
ನವದೆಹಲಿ[ಜ.23]: ಸರಣಿ ಸೂಪರ್‌ಹಿಟ್ ಚಿತ್ರಗಳನ್ನು ನೀಡುತ್ತಿರುವ ಖ್ಯಾತ ನಟ ಅಕ್ಷಯ್ ಕುಮಾರ್, ತಮ್ಮ ಮುಂದಿನ ಸಿನಿಮಾಕ್ಕೆ ಭರ್ಜರಿ 120 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಇದು ಖಚಿತವಾದಲ್ಲಿ, ಅಕ್ಷಯ್, ಭಾರತದಲ್ಲೇ ಅತ್ಯಂತ ದುಬಾರಿ ಸಂಭಾವನೆ ಪಡೆವ ನಂ.1 ನಟರಾಗಿ ಹೊರಹೊಮ್ಮಲಿದ್ದಾರೆ.
ತೀರಾ ಇತ್ತೀಚಿನವರೆಗೂ ಸೂಪರ್‌ಸ್ಟಾರ್ ರಜನೀಕಾಂತ್ ಚಿತ್ರವೊಂದಕ್ಕೆ 90 ಕೋಟಿ ರು.ವರೆಗೂ ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳಿದ್ದವು. ಅದರ ಬೆನ್ನಲ್ಲೇ ಇತ್ತೀಚೆಗೆ ಮತ್ತೋರ್ವ ತಮಿಳು ನಟ ವಿಜಯ್ 100 ಕೋಟಿ ರು. ಸಂಭಾವನೆ ಮೂಲಕ ಅತಿ ದುಬಾರಿ ನಟನಾಗಿ ಹೊರಹೊಮ್ಮಿದ್ದರು. ಅದರ ಬೆನ್ನಲ್ಲೇ ಅಕ್ಷಯ್ 120 ಕೋಟಿ ರು. ಪಡೆದ ಸುದ್ದಿ ಹೊರಬಿದ್ದಿದೆ.
ಪತ್ನಿಗೆ 'ದುಬಾರಿ' ಇಯರ್ ರಿಂಗ್ ಗಿಫ್ಟ್ ಕೊಟ್ಟ ಅಕ್ಷಯ್ ಕುಮಾರ್!
‘ತನು ವೆಡ್ಸ್ ಮನು’ ಸಿನಿಮಾ ಖ್ಯಾತಿಯ ಆನಂದ್ ಎಲ್. ರಾಯ್ ಅವರು ನಿರ್ದೇಶನ ಮಾಡಲಿರುವ ಈ ಸಿನಿಮಾಕ್ಕೆ ಈಗಾಗಲೇ ನಟ ಅಕ್ಷಯ್ ಈಗಾಗಲೇ ಸಹಿ ಹಾಕಿದ್ದು, ನಟಿ ಸಾರಾ ಅಲಿಖಾನ್, ಧನುಷ್ ಸೇರಿದಂತೆ ಇನ್ನಿತರ ಸ್ಟಾರ್ ನಟರು ಈ ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. 2019ರಲ್ಲಿ ಅಕ್ಷಯ್ ಅಭಿನಯದ ಸತತ 5 ಚಿತ್ರಗಳು ಗಳಿಕೆಯಲ್ಲಿ 100 ಕೋಟಿ ರು. ಗಡಿ ದಾಟಿವೆ. ಹೀಗಾಗಿ ಅಕ್ಷಯ್ ಅವರ ಹೆಸರೇ ಜನರನ್ನು ಚಲನಚಿತ್ರ ಮಂದಿರದತ್ತ ಸೆಳೆವ ಕಾರಣ, ಅವರಿಗೆ ಈ ದುಬಾರಿ ಸಂಭಾವನೆ ನೀಡಲು ನಿರ್ಮಾಪಕರೂ ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.