ಕಾಂಟ್ರೋವರ್ಸಿ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೀಗ ಸಿನಿಮಾ ಅಥವಾ ಹಾಟ್ ವಿಡಿಯೋ ವಿಚಾರಲ್ಲಿ ಅಲ್ಲ, ಬದಲಾಗಿ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ವಿರುದ್ಧ ದೂರಿನ ವಿಚಾರದಲ್ಲಿ. ಏನಿದು ಕಿರಿಕ್?
ಉದ್ಯಮಿ ರಾಜ್ ಕುಂದ್ರಾ ಒಡೆತನದ 'Armsprime media'ಕಂಪನಿ 2019 ರಲ್ಲಿ ಪೂನಂ ಹೆಸರಿನಲ್ಲಿ ಆ್ಯಪ್ ತೆರೆದು ಅದರಿಂದ ಬರುವ ಆದಾಯದಲ್ಲಿ ಒಂದು ಭಾಗವನ್ನು ಪೂನಂಗೆ ನೀಡುವುದಾಗಿ ಒಪ್ಪಂದ ಮಾಡಿಕೊಳ್ಳುತ್ತದೆ. ಕೆಲ ಸಮಯ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಬರುವ ಆದಾಯದಲ್ಲಿ ಏನೋ ಮೋಸವಿದೆ ಎಂದು ಪೂನಂ ಕೆಲ ತಿಂಗಳುಗಳ ಹಿಂದೆ ಒಪ್ಪಂದದಿಂದ ಹೊರ ಬಂದಿದ್ದಾರೆ.
ಇಂಟರ್ನೆಟ್ ಸೆನ್ಸೇಷನ್ ಪೂನಂ ಪಾಂಡೆ ಫೋಟೋ ಗ್ಯಾಲರಿ
ಇದರಿಂದ ಪೂನಂ ಖಾಸಗಿ ಮೊಬೈಲ್ ನಂಬರ್‌ಗೆ ಅಪರಿಚಿತರಿಂದ ಕರೆ ಬರುತ್ತಿದೆಯಂತೆ. ಇದರಿಂದ ಮನನೊಂದ ಪೂನಂ ಮೂರು ತಿಂಗಳುಗಳ ಕಾಲ ವಿದೇಶ ಪ್ರವಾಸ ಮಾಡಿದ್ದರು. ಆದರೂ ಅಪರಿಚಿತರಿಂದ ತೊಂದರೆ ಕಡಿಮೆ ಆಗಿಲ್ಲ ಎಂದು ಹೇಳುತ್ತಾರೆ.
ಮಾತು ಉಳಿಸಿಕೊಂಡ ಪೂನಂ ಪೇಜ್ ನಲ್ಲಿ ಇದೆಂಥಾ ವಿಡಿಯೋ!
ಒಪ್ಪಂದದ ಪ್ರಕಾರ ಮೊಬೈಲ್ ನಂಬರನ್ನು ಎಲ್ಲಿಯೂ ರಿವೀಲ್ ಮಾಡುವಂತಿರಲಿಲ್ಲ ಆದರೆ Armsprime media ಮಾಲೀಕರಾದ ರಾಜ್ ಕುಂದ್ರಾ ಹಾಗೂ ಸೌರಭ್ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ದೂರು ನೀಡಿದರೆ ಪೊಲೀಸರು ನಿರಾಕರಿಸುತ್ತಿದ್ದಾರೆ ಎಂದು ಪೂನಂ ಆರೋಪಿಸಿದ್ದಾರೆ. ಅನಾಮಿಕ ಕರೆಗಳಿಂದ ಬೇಸತ್ತ ಪೂನಂ ಹೈ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಫೆಬ್ರವರಿ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ