಕೆ ಮುಂಬೈಗೆ ಪ್ರಯಾಣ ಮಾಡಿರುವುದಾಗಿ ತಿಳಿಸಿದ್ದಾರೆ. ಶಾನ್ ಹೇಳಿರುವ ಪ್ರಕಾರ 40 ವಯಸ್ಸಿನ ನಂತರ ಪ್ರತಿಯೊಬ್ಬರೂ ವರ್ಷಕ್ಕೆ ಎರಡು ಸಲ ಹೃದಯ ತಪಾಸಣೆ ಮಾಡಿಸಬೇಕು. ಕೋಟಿಯಲ್ಲಿ ಹಣ ಖರ್ಚು ಮಾಡಿ, ನೂರಾರು ಜನರಿಂದ ಅನುಮತಿ ಪಡೆದು ಕಾರ್ಯಕ್ರಮ ಮಾಡುವಾಗ ಆಂಬುಲೆನ್ಸ್‌ ಇರಲೇಬೇಕು. ಏನೇ ಎಮರ್ಜೆನ್ಸಿ ಬಂದರೂ ವೈದ್ಯರು ಸಹಾಯಕ್ಕೆ ಇರಬೇಕು..ಈ ರೀತಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದಿದ್ದಾರೆ. 

KK Last Flim Song ಶೆರ್ದಿಲ್ ಚಿತ್ರಕ್ಕಾಗಿ ಕೆಕೆ ಹಾಡಿದ ಕೊನೆಯ ಸಾಂಗ್ ದೂಪ್ ಪಾನಿ ಬಿಡುಗಡೆ!

ಕಾರ್ಯಕ್ರಮ ಆಯೋಜಕರು ಸಂಭಾವನೆ ಎಷ್ಟು ಕೊಡುತ್ತಾರೆ ಎನ್ನುವುದನ್ನು ಲೆಕ್ಕಿಸದೆ ಕೆಕೆ ಒಪ್ಪಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ತಿಂಗಳಿಗೆ 8 ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಹಣ ಮತ್ತು ಆರೋಗ್ಯದ ಬಗ್ಗೆ ಕೆಕೆ ಕೇರ್ ಮಾಡುತ್ತಿರಲಿಲ್ಲ ಹಾಡುವುದಷ್ಟೆ ಅವರ ಗಮನ, ಇನ್ನು ಮುಂದೆ ಆದರು ಜನರು ಆರೋಗ್ಯದ ಬಗ್ಗೆ ಚಿಂತಿಸಬೇಕು ಎಂದು ಹೇಳಿದ್ದಾರೆ.

ಜಾವೇದ್ ಅಲಿ:

'ನನಗೆ ಬೇರೆ ಯಾವ ಕೆಲಸಗಳ ಮೇಲೆ ಗಮನ ಕೊಡಲು ಆಗುತ್ತಿಲ್ಲ.  ಪ್ರತಿ ಕ್ಷಣವೂ ಕೆಕೆ ನೆನಪಾಗುತ್ತಿದ್ದಾನೆ. ಕೆಕೆ ಮರೆಯಲಾಗುತ್ತಿಲ್ಲ. ಸಂಗೀತ ಲೋಕಕ್ಕೆ ದುಖಃಕರವಾದ ದಿನ ಇದಾಗಿರುತ್ತದೆ. ಅಸಲಿ ಧ್ವನಿಯನ್ನು ಚಿತ್ರರಂಗ ಕಳೆದುಕೊಂಡಿದೆ, ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದೆ. ಒಂದು ದಿನವೂ ಒಬ್ಬರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿಲ್ಲ' ಎಂದು ಜಾವೇದ್ ಅಲಿ ಇಟೈಮ್ಸ್‌ ಜೊತೆ ಮಾತನಾಡಿದ್ದಾರೆ.

KK ಪೋಸ್ಟ್ ಮಾರ್ಟಂ ವರದಿ: ಸಿಪಿಆರ್ ನೀಡಿದ್ದರೆ ಅವರ ಪ್ರಾಣ ಉಳಿಯುತ್ತಿತ್ತು!

'ಕೆಕೆ ಪತ್ನಿ ಮತ್ತು ಮಕ್ಕಳನ್ನು ನಾನು ಅಂತ್ಯಸಂಸ್ಕಾರದ ದಿನ ಮುಖ ಕೊಟ್ಟ ಮಾತನಾಡಲು ಶಕ್ತಿ ಇರಲಿಲ್ಲ.  ಅವರನ್ನು ನೋಡಿ ನನಗೆ ಕತ್ತು ಎತ್ತಲು ಶಕ್ತಿ ಕೂಡ ಇರಲಿಲ್ಲ. ಅವರ ಜೊತೆ ಮಾತನಾಡಬೇಕು ಎಂದು ಸಣ್ಣ ಪ್ರಯತ್ನ ಕೂಡ ಮಾಡಲಿಲ್ಲ. ಸ್ವಲ್ಪ ದಿನಗಳ ನಂತರ ನಾನು ಕೆಕೆ ಕುಟುಂಬಕ್ಕೆ ಭೇಟಿ ಕೊಡುವೆ' ಎಂದು ಜಾವೇದ್ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!