
‘ನನ್ನ ಸಿನಿಮಾ ಕೆರಿಯರ್‌ಗೂ ವಯಕ್ತಿಕ ಬದುಕಿಗೂ ತುಂಬಾ ಅಂತರ ಇದೆ. ನನ್ನ ಪಾಲಿಗೆ ಇವೆರಡೂ ಬೇರೆ ಬೇರೆ’ ಎನ್ನುವ ಸೈಫ್ ಸಿನಿಮಾ ಆಯ್ಕೆಯಲ್ಲಿಯೂ ಜಾಣರು.
ಈಗ ಇದನ್ನೆಲ್ಲಾ ಹೇಳುವುದಕ್ಕೆ ಕಾರಣವೊಂದಿದೆ. ಅದು ಮಗಳು ಸಾರಾ ಅಲಿ ಖಾನ್ ಜೊತೆಗೆ ಹೊಸ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವುದು. ಸ್ಟಾರ್‌ಗಳು ತಮ್ಮ ಮಕ್ಕಳೊಂದಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಾರೆ ಎಂದರೆ ಸಾಕಷ್ಟುನಿರೀಕ್ಷೆ ಇರುತ್ತದೆ. ಈ ನಿರೀಕ್ಷೆಯೇ ಒಂದು ಹಂತಕ್ಕೆ ಚಿತ್ರಕ್ಕೆ ಯಶಸ್ಸನ್ನೂ ತಂದುಕೊಡಬಲ್ಲದು. ಇದೆಲ್ಲವನ್ನೂ ತಿಳಿದ ಕೆಲವು ಮಂದಿ ಸೈಫ್ ಅಲಿ ಖಾನ್ ಜೊತೆಗೆ ಮಗಳು ಸಾರಾ ಅಲಿ ಖಾನ್‌ರನ್ನು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇದಕ್ಕೆ ಸೈಫ್ ಸುಲಭಕ್ಕೆ ಒಪ್ಪಿಲ್ಲ. ಒಪ್ಪಿದರೂ ಅದಕ್ಕೆ ಒಂದಷ್ಟುಕಂಡೀಷನ್ ಅಪ್ಲೈ ಎಂದಿದ್ದಾರೆ.
ಇದ್ದರೆ ಅಮ್ಮ- ಮಗಳು ಕರೀನಾ- ಸಾರಾ ರೀತಿ ಇರಬೇಕಪ್ಪ!
ತಾವು ಮತ್ತು ಮಗಳು ಸರಾ ಒಟ್ಟಿಗೆ ಸಿನಿಮಾ ಮಾಡಬೇಕು ಎಂದರೆ ಮೊದಲಿಗೆ ಅತ್ಯುತ್ತಮವಾದ ಸ್ಕಿ್ರಪ್ಟ್ ಮತ್ತು ಅನುಭವಿ ಡೈರೆಕ್ಟರ್ ಸಿಕ್ಕಬೇಕು. ನನ್ನ ಪಾತ್ರವನ್ನು ನಾನು ಮತ್ತು ಅವಳ ಪಾತ್ರವನ್ನು ಅವಳು ಒಪ್ಪಬೇಕು. ಜೊತೆಗೆ ಸಿನಿಮಾದಲ್ಲಿ ಯಾವುದೇ ಗಿಮಿಕ್‌ಗಳು ಇರಬಾರದು. ಹಾಗಿದ್ದರೆ ನಾನು ಮಗಳು ಸರಾ ಜೊತೆಗೆ ನಟಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದೆಲ್ಲಾ ಸಾಧ್ಯವಾದರೆ ಸೈಫ್ ಅಲಿ ಖಾನ್ ಮತ್ತು ಸಾರಾ ಅಲಿ ಖಾನ್‌ರನ್ನು ಒಟ್ಟಿಗೆ ಸಿನಿಮಾದಲ್ಲಿ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.