
ಪಕ್ಕಾ ಪಂಜಾಬಿ ಹುಡ್ಗಿ. ಜೀವನದಲ್ಲಿ ಸಾಧನೆ ಮಾಡಬೇಕೆಂದು ಮಾಡಲಿಂಗ್ ಲೋಕಕ್ಕೆ ಕಾಲಿಟ್ಟ ಬೆಡಗಿ ಜೀವನ ಕಟ್ಟಿ ಕೊಂಡಿದ್ದು ಚಿತ್ರರಂಗದಲ್ಲಿ. ಸ್ಟ್ರಿಕ್ಟ್ ಆರ್ಮಿ ಫ್ಯಾಮಿಲಿಗೆ ಸೇರುವ ರಕುಲ್ ಪ್ರೀತ್ ಚಿಕ್ಕ ವಯಸ್ಸಿನಲ್ಲಿಯೇ ಆರ್ಥಿಕವಾಗಿ ಸ್ವತಂತ್ರವಾಗಿರಬೇಕೆಂದು ಬಯಸಿದವರು. ಕಾಲೇಜಿನಲ್ಲಿದಾಗಲೇ 'ಗಲ್ಲಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು.
ಜಗ್ಗೇಶ್ ಪುತ್ರ ಯತಿರಾಜ್‌ಗೆ ಜೋಡಿಯಾಗಿ ಕಾಣಿಸಿಕೊಂಡ ನಂತರ ಬಾಲಿವುಡ್ ರಕುಲ್‌ಗೆ ಕೈ ಬೀಸಿ ಕರೆಯಿತು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ರಕುಲ್ ತಮ್ಮ ಪ್ರತಿ ಫೋಟೋ ಶೂಟ್‌ಗಳನ್ನೂ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.
ಪಾಪ ರಾಕುಲ್ ಪ್ರೀತ್, ಹೆಜ್ಜೆ ಹಾಕುವಾಗ ಶರ್ಟ್ ಬಟನ್ ಓಪನ್.. ಗೊತ್ತೆ ಆಗ್ಲಿಲ್ಲ!
ಇತ್ತೀಚಿಗೆ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವ ಕಾರಣ ರಕೂಲ್ ಟ್ರೋಲಿಗರಿಗೆ ಆಹಾರವಾಗಿದ್ದಾರೆ. 'ಏನ್ ಮೇಡಂ ಎಲ್ಲಾ ಫೋಟೋಗಳಲ್ಲಿಯೂ ನಿಮ್ಮ ಎದೆನೇ ಹೈಲೈಟ್ ಆಗುತ್ತಿದೆ' ಎಂದು ಕಾಮೆಂಟ್ ಮಾಡಿದ ನೆಟ್ಟಿಗರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಜಂಕ್ ಫುಡ್‌ಗೆ ನೋ - ಫಿಟ್ ನೆಸ್‌ಗೆ ಎಸ್ : ರಾಕುಲ್
'ಹುಡುಗಿ ಬಗ್ಗೆ ಕಾಮೆಂಟ್ ಮಾಡುವ ಮುನ್ನ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ನೆನಪಿಸಿಕೊಳ್ಳಿ. ಅವರ ಮನಸ್ಸಿನ ಮೇಲಾಗುವ ಪರಿಣಾಮದ ಬಗ್ಗೆ ಚಿಂತಿಸಿ. ಆಗಲಾದರೂ ನಿಮಗೆ ತಿಳಿಯುತ್ತದೆ ' ಎಂದು ತಿರುಗಿ ಬಿದ್ದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.