‘ಜವಾನಿ ಜಾನೇಮನ್’ ಮುಂದಿನ ತಿಂಗಳು ರಿಲೀಸ್ ಆಗ್ತಿರೋ ಬಾಲಿವುಡ್ ಸಿನಿಮಾ. ಸೈಫ್ ಆಲಿಖಾನ್‌ಗೆ ಇದರಲ್ಲಿ ತಂದೆಯ ಪಾತ್ರ. ಅವರು ಆ ಪಾತ್ರದ ಬಗ್ಗೆ ಮಾತಾಡ್ತಿದ್ದ ಹಾಗೆ ವಿಷಯ ವೈಯುಕ್ತಿಕ ಬದುಕಿನತ್ತ ತಿರುಗಿತು.
ಆ ಗಳಿಗೆ ಏನಾಯ್ತೋ ಗೊತ್ತಿಲ್ಲ, ಸೈಫ್ ಬಹಳ ಭಾವುಕರಾದರು. ‘ಅಮೃತಾ ಜೊತೆಗಿನ ಡಿವೋರ್ಸ್ ವಿಷಯವನ್ನು ಮಕ್ಕಳಿಗೆ ಹೇಳಬೇಕಾದ ಕ್ಷಣ ನನ್ನ ಬದುಕಿನಲ್ಲೇ ಅತ್ಯಂತ ಕೆಟ್ಟದ್ದು. ಆ ಕ್ಷಣ ನನ್ನನ್ನು ಇನ್ನೂ ಕಾಡುತ್ತಲೇ ಇದೆ’ ಅಂದರು ಸೈಫ್.
ಅಯ್ಯೋ! ಫೋಟೋ ಕೇಳಿ ನಟಿಗೆ ಮುತ್ತಿಟ್ಟ ಅಭಿಮಾನಿ
‘ಕಂಫರ್ಟೇಬಲ್ ಆಗಿರುವ, ಮನಸ್ಸಿಗೆ ಸಮಾಧಾನ ಕೊಡುವ ವಾತಾವರಣ ಮನೆಯಲ್ಲಿರಬೇಕು. ತಂದೆ, ತಾಯಿ ಸದಾ ತನ್ನ ಜೊತೆಗಿರಬೇಕು.. ಅಂತೆಲ್ಲ ಮಕ್ಕಳ ಮನಸ್ಸು ಬಯಸುತ್ತೆ. ಆದರೆ ಈ ಕಾಲದಲ್ಲಿ ಎಷ್ಟೋ ಮಕ್ಕಳಿಗೆ ಅಂಥಾ ವಾತಾವರಣ ಸಿಗೋದೇ ಇಲ್ಲ. ನನ್ನ ಇಬ್ಬರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ತಂದೆ ಪ್ರೀತಿ ಕೊಡಲಾಗಲಿಲ್ಲ’ ಎನ್ನುವುದು ಸೈಫ್ ದುಃಖ.
ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ಸಾರಾ ಅಲಿ ಖಾನ್!
ಬೆಳೆಯೋ ಮಕ್ಕಳಿಗೆ ಬೇಕಾಗೋದು ಹಣ, ಅಂತಸ್ತು, ಸ್ಟೇಟಸ್‌ಗಳಲ್ಲ. ಬದಲಿಗೆ ಗಮನ, ಪ್ರೀತಿ ಮತ್ತು ಸುರಕ್ಷಿತ ಭಾವ ಅನ್ನೋದು ಸೈಫ್‌ಗೆ ಅರಿವಾಗುತ್ತಿದೆ. 21 ರ ಹರೆಯದಲ್ಲಿ ಮದುವೆಯಾದಾಗ ಇದ್ದ ಸೈಫ್ ಮನಸ್ಥಿತಿಗೂ, ಐವತ್ತರ ಈ ಹೊತ್ತಿನ ಅವರ ಯೋಚನೆಗಳಿಗೂ ಬಹಳ ವ್ಯತ್ಯಾಸವಿದೆ. ಆದರೆ ಅಂದು ಮಾಡಿದ ಒಂದು ತಪ್ಪು ಇಡೀ ಬದುಕಿಗೆ ಕೊರಗನ್ನು ಉಳಿಸಿ ಪಾಠ ಕಲಿಸಿದೆ. ಇದನ್ನು ಸ್ವತಃ ಅವರೇ ಹೇಳಿದ್ದಾರೆ.