
ಮುಂಬೈ (ಫೆ. 08): ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ 'ತಲೈವಿ' ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಜಯಲಲಿತಾ ರೀತಿ ಕಾಣಿಸಿಕೊಳ್ಳಲು ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಭರತನಾಟ್ಯ ಕಲಿತುಕೊಂಡಿದ್ದಾರೆ. ಇದೀಗ ಚಿತ್ರಕ್ಕಾಗಿ 8-10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.
ಕಂಗನಾಗೆ ಇದೆಂಥಾ ಗತಿ! ರೈಲ್ವೇ ಟಿಕೆಟ್ ಹಂಚುವ ಕೆಲಸ ಶುರು ಮಾಡಿದ್ರಾ 'ಕ್ವೀನ್'?
ಕಂಗನಾ ತೂಕ ಹೆಚ್ಚಿಸಿಕೊಂಡಿರುವ ಬಗ್ಗೆ ಸಹೋದರಿ ರಂಗೋಲಿ ಟ್ವೀಟ್ ಮಾಡಿದ್ದಾರೆ.
'ಕಂಗನಾ 'ತನು ವೆಡ್ಸ್ ಗೀತಾ' ಸಿನಿಮಾ ಮಾಡುವಾಗ ಬೈಕ್ ಅಪಘಾತ ಆಗಿ ಕಾಲಿಗೆ 52 ಹೊಲಿಗೆಗಳನ್ನು ಹಾಕಲಾಗಿತ್ತು. 'ಮಣಿಕರ್ಣಿಕಾ' ಮಾಡುವಾಗ ಭಾರವಾದ ಖಡ್ಗ ಹಣೆಗೆ ತಾಗಿ 15 ಹೊಲಿಗೆಗಳನ್ನು ಹಾಕಲಾಗಿತ್ತು. ಇದೀಗ ಮತ್ತೆ ತಲೈವಿ ಸಿನಿಮಾಗಾಗಿ ಆರೋಗ್ಯವನ್ನು ಒತ್ತೆ ಇಟ್ಟಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
'ತಲೈವಿ'ಯಲ್ಲಿ ಕಾಂಟ್ರೋವರ್ಸಿ ಹುಟ್ಟು ಹಾಕಲಿದ್ದಾರಾ ವಿಜಯ ದೇವರಕೊಂಡ?
'ತಲೈವಿ' ಸಿನಿಮಾ ಕಂಗನಾರ ಬಹುನಿರೀಕ್ಷಿತ ಚಿತ್ರ. 'ತಲೈವಿ' ಪಾತ್ರಕ್ಕಾಗಿ ತಮಿಳನ್ನು ಕಲಿತುಕೊಂಡಿದ್ದಾರೆ. ಜೊತೆಗೆ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಪಾತ್ರಕ್ಕೆ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ.
ತೆಲುಗು ನಟ ಶೋಭನ್ ಬಾಬುಡಿಗೂ ಜಯಲಲಿತಾಗೂ ಸಂಬಂಧವಿದೆ ಎನ್ನಲಾಗಿತ್ತು. ಇವರಿಬ್ಬರಿಗೂ ಮದುವೆಯೂ ಆಗಿತ್ತು ಎನ್ನಲಾಗಿದೆ. ಆದರೆ ಕಾರಣಾಂತರಗಳಿಂದ ಬೇರೆ ಬೇರೆಯಾಗಿದ್ದಾರೆ ಎನ್ನಲಾಗಿದೆ. ಇದೀಗ ಶೋಭನ್ ಆಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ.
'ರೋಜಾ' ಖ್ಯಾತಿಯ ಅರವಿಂದ ಸ್ವಾಮಿ ಎಂಜಿಆರ್ ನಟಿಸಿದರೆ, ಕರುಣಾನಿಧಿ ಪ್ರಕಾಶ್ ರಾಜ್ ಆಗಿ ನಟಿಸಲಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.