ನಟಿ ದೀಪಿಕಾ ಪಡುಕೋಣೆಗೆ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಅವಾರ್ಡ್ | ಪ್ರಶಸ್ತಿ ಸ್ವೀಕರಿಸಿ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ | ಡಿಪ್ರೆಶನ್ ಅನುಭವವನ್ನು ಹಂಚಿಕೊಳ್ಳುತ್ತಾ ಭಾವುಕರಾಗಿದ್ದಾರೆ
ಮುಂಬೈ (ಜ. 21): ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸುಮಾರು 2.2 ಲಕ್ಷ ರು. ಮೌಲ್ಯದ ಉಡುಪು ಧರಿಸಿ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶೃಂಗದ ಮೊದಲ ದಿನದ ಕ್ರಿಸ್ಟಲ್ ಅವಾರ್ಡ್ ಸಮಾರಂಭದ ವೇಳೆ ಆಸ್ಪ್ರೇಲಿಯಾದ ಅತ್ಯುತ್ಕೃಷ್ಟ ಅಲೆಕ್ಸ್ ಪೆರ್ರಿ ಬ್ರ್ಯಾಂಡಿನ ನೀಲಿ ಬಣ್ಣದ ಗೌನ್‌ನಲ್ಲಿ ದೀಪಿಕಾ ಕಂಗೊಳಿಸಿದ್ದಾರೆ.
ಈ ಫೋಟೋವನ್ನು ದೀಪಿಕಾ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೀಪಿಕಾ, ‘ಜನರು ಖಿನ್ನತೆ ಮತ್ತು ಉದ್ವೇಗವನ್ನು ಇತರ ಕಾಯಿಲೆಗಳ ರೀತಿಯಲ್ಲೇ ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಹಿಂದೊಮ್ಮೆ ನಾನು ಖಿನ್ನತೆ ಮತ್ತು ಮಾನಸಿಕ ಕಾಯಿಲೆಗೆ ತುತ್ತಾಗಿದ್ದೆ. ನನ್ನ ಸ್ವಂತ ಅನುಭವ ಈ ನಿಟ್ಟಿನಲ್ಲಿ ಕೆಲಸ ಮಾಡಲು ನನಗೆ ಪ್ರೇರಣೆ ಆಗಿದೆ. ಒಂದು ವೇಳೆ ನಾನು ಖಿನ್ನತೆಯಿಂದ ಹೊರಬರದೇ ಹೋಗಿದ್ದರೆ ಆತ್ಮಹತ್ಯೆಗೆ ಶರಣಾಗುವ ಸಂದರ್ಭ ಬರುತ್ತಿತ್ತು. ಆದರೆ, ನಾನು ಅದೆಲ್ಲವನ್ನೂ ದಾಟಿ ನಿಮ್ಮ ಮುಂದೆ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಮಾನಸಿಕ ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸುವ ಸಾಮಾಜಿಕ ಕೆಲಸಕ್ಕಾಗಿ ನಟಿ ದೀಪಿಕಾ ಪಡುಕೋಣೆ ವಿಶ್ವ ಆರ್ಥಿಕ ವೇದಿಕೆ (World Economic Forum) ಯಿಂದ ಕ್ರಿಸ್ಟಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ.
ದೀಪಿಕಾ ಪಡುಕೋಣೆಗೆ ಕ್ರಿಸ್ಟಲ್ ಪ್ರಶಸ್ತಿ ಗರಿ!
ಪ್ರಶಸ್ತಿ ಸ್ವೀಕರಿಸಿ, ಡಿಪ್ರೆಶನ್ ಹಾಗೂ ಆತಂಕವನ್ನು ಎದುರಿಸಿ ಅದರಿಂದ ತಾವು ಹೊರ ಬಂದಿದ್ದು ಹೇಗೆ ಎಂದು ಮಾತನಾಡಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ತಮ್ಮ ಹೋರಾಟ ಹೇಗೆ ಪೂರಕವಾಯಿತು ಎಂಬುದನ್ನು ಹೇಳಿಕೊಂಡಿದ್ದಾರೆ.
[Video] Deepika Padukone's acceptance speech at the Crystal Aawards, World Economic Forum 2020👏🏽❤️ pic.twitter.com/xMoQx5S7lu
— Deepika Padukone FC (@DeepikaPFC)'ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುವ ವೇಳೆ ಜಗತ್ತು ಆತ್ಮಹತ್ಯೆಯಿಂದಾಗಿ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಿರುತ್ತದೆ. ಬೇರೆ ಎಲ್ಲಾ ಕಾಯಿಲೆಗಳಂತೆ ಡಿಪ್ರೆಶನ್ ಕೂಡಾ ಒಂದು ಸಾಮಾನ್ಯ ಕಾಯಿಲೆ. ಇದನ್ನು ಗುಣಪಡಿಸಬಹುದು. ಆದರೆ ಇದನ್ನು ಮುಚ್ಚಿಡದೇ ಒಪ್ಪಿಕೊಳ್ಳಬೇಕು. ನಾನು ಕೂಡಾ ಡಿಪ್ರೆಶನ್‌ನಿಂದ ಬಳಲುತ್ತಿದ್ದೆ. ನನ್ನ ಅನುಭವವೇ live love life ಎನ್ನುವ ಫೌಂಡೇಶನ್ ಶುರು ಮಾಡಲು ಪ್ರೇರಣೆಯಾಯ್ತು' ಎಂದಿದ್ದಾರೆ.
[Video-Part 2] Deepika Padukone's acceptance speech at the Crystal Aawards, World Economic Forum 2020👏🏽❤️ pic.twitter.com/GFcb01u1io
— Deepika Padukone FC (@DeepikaPFC)[Video-Part 3] Deepika Padukone's acceptance speech at the Crystal Aawards, World Economic Forum 2020👏🏽❤️ pic.twitter.com/lTGFenqJkB
— Deepika Padukone FC (@DeepikaPFC)'ನನ್ನ ಅನುಭವ ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಡಿಪ್ರೆಶನ್‌ನಿಂದ ಬಳಲುತ್ತಿರುವವರಿಗೆಲ್ಲಾ ಒಂದು ಮಾತು ಹೇಳಲು ಬಯಸುತ್ತೇನೆ. ನೀವ್ಯಾರೂ ಒಂಟಿಯಲ್ಲ. ನಿಮ್ಮ ಜೊತೆ ಜಗತ್ತಿದೆ' ಎಂದು ಭಾಷಣ ಮುಗಿಸಿದರು.