
ಖ್ಯಾತ ಗಾಯಕ(Singer ) ಜಸ್ಟಿನ್ ಬೀಬರ್(Justin Beiber) ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 28 ವರ್ಷದ ಗಾಯಕ ಜಸ್ಟಿನ್ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಜಸ್ಟಿನ್ ಸಂಗೀತ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ಜಸ್ಟಿನ್ ಹಾಡುವುದನ್ನು ಕೇಳಲು ಜನ ಮುಗಿಬೀಳುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ ಅವರನ್ನು 240 ಮಿಲಿಯನ್‌ಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ಆರಾಧಿಸುತ್ತಾರೆ. ಆದರೆ ಜಸ್ಟಿನ್ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂಗೀತ ಕಾರ್ಯಕ್ರಮ ನೀಡಲು ಸಾಧ್ಯವಾಗದೇ ಬಳಲುತ್ತಿದ್ದಾರೆ. ಹೌದು, ಜಸ್ಟಿನ್ ಬೀಬರ್ ಮುಖಕ್ಕೆ ಪಾರ್ಶ್ವವಾಯು(Face Is Paralysed) ಆಗಿದೆ. ಈ ವಿಚಾರವನ್ನು ಖುದ್ದು ಜಸ್ಟಿನ್ ಬೀಬರ್ ಅವರೇ ಖಚಿತ ಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಗಂಭೀರ ಸಮಸ್ಯೆ ಇದು ಎಂದಿದ್ದಾರೆ. ತಮ್ಮ ಪರಿಸ್ಥಿತಿ ಹೇಗಿದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ನೆಚ್ಚಿನ ಗಾಯಕನಿಗೆ ಈ ರೀತಿ ಆಗಿರುವುದು ಕೇಳಿ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಜಸ್ಟಿನ್ ಮುಖದ ಪಾರ್ಶ್ವವಾಯು ಆಗಲು ಒಂದು ವೈರಸ್ ಕಾರಣ ಎಂದು ವಿವರಿಸಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೊವಿಡ್ ಕಾರಣದಿಂದ ಜಸ್ಟಿನ್ ಬೀಬರ್ ಅವರ ಹಲವು ಶೋ ರದ್ದಾಗಿದ್ದವು. ಆದರೀಗ ಮತ್ತೆ ಅನಾರೋಗ್ಯದ ಕಾರಣದಿಂದ ಸಂಗೀತ ಸಮಾರಂಭ ರದ್ದಾಗಿವೆ. ಅದಕ್ಕೆ ಮುಖದ ಪಾರ್ಶ್ವವಾಯು ಕಾರಣ ಎಂದು ಅವರು ಬಹಿರಂಗ ಪಡಿಸಿದ್ದಾರೆ. ವೈರಸ್ ಅವರ ಕಿವಿಯೊಳಗೆ ಹೋಗಿರುವುದರಿಂದ ಹಲವು ಸಮಸ್ಯೆಗಳು ಉಂಟಾಗಿವೆ. ಒಂದು ಕಡೆಗೆ ಕಣ್ಣನ್ನು ಮುಚ್ಚಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಕ್ಕರೆ ಒಂದು ಕಡೆಯ ತುಟಿಗಳು ಮಾತ್ರ ಸ್ಪಂದಿಸುತ್ತವೆ. ಪಾರ್ಶ್ವವಾಯು ಆಗಿರುವ ಭಾಗ ನಿಷ್ಕ್ರಿಯ ಆಗಿದೆ.
ಸಮೋಸಾ ಮಾರುವವನ ಮಗಳು Neha Kakkar ಬಾಲಿವುಡ್‌ನ ಟಾಪ್ ಸಿಂಗರ್ ಆಗಿದ್ದು ಹೇಗೆ
ಖ್ಯಾತ ಗಾಯಕ ಜಸ್ಟಿನ್ ಬೀಬರ್ ಅವರ ಈ ಪರಿಸ್ಥಿತಿ ಕಂಡು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಜಸ್ಟಿನ್ ಈ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 1.5 ಕೋಟಿಗೂ ಅಧಿಕ ಜನರು ನೋಡಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. ನಾವೆಲ್ಲರೂ ನಿಮಗಾಗಿ ಪ್ರಾರ್ಥಿಸುತ್ತೇನೆ, ಶೀಘ್ರಗುಣಮುಖರಾಗಿ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.
ಮೊದಲು ನಮ್ಮ ಹಾಡನ್ನು ಕದಿಯೋದನ್ನ ನಿಲ್ಲಿಸಿ; ಕರಣ್ ಜೋಹರ್‌ಗೆ ಪಾಕ್ ಗಾಯಕನಿಂದ ಖಡಕ್ ಎಚ್ಚರಿಕೆ
ಜಸ್ಟಿನ್ ಬೀಬರ್ ಅನೇಕ ಸೂಪರ್ ಹಿಟ್ ಇಂಗ್ಲಿಷ್ ಗೀತೆಗಳಿಗೆ ಧ್ವನಿ ನೀಡಿದ್ದಾರೆ. ಅವರ ಮ್ಯೂಸಿಕ್ ವಿಡಿಯೋಗಳಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಜಗತ್ತಿನ ಹಲವು ಕಡೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಆದರೀಗ ಅನಾರೋಗ್ಯದ ಕಾರಣ ಜಸ್ಟಿನ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗುತ್ತಿಲ್ಲ. ಮಾಮುಲಿ ಸ್ಥಿತಿಗೆ ಬರುವವರೆಗೂ ಸಂಗೀತ ಕಾರ್ಯಕ್ರಮ ನಡೆಸಿಕೊಡದಿರಲು ನಿರ್ಧರಿಸಿದ್ದಾರೆ. ಸದ್ಯ ಜಸ್ಟಿನ್ ಬೀಬರ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೇಗ ಗುಣಮುಖರಾಗಿ ಮತ್ತೆ ಹಾಡಲಿ, ಅಭಿಮಾನಿಗಳನ್ನು ರಂಜಿಸಲಿ ಎಂದು ಸಂಗೀತ ಪ್ರಿಯರು ಪ್ರಾರ್ಥಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.